Asianet Suvarna News Asianet Suvarna News

ಆಪ್ಘಾನಿಸ್ತಾನ ನಾಯಕ ಅಸ್ಗರ್ ಅಫ್ಘಾನ್ 2ನೇ ಬಾರಿಗೆ ತಲೆದಂಡ..!

* ಅಸ್ಗರ್ ಅಪ್ಘಾನ್‌ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ ಎಸಿಬಿ

* ಎರಡನೇ ಬಾರಿಗೆ ನಾಯಕತ್ವದ ಅಸ್ಗರ್ ತಲೆತಂಡ

* 2019ರ ವಿಶ್ವಕಪ್‌ ಟೂರ್ನಿಗೂ ಮುನ್ನ ಅಸ್ಗರ್ ತಲೆದಂಡವಾಗಿತ್ತು.

ACB removed Asghar Afghan as Afghanistan Cricket captain kvn
Author
Kabul, First Published Jun 1, 2021, 1:23 PM IST

ಕಾಬೂಲ್‌(ಜೂ.01): ಆಪ್ಘಾನಿಸ್ತಾನ ಕ್ರಿಕೆಟ್ ಮಂಡಳಿ(ಎಸಿಬಿ)ಯು ಎರಡನೇ ಬಾರಿಗೆ ಅಸ್ಗರ್ ಅಫ್ಘಾನ್‌ ಅವರನ್ನು ಆಪ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿದೆ.

ಆಪ್ಘಾನ್‌ ಕ್ರಿಕೆಟ್‌ ಮಂಡಳಿಯ ಸದಸ್ಯರೊಬ್ಬರ ಮಾಹಿತಿಯ ಪ್ರಕಾರ ಅಸ್ಗರ್‌ ಅವರ ಬದಲಿಗೆ ಹಸ್ಮತುಲ್ಲಾ ಶಾಹಿದಿ ಅವರಿಗೆ ಆಪ್ಘಾನಿಸ್ತಾನ ಟೆಸ್ಟ್ ಹಾಗೂ ಏಕದಿನ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿದೆ. ಇದೇ ವೇಳೆ ರೆಹಮತ್ ಶಾ ಎರಡು ಮಾದರಿಯ ಕ್ರಿಕೆಟ್‌ ತಂಡಕ್ಕೆ ಉಪನಾಯಕನಾಗಿ ಮುಂದುವರೆಯಲಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಟಿ20 ತಂಡದ ಉಪನಾಯಕರಾಗಿ ರಶೀದ್‌ ಖಾನ್‌ ಮುಂದುವರೆಯಲಿದ್ದಾರೆ. ಆದರೆ ಟಿ20 ತಂಡದ ನಾಯಕ ಯಾರಾಗಬೇಕು ಎನ್ನುವ ತೀರ್ಮಾನವನ್ನು ಸದ್ಯದಲ್ಲಿಯೇ ತೆಗೆದುಕೊಳ್ಳಲಾಗುವುದು ಎಸಿಬಿ ಮೂಲಗಳು ತಿಳಿಸಿವೆ.

ಆಫ್ಘನ್‌ನಲ್ಲಿ ಚೊಚ್ಚಲ ಅಂತಾರಾಷ್ಟ್ರೀಯ ಕ್ರೀಡಾಂಗಣಕ್ಕೆ ಭೂಮಿ ಮಂಜೂರು

ಮಾರ್ಚ್‌ನಲ್ಲಿ ದುಬೈನಲ್ಲಿ ಜಿಂಬಾಬ್ವೆ ವಿರುದ್ದದ ಟೆಸ್ಟ್‌ ಪಂದ್ಯದಲ್ಲಿ ಆಫ್ಘಾನಿಸ್ತಾನ ಸೋಲಿಗೆ ನಾಯಕ ಅಸ್ಗರ್ ತೆಗೆದುಕೊಂಡ ಕೆಲವೊಂದು ತೀರ್ಮಾನಗಳು ಕಾರಣ ಎನ್ನುವ ಬೆಳಕಿಗೆ ಬರುತ್ತಿದ್ದಂತೆಯೇ ಆಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಈ ದಿಟ್ಟ ತೀರ್ಮಾನವನ್ನು ತೆಗೆದುಕೊಂಡಿದೆ.

2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ ಅಸ್ಗರ್ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಗುಲ್ಬದ್ದೀನ್ ನೈಬ್‌ಗೆ ಆಫ್ಘಾನ್ ತಂಡದ ನಾಯಕತ್ವ ಪಟ್ಟ ಕಟ್ಟಲಾಗಿತ್ತು. ಈ ನಿರ್ಧಾರ ಆಪ್ಘಾನ್‌ ಕ್ರಿಕೆಟ್‌ ಮಂಡಳಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತ್ತು. ಇದಾದ ಬಳಿಕ ನೈಬ್ ಅವರನ್ನು ಕೆಳಗಿಳಿಸಿ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್‌ಗೆ ನಾಯಕತ್ವ ಪಟ್ಟ ಕಟ್ಟಲಾಯಿತು. ಇದಾಗಿ ಕೆಲ ತಿಂಗಳಲ್ಲೇ ಅಂದರೆ 2019ರ ಡಿಸೆಂಬರ್‌ನಲ್ಲಿ ಮತ್ತೆ ಅಸ್ಗರ್ ಆಪ್ಘಾನ್‌ ಅವರನ್ನು ನಾಯಕನಾಗಿ ಮರು ಆಯ್ಕೆ ಮಾಡಲಾಗಿತ್ತು.
 

Follow Us:
Download App:
  • android
  • ios