ಕೋಲ್ಕತಾ ನೈಟ್ ರೈಡರ್ಸ್ ಎದುರು ಗೆದ್ದು ಬೀಗಿದ ರಾಜಸ್ಥಾನ ರಾಯಲ್ಸ್ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಯಶಸ್ವಿ ಜೈಸ್ವಾಲ್ಜೈಸ್ವಾಲ್ ಶತಕ ತಪ್ಪಿಸಲು ಕುತಂತ್ರ ಯತ್ನ ನಡೆಸಿದ ಸುಯಾಶ್ ಶರ್ಮಾ

ಕೋಲ್ಕತಾ(ಮೇ.12): ರಾಜಸ್ಥಾನ ರಾಯಲ್ಸ್ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ವೈಭವಕ್ಕೆ ಕೋಲ್ಕತಾದ ಈಡನ್‌ ಗಾರ್ಡನ್ಸ್‌ ಮೈದಾನ ಸಾಕ್ಷಿಯಾಗಿದೆ. ಮೇ.11ರಂದು ಕೋಲ್ಕತಾ ನೈಟ್ ರೈಡರ್ಸ್ ಎದುರಿನ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಅನಾಯಾಸದ ಗೆಲುವು ದಾಖಲಿಸಿದೆ. ಇನ್ನು ಈ ಪಂದ್ಯದಲ್ಲಿ ಕೆಕೆಆರ್ ಯುವ ಬೌಲರ್ ಸುಯಾಶ್ ಶರ್ಮಾ, ವೈಡ್ ಎಸೆಯುವ ಪ್ರಯತ್ನ ಮಾಡುವ ಮೂಲಕ ಯಶಸ್ವಿ ಜೈಸ್ವಾಲ್ ಶತಕ ತಪ್ಪಿಸುವ ರೀತಿಯಲ್ಲಿ ಬೌಲಿಂಗ್ ಮಾಡಿದ್ದರ ಬಗ್ಗೆ ಟೀಂ ಇಂಡಿಯಾ ಮಾಜಿ ಆರಂಭಿಕ ಬ್ಯಾಟರ್ ಆಕಾಶ್‌ ಚೋಪ್ರಾ ಕಟು ಶಬ್ದಗಳಿಂದ ಟೀಕಿಸಿದ್ದಾರೆ.

13ನೇ ಓವರ್‌ನಲ್ಲಿ ಯಶಸ್ವಿ ಜೈಸ್ವಾಲ್‌ ಅಜೇಯ 94 ರನ್ ಬಾರಿಸಿ ನಾನ್‌ ಸ್ಟ್ರೈಕ್‌ನಲ್ಲಿದ್ದರು. 13ನೇ ಓವರ್‌ನ ಕೊನೆಯ ಎಸೆತಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್‌ ಗೆಲ್ಲಲು ಕೇವಲ 3 ರನ್ ಅಗತ್ಯವಿತ್ತು. ಈ ಸಂದರ್ಭದಲ್ಲಿ ಸ್ಟ್ರೈಕ್‌ನಲ್ಲಿದ್ದ ನಾಯಕ ಸಂಜು ಸ್ಯಾಮ್ಸನ್‌ ಕೂಡಾ ಉತ್ತಮವಾಗಿ ರನ್ ಗಳಿಸುತ್ತಾ ಇದ್ದರು. 13ನೇ ಓವರ್‌ನ ಕೊನೆಯ ಎಸೆತವನ್ನು ಸುಯಾಶ್ ಶರ್ಮಾ ಲೆಗ್‌ಸೈಡ್‌ನತ್ತ ಬೌಲಿಂಗ್ ಮಾಡುವ ಮೂಲಕ ವೈಡ್ ಎಸೆಯುವ ಯತ್ನ ನಡೆಸಿದರು. ಆದರೆ ನಾಯಕ ಸಂಜು ಸ್ಯಾಮ್ಸನ್‌, ಅದನ್ನು ರಕ್ಷಣಾತ್ಮಕವಾಗಿ ಆಡುವ ಮೂಲಕ ಯಾವುದೇ ರನ್‌ ಗಳಿಸಲಿಲ್ಲ. ಒಂದು ವೇಳೆ ಅದು ವೈಡ್ ಆಗಿ, ಚೆಂಡು ಬೌಂಡರಿ ಗೆರೆ ದಾಟಿದ್ದರೇ ಅದೇ ಓವರ್‌ನಲ್ಲಿ ಪಂದ್ಯ ಮುಗಿದು ಹೋಗುವ ಸಾಧ್ಯತೆಯಿತ್ತು. 

ಆ ಓವರ್‌ ಮುಕ್ತಾಯದ ಬಳಿಕ, ಸುಯಾಶ್ ಶರ್ಮಾ ಹುಸಿನಗೆ ಬೀರಿದರು. ಇನ್ನು ಮತ್ತೊಂದು ತುದಿಯಲ್ಲಿದ್ದ ಸಂಜು ಸ್ಯಾಮ್ಸನ್‌, ಯಶಸ್ವಿ ಜೈಸ್ವಾಲ್‌, ಸಿಕ್ಸರ್ ಬಾರಿಸಿ ಪಂದ್ಯ ಮುಗಿಸುವಂತೆ ಸೂಚನೆ ನೀಡಿದರು. ಆದರೆ 14ನೇ ಓವರ್‌ನ ಮೊದಲ ಎಸೆತದಲ್ಲಿ ಜೈಸ್ವಾಲ್ ಬೌಂಡರಿ ಬಾರಿಸಿದರಾದರೂ, ಎರಡನೇ ಬಾರಿಗೆ ಟೂರ್ನಿಯಲ್ಲಿ ಶತಕ ಸಿಡಿಸುವ ಅವಕಾಶದಿಂದ ಕೇವಲ 2 ರನ್‌ನಿಂದ ವಂಚಿತರಾದರು. ಕೆಕೆಆರ್ ನೀಡಿದ್ದ 150 ರನ್‌ಗಳ ಗುರಿಯನ್ನು ರಾಜಸ್ಥಾನ ರಾಯಲ್ಸ್ ತಂಡವು ಕೇವಲ 13.1 ಓವರ್‌ಗಳಲ್ಲಿ ಗುರಿ ತಲುಪಿ ಜಯದ ಕೇಕೆ ಹಾಕಿತು.

IPL 2023 ಅತೀವೇಗದ ಅರ್ಧಶತಕ, ಅಜೇಯ 98 ರನ್, ಜೈಸ್ವಾಲ್ ದಾಖಲೆಗೆ ಕೆಕೆಆರ್ ಉಡೀಸ್!

"ಯಶಸ್ವಿ ಜೈಸ್ವಾಲ್ ಅವರ ಶತಕ ಸಿಡಿಸುವುದನ್ನು ತಡೆಯಲು ವೈಡ್ ಬಾಲ್ ಹಾಕಲು ಪ್ರಯತ್ನಿಸಿದ್ದು ನಿಜಕ್ಕೂ ಕೀಳು ಅಭಿರುಚಿಯಾಗಿದೆ ಎಂದು ಆಕಾಶ್‌ ಚೋಪ್ರಾ ಟ್ವೀಟ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.

Scroll to load tweet…

ಆಕಾಶ್ ಚೋಪ್ರಾ ಮಾಡಿದ್ದ ಈ ಟ್ವೀಟ್‌ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು. ಇದನ್ನು ಗಮನಿಸಿ ಮತ್ತೊಂದು ಟ್ವೀಟ್ ಮಾಡಿದ ಚೋಪ್ರಾ, "ವಿರಾಟ್ ಕೊಹ್ಲಿ ಶತಕದ ಹೊಸ್ತಿಲಲ್ಲಿ ಇದ್ದಾಗ ಪಾಕಿಸ್ತಾನ ಬೌಲರ್ ಹೀಗೆ ಮಾಡಿದರೆ ಎನ್ನುವುದನ್ನೊಮ್ಮೆ ಊಹಿಸಿಕೊಳ್ಳಿ. ಇದನ್ನು ಸಮರ್ಥಿಸಿಕೊಳ್ಳುವವರಿದ್ದೀರಲ್ಲಾ ಎಂಥ ಜನರಿದ್ದೀರಾ ಎಂದು ಆಕಾಶ್ ಚೋಪ್ರಾ ತಮ್ಮ ಅಸಮಾಧಾನ ಹೊರಹಾಕಿದ್ದಾರೆ

Scroll to load tweet…

ಕೋಲ್ಕತಾ ನೈಟ್ ರೈಡರ್ಸ್ ನೀಡಿದ್ದ 150 ರನ್‌ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ಸ್ಪೋಟಕ ಆರಂಭವನ್ನೇ ಪಡೆಯಿತು. ಯಶಸ್ವಿ ಜೈಸ್ವಾಲ್ ಕೇವಲ 13 ಎಸೆತಗಳಲ್ಲಿ ಅರ್ಧಶತಕ ಸಿಡಿಸುವ ಮೂಲಕ ಐಪಿಎಲ್ ಇತಿಹಾಸದಲ್ಲೇ ಅತಿವೇಗದ ಅರ್ಧಶತಕ ಸಿಡಿಸಿದ ಬ್ಯಾಟರ್ ಎನ್ನುವ ದಾಖಲೆ ಬರೆದರು. ಈ ಮೊದಲು ಕೆ ಎಲ್ ರಾಹುಲ್ ಹಾಗೂ ಪ್ಯಾಟ್ ಕಮಿನ್ಸ್‌ 14 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ್ದರು. ಅಂತಿಮವಾಗಿ ಯಶಸ್ವಿ ಜೈಸ್ವಾಲ್, 47 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 98 ರನ್ ಬಾರಿಸಿದರೆ, ನಾಯಕ ಸಂಜು ಸ್ಯಾಮ್ಸನ್, 29 ಎಸೆತಗಳನ್ನು ಎದುರಿಸಿ 2 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 48 ರನ್ ಬಾರಿಸಿ ಅಜೇಯರಾಗುಳಿದರು.