ನಮ್ಮ ರಾಜ್ಯದಲ್ಲಿ ಪ್ರತಿಭೆ ಬೆಳೆಯಲು ಬಿಡಲ್ಲ, ಇದ್ರಿಂದಲೇ ವಲಸೆ ಹೋಗುತ್ತಿದ್ದಾರೆ : ರಾಬಿನ್ ಉತ್ತಪ್ಪ ಅಸಮಾಧಾನ
2002-03ರಲ್ಲಿ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದ್ದ ಉತ್ತಪ್ಪ 15 ವರ್ಷಗಳ ಕಾಲ ಕರ್ನಾಟಕ ಪರ ಆಡಿದ್ದರು. 2017ರಲ್ಲಿ ರಾಜ್ಯ ತೊರೆದು ಬಳಿಕ ಕೇರಳ ತಂಡ ಸೇರ್ಪಡೆಗೊಂಡಿದ್ದರು.
ನವದೆಹಲಿ(ನ.03): ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ)ಯಲ್ಲಿ ದುರಾಡಳಿತವಿದೆ ಎಂದು ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ರಾಜ್ಯದಲ್ಲಿ ಪ್ರತಿಭೆಗಳನ್ನು ಬೆಳೆಯಲು ಬಿಡಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದಲ್ಲಿ ಹಿರಿಯ ಕ್ರಿಕೆಟಿಗರನ್ನು ಕಡೆಗಣಿಸಿದ ರೀತಿ, ಹಲವರು ವಲಸೆ ಹೋಗುವಂತೆ ಮಾಡಿದ್ದರ ಬಗ್ಗೆ ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ‘ಕರ್ನಾಟಕದಲ್ಲಿ ಬಹಳಷ್ಟು ಪ್ರತಿಭೆಗಳು ದುರಾಡಳಿತಕ್ಕೆ ಬಲಿಯಾಗಿದ್ದಾರೆ. ಕೊನೆ ಬಾರಿ(2014-15)ರಣಜಿ ಟ್ರೋಫಿ ಗೆದ್ದ ತಂಡದಲ್ಲಿದ್ದ ಆಟಗಾರರು ವಿಭಜನೆಗೊಂಡು ಬೇರೆಡೆ ವಲಸೆ ಹೋಗಿದ್ದಾರೆ. ಒತ್ತಡ ಹೇತೆ ಮಾಡಿರಿ ವಲಸೆ ಹೋಗುವಂದರು ಎಂಬುದೇ ವಾಸ್ತವ’ ಎಂದಿದ್ದಾರೆ.
INDvSL ಮೊಹಮ್ಮದ್ ಶಮಿ ದಾಳಿಗೆ ದಿಗ್ಗಜ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ದಾಖಲೆ ಪುಡಿ ಪುಡಿ!
‘ರಾಜ್ಯದ ಕ್ರಿಕೆಟಿಗರಲ್ಲಿ ಅಭದ್ರತೆಯ ವಾತಾವರಣ ಸೃಷ್ಠಿಯಾಗುತ್ತಿದೆ. ಇದರಿಂದಾಗಿಯೇ ಕ್ರಿಕೆಟಿಗರು ನಿರಂತರವಾಗಿ ರಾಜ್ಯ ತೊರೆಯುತ್ತಿದ್ದಾರೆ. ಆಯ್ಕೆಗಾರರ ಮನಸ್ಥಿತಿ ಕರ್ನಾಟಕ ಕ್ರಿಕೆಟ್‌ಗೆ ಹಾನಿ ಮಾಡುವಂತಿದೆ’ ಎಂದು ಟೀಕಿಸಿದ್ದಾರೆ. 2002-03ರಲ್ಲಿ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದ್ದ ಉತ್ತಪ್ಪ 15 ವರ್ಷಗಳ ಕಾಲ ಕರ್ನಾಟಕ ಪರ ಆಡಿದ್ದರು. 2017ರಲ್ಲಿ ರಾಜ್ಯ ತೊರೆದು ಬಳಿಕ ಕೇರಳ ತಂಡ ಸೇರ್ಪಡೆಗೊಂಡಿದ್ದರು.
ಟಿ20: ಇಂದು ಕರ್ನಾಟಕ- ಉತ್ತರಾಖಂಡ ಪ್ರಿಕ್ವಾರ್ಟರ್
ರಾಯ್ಪುರ: ರಾಷ್ಟ್ರೀಯ ಹಿರಿಯ ಮಹಿಳೆಯರ ಟಿ20 ಟೂರ್ನಿಯ ಪ್ರಿ ಕ್ವಾರ್ಟರ್‌ನಲ್ಲಿ ಶುಕ್ರವಾರ ಕರ್ನಾಟಕಕ್ಕೆ ಉತ್ತರಾಖಂಡ ಸವಾಲು ಎದುರಾಗಲಿದೆ. ಚೊಚ್ಚಲ ಪ್ರಶಸ್ತಿ ಗುರಿಯೊಂದಿಗೆ ಟೂರ್ನಿಯಲ್ಲಿ ಆಡುತ್ತಿರುವ 2018-19ರ ರನ್ನರ್-ಅಪ್ ಕರ್ನಾಟಕ ತಂಡ, ‘ಬಿ’ ಗುಂಪಿನಲ್ಲಿ 2ನೇ ಸ್ಥಾನಿಯಾಗಿ ನಾಕೌಟ್‌ಗೇರಿತ್ತು. ತಂಡ ಗುಂಪು ಹಂತದಲ್ಲಿ ಆಡಿದ 7 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, ಕೊನೆ ಪಂದ್ಯದ ಸೋಲು ತಂಡವನ್ನು ನೇರವಾಗಿ ಕ್ವಾರ್ಟರ್‌ಗೇರುವುದರಿಂದ ತಪ್ಪಿಸಿತ್ತು. ಅತ್ತ ‘ಡಿ’ ಗುಂಪಿನಲ್ಲಿದ್ದ ಉತ್ತರಾಖಂಡ ಆಡಿದ 6 ಪಂದ್ಯಗಳಲ್ಲಿ 4ರಲ್ಲಿ ಜಯಗಳಿಸಿ ಪ್ರಿ ಕ್ವಾರ್ಟರ್ ಪ್ರವೇಶಿಸಿದೆ.
ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದ್ದ ಮತ್ತೊಂದು ಸಾರ್ವಕಾಲಿಕ ದಾಖಲೆ ಮುರಿದ ವಿರಾಟ್ ಕೊಹ್ಲಿ..!
ಮುಷ್ತಾಕ್ ಅಲಿ ಟಿ20: ಡೆಲ್ಲಿ, ಬರೋಡಾ ಸೆಮಿಗೆ
ಮೊಹಾಲಿ: ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲಿ ಮಾಜಿ ಚಾಂಪಿಯನ್‌ಗಳಾದ ಡೆಲ್ಲಿ ಹಾಗೂ ಬರೋಡಾ ತಂಡಗಳು ಸೆಮಿಫೈನಲ್ ಪ್ರವೇಶಿಸಿವೆ. ಪಂಜಾಬ್, ಅಸ್ಸಾಂ ತಂಡಗಳೂ ಅಂತಿಮ 4ರ ಘಟ್ಟ ಪ್ರವೇಶಿಸಿವೆ.
ಗುರುವಾರ ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಮುಂಬೈ ವಿರುದ್ದ ಬರೋಡಾ 3 ವಿಕೆಟ್ ಜಯಗಳಿಸಿದರೆ, ಉತ್ತರ ಪ್ರದೇಶ ವಿರುದ್ದ ಪಂಜಾಬ್ 5 ವಿಕೆಟ್ ಗೆಲುವು ಸಾಧಿಸಿತು. ವಿಧರ್ಭ ವಿರುದ್ದ ಡೆಲ್ಲಿಗೆ 29 ರನ್ ಲಭಿಸಿತು. ಅಸ್ಸಾಂ ಎದುರು ಕೇರಳ 6 ವಿಕೆಟ್‌ಗಳಿಂದ ಶರಣಾಯಿತು. ಶನಿವಾರ ಸೆಮೀಸ್ ನಡೆಯಲಿದ್ದು, ಪಂಜಾಬ್ ಹಾಗೂ ಡೆಲ್ಲಿ, ಬರೋಡಾ ಹಾಗೂ ಅಸ್ಸಾಂ ಮುಖಾಮುಖಿಯಾಗಲಿವೆ.