ಅಹಮದಾಬಾದ್‌(ಮಾ.20): 5ನೇ ಹಾಗೂ ನಿರ್ಣಾಯಕ ಟಿ20 ಕ್ರಿಕೆಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಗೆಲುವು ಸಾಧಿಸಿದೆ. ಈ ಮೂಲಕ ಟೀಮ್ ಇಂಡಿಯಾ 3-2 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಅಹಮದಾಬಾದ್‌ನಲ್ಲಿ ಇಂದು (ಶನಿವಾರ) ಮೋದಿ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವೆ ಟಿ20 ಸರಣಿಯ 5ನೇ ಮತ್ತು ಕೊನೆಯ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ ಭಾರತ 224/2 ರನ್ ಗಳಿಸಿತು. 

ಪಂದ್ಯದ ಮಹತ್ವದ ಘಟ್ಟದಲ್ಲಿ ವಿರಾಟ್‌ ಕೊಹ್ಲಿ ಮೈದಾನ ತೊರೆದಿದ್ದೇಕೆ..? 

ಬಳಿಕ ಈ 225ರನ್‌ಗಳ ಗುರಿ ಬೆನ್ನಟ್ಟಿದ ಇಂಗ್ಲೆಂಡ್ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು  188 ರನ್ ಗಳಿಸಲಷ್ಟೇ ಶಕ್ತವಾಯ್ತು. ಈ ಮೂಲಕ ಭಾರತ 36 ರನ್‌ಗಳೊಂದಿಗೆ 3-2 ಅಂತರದಲ್ಲಿ ಸರಣಿ ಜಯಿಸಿತು.

ರನ್‌ಗಳ ಸುರಿಮಳೆ ಸುರಿಸಿದ ಭಾರತ
ನಾಯಕ ವಿರಾಟ್ ಕೊಹ್ಲಿ 52 ಎಸೆತಗಳಲ್ಲಿ ಅಜೇಯ 80 ರನ್ (7 ಬೌಂಡರಿ 2 ಸಿಕ್ಸರ್) ಬಾರಿಸಿದರು. ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ರೋಹಿತ್ ಶರ್ಮ ಕೇವಲ 34 ಎಸೆತಗಳಲ್ಲಿ 64 ರನ್ (4 ಬೌಂಡರಿ 5 ಸಿಕ್ಸ್ ) ಬಾರಿಸಿದರು, ನಾಯಕ ಮತ್ತು ಉಪನಾಯಕ ಮೊದಲ ವಿಕೆಟ್​ಗೆ 9 ಓವರ್​ಗಳಲ್ಲಿ 94 ರನ್ ಸೇರಿಸಿದರು .

ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಸೂರ್ಯಕುಮಾರ್ ಯಾದವ್ 17 ಎಸೆತಗಳಲ್ಲಿ 3 ಬೌಂಡರಿ 2 ಸಿಕ್ಸ್‌ನೊಂದಿಗೆ  32 ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್, ಜೋಸ್ ಬಟ್ಲರ್ 52 (34), ಡೇವಿಡ್ ಮಲಾನ್ 68 (46), ಬೆನ್ ಸ್ಟೋಕ್ಸ್ 14, ಕ್ರಿಸ್ ಜೋರ್ಡನ್ 11, ಸ್ಯಾಮ್ ಕರನ್ ಅಜೇಯ 14 ರನ್‌ ಕೊಡುಗೆಯೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದು 188 ರನ್ ಗಳಿಸಿ ಶರಣಾಯ್ತು.

 ಭಾರತದ ಶಾರ್ದೂಲ್ ಠಾಕೂರ್ 3 ವಿಕೆಟ್, ಭುವನೇಶ್ವರ್ ಕುಮಾರ್ 2, ಹಾರ್ದಿಕ್ ಪಾಂಡ್ಯ 1, ಟಿ ನಟರಾಜನ್ 1 ವಿಕೆಟ್‌ ಪಡೆದ ತಂಡದ ಗೆಲುವಿಗೆ ಕಾರಣರಾದರು.