Asianet Suvarna News Asianet Suvarna News

IPL ಹರಾಜಿಗೆ 991 ಆಟಗಾರರ ನೋಂದಣಿ; 21 ಆಟಗಾರರ ಮೂಲಬೆಲೆ 2 ಕೋಟಿ ರುಪಾಯಿ..!

ಬಹುನಿರೀಕ್ಷಿತ ಐಪಿಎಲ್ ಮಿನಿ ಹರಾಜು ಡಿಸೆಂಬರ್ 23ರಂದು ಆರಂಭ
ಹರಾಜಿನಲ್ಲಿ 991 ಆಟಗಾರರು ಹೆಸರು ರಿಜಿಸ್ಟರ್ ಮಾಡಿದ್ದಾರೆ
ಇದರಲ್ಲಿ 714 ಭಾರತೀಯ, 277 ವಿದೇಶಿ ಆಟಗಾರರಿದ್ದಾರೆ

991 player regiester IPL Auction 2022 Total 21 players register with base price of INR 2 Crore kvn
Author
First Published Dec 2, 2022, 1:04 PM IST

ಮುಂಬೈ(ಡಿ.02): 16ನೇ ಆವೃತ್ತಿಯ ಐಪಿಎಲ್‌ ಹರಾಜಿನಲ್ಲಿ ಪಾಲ್ಗೊಳ್ಳಲು ಒಟ್ಟು 991 ಆಟಗಾರರ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಬಿಸಿಸಿಐ ಗುರುವಾರ ಮಾಹಿತಿ ನೀಡಿದೆ. ಇದರಲ್ಲಿ 714 ಭಾರತೀಯ, 277 ವಿದೇಶಿ ಆಟಗಾರರಿದ್ದಾರೆ. ಈ ಪಟ್ಟಿಯನ್ನು 200ರಿಂದ 300 ಆಟಗಾರರಿಗೆ ಇಳಿಸಲಾಗುತ್ತದೆ. 

ಡಿಸೆಂಬರ್ 23ರಂದು ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಭಾರತ ಪರ ಆಡಿರುವ 19 ಆಟಗಾರರು ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಆಸ್ಪ್ರೇಲಿಯಾದ 57, ದಕ್ಷಿಣ ಆಫ್ರಿಕಾದ 52, ವೆಸ್ಟ್‌ಇಂಡೀಸ್‌ನ 33, ಇಂಗ್ಲೆಂಡ್‌ನ 31 ಆಟಗಾರರು ಸಹ ಹೆಸರು ನೋಂದಾಯಿಸಿಕೊಂಡಿದ್ದಾರೆ. ನಮೀಬಿಯಾ, ಸ್ಕಾಟ್ಲೆಂಡ್‌, ಐರ್ಲೆಂಡ್‌, ಯುಎಇ ಆಟಗಾರರ ಹೆಸರುಗಳು ಸಹ ಇವೆ. ಪ್ರತಿ ತಂಡವು ಗರಿಷ್ಠ 25 ಆಟಗಾರರನ್ನು ಹೊಂದಲು ಇಚ್ಛಿಸಿದರೆ ಹರಾಜಿನಲ್ಲಿ 87 ಆಟಗಾರರು ಬಿಕರಿಯಾಗಬಹುದು. ಇದರಲ್ಲಿ 30 ವಿದೇಶಿಗರಾಗಿರಬಹುದು.

21 ಆಟಗಾರರ ಮೂಲಬೆಲೆ 2 ಕೋಟಿ ರುಪಾಯಿಗಳು: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಆಟಗಾರರ ಹರಾಜಿಗೆ ಹೆಸರು ನೋಂದಾಯಿಸಿದ ಆಟಗಾರರ ಪಟ್ಟಿಯಲ್ಲಿ ಒಟ್ಟು 21 ಆಟಗಾರರ ಮೂಲ ಬೆಲೆ 2 ಕೋಟಿ ರುಪಾಯಿ ನಿಗದಿಪಡಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಯಾವುದೇ ಭಾರತೀಯ ಆಟಗಾರರು ಸ್ಥಾನ ಪಡೆದಿಲ್ಲ. 

2 ಕೋಟಿ ರುಪಾಯಿ ಮೂಲ ಬೆಲೆ ಹೊಂದಿದ ಆಟಗಾರರ ವಿವರ ಹೀಗಿದೆ ನೋಡಿ: ಟಾಮ್ ಬಾಂಟನ್, ಸ್ಯಾಮ್ ಕರ್ರನ್, ಕ್ರಿಸ್ ಜೋರ್ಡನ್, ಟೈಮಲ್ ಮಿಲ್ಸ್, ಜೆಮಿ ಓವರ್‌ಟನ್, ಕ್ರೇಗ್ ಓವರ್‌ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಬೆನ್ ಸ್ಟೋಕ್ಸ್, ನೇಥನ್ ಕೌಲ್ಟರ್-ನೈಲ್, ಕ್ಯಾಮರೋನ್ ಗ್ರೀನ್, ಟ್ರಾವಿಸ್ ಹೆಡ್, ಕ್ರಿಸ್ ಲಿನ್, ಕೇನ್ ವಿಲಿಯಮ್ಸನ್, ಆಡಂ ಮಿಲ್ನೆ, ಜೇಮ್ಸ್ ನೀಶಮ್, ರಿಲೇ ರೂಸೌ, ರಾಸ್ಸಿ ವ್ಯಾನ್ ಡರ್ ಡುಸೇನ್, ಆಂಜಲೊ ಮ್ಯಾಥ್ಯೂಸ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್.

1.5 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಆಟಗಾರರ ವಿವರ:
ಶಾನ್ ಅಬ್ಬೋಟ್, ರಿಲೆ ಮೆರೆಡಿತ್, ಜೇ ರಿಚರ್ಡ್‌ಸನ್, ಆಡಂ ಜಂಪಾ. ಶಕೀಬ್ ಅಲ್ ಹಸನ್, ಹ್ಯಾರಿ ಬ್ರೂಕ್, ವಿಲ್ ಜೇಕ್ಸ್, ಡೇವಿಡ್ ಮಲಾನ್, ಜೇಸನ್ ರಾಯ್, ಶೆರ್ಫಾನೆ ರುದರ್‌ಫೋರ್ಡ್‌.

1 ಕೋಟಿ ರುಪಾಯಿ ಮೂಲ ಬೆಲೆ ಹೊಂದಿರುವ ಆಟಗಾರರ ವಿವರ ಹೀಗಿದೆ:
ಮಯಾಂಕ್ ಅಗರ್‌ವಾಲ್, ಕೇದಾರ್ ಜಾದವ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ಮುಜೀಜ್ ಉರ್ ರೆಹಮಾನ್, ಮೊಯ್ಸಿನ್ ಹೆನ್ರಿಕೇಸ್, ಆಂಡ್ರ್ಯೂ ಟೈ, ಜೋ ರೂಟ್, ಲೂಕ್ ವುಡ್, ಮೈಕೆಲ್ ಬ್ರಾಸ್‌ವೆಲ್, ಮಾರ್ಕ್‌ ಚಾಂಪ್ಮನ್, ಮಾರ್ಟಿನ್ ಗಪ್ಟಿಲ್‌, ಕೈಲ್‌ ಜೇಮಿಸನ್, ಮ್ಯಾಟ್ ಹೆನ್ರಿ, ಟಾಮ್ ಲೇಥಮ್, ಡೇರಲ್ ಮಿಚೆಲ್, ಹೆನ್ರಿಚ್ ಕ್ಲಾಸೆನ್, ತಬ್ರೀಜ್ ಶಮ್ಸಿ, ಕುಸಾಲ್ ಪೆರೆರಾ, ರೋಸ್ಟನ್ ಚೇಸ್‌, ರಾಕೀಂ ಕಾರ್ನೆವೆಲ್, ಶಾಯ್ ಹೋಪ್, ಅಕೇಲ್ ಹೊಸೈನ್, ಡೇವಿಡ್ ವೀಸಾ.

Follow Us:
Download App:
  • android
  • ios