Asianet Suvarna News Asianet Suvarna News

Subhranshu Senapati : ಸೆಲೆಕ್ಷನ್ ಟ್ರಯಲ್ಸ್ ಗೆ ಬರುವಂತೆ ಹೇಳಿದ CSK, ಯಾರೀತ?

ಒಡಿಶಾ ತಂಡದ ಅಗ್ರ ಬ್ಯಾಟ್ಸ್ ಮನ್
ವಿಜಯ್ ಹಜಾರೆ ಟ್ರೋಫಿಯಲ್ಲಿ 5 ಪಂದ್ಯಗಳಿಂದ 275 ರನ್
ಶುಭ್ರಾಂಶು ಸೇನಾಪತಿಗೆ ಟ್ರಯಲ್ಸ್ ನಲ್ಲಿ ಪಾಲ್ಗೊಳ್ಳುವಂತೆ ಹೇಳಿರುವ CSK

4 time IPL champions CSK  have called up Odisha batter Subhranshu Senapati for selection trials san
Author
Chennai, First Published Dec 19, 2021, 3:57 PM IST

ಚೆನ್ನೈ (ಡಿ. 19): ನಾಲ್ಕು ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings )ತಂಡ ಒಡಿಶಾದ (Odisha)ಬ್ಯಾಟ್ಸ್ ಮನ್ ಶುಭ್ರಾಂಶು ಸೇನಾಪತಿಗೆ (Subhranshu Senapati ) ಆಯ್ಕೆ ಟ್ರಯಲ್ಸ್ ಗೆ ಬರುವಂತೆ ಬುಲಾವ್ ನೀಡಿದೆ. ಹಾಲಿ ವರ್ಷದ ವಿಜಯ್ ಹಜಾರೆ ಟ್ರೋಫಿಯಲ್ಲಿ (Vijay Hazare Trophy)ಒಡಿಶಾ ತಂಡದ ಪರವಾಗಿ ಆಡಿರುವ 24 ವರ್ಷದ ಶುಭ್ರಾಂಶು ಸೇನಾಪತಿ ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಈ ವರ್ಷದ ಟೂರ್ನಿಯಲ್ಲಿ ಆಡಿದ 7 ಪಂದ್ಯಗಳಿಂದ 275 ರನ್ ಬಾರಿಸಿರುವ ಶುಭ್ರಾಂಶು ಬಲಗೈ ಬ್ಯಾಟ್ಸ್ ಮನ್ ಆಗಿದ್ದು, ಒಡಿಶಾ ಪರವಾಗಿ ಟೂರ್ನಿಯಲ್ಲಿ ಗರಿಷ್ಠ ರನ್ ಬಾರಿಸಿದ ಬ್ಯಾಟ್ಸ್ ಮನ್ ಎನಿಸಿದ್ದಾರೆ.

ಡಿಸೆಂಬರ್ 8 ರಂದು ಮುಂಬೈನ ಬಾಂದ್ರಾ ಕುರ್ಲಾ ಕ್ರೀಡಾ ಸಂಕೀರ್ಣದಲ್ಲಿ ನಡೆದ ಪಂದ್ಯದಲ್ಲಿ ಆಂಧ್ರ ಪ್ರದೇಶ (Andhra ) ವಿರುದ್ಧ ಶುಭ್ರಾಂಶು ಸೇನಾಪತಿ ಭರ್ಜರಿ ಶತಕ ಸಿಡಿಸಿದ್ದರು. ಅವರ ಈ ಸಾಹಸದಿಂದಾಗಿ ಒಡಿಶಾ ತಂಡ 5 ವಿಕೆಟ್ ಗೆ 278 ರನ್ ಪೇರಿಸಿದ್ದಲ್ಲದೆ ಪಂದ್ಯದಲ್ಲಿ 63 ರನ್ ಗಳ ಗೆಲುವು ಸಾಧಿಸಿತ್ತು. ಅದರೊಂದಿಗೆ ಬಲಿಷ್ಠ ವಿದರ್ಭ ಹಾಗೂ ಹಿಮಾಚಲ ಪ್ರದೇಶ ತಂಡದ ವಿರುದ್ಧವೂ ಅರ್ಧಶತಕ ಸಿಡಿಸಿ ಗಮನಸೆಳೆದಿದ್ದರು.

ಶುಭ್ರಾಂಶು ಬ್ಯಾಟಿಂಗ್ ಶೈಲಿಯಲ್ಲಿ ವಿಶೇಷತೆಯನ್ನು ಗಮನಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ಯಾಲೆಂಟ್ ಸ್ಕೌಟ್ ತಂಡ ಆಯ್ಕೆ ಟ್ರಯಲ್ಸ್ ಗೆ ಬರುವಂತೆ ಹೇಳಿದ್ದು, ಒಡಿಶಾ ಕ್ರಿಕೆಟ್ ಮಂಡಳಿ ಈ ಸುದ್ದಿಯನ್ನು ಟ್ವಿಟರ್ ಮೂಲಕ ಅಧಿಕೃತವಾಗಿ ಪ್ರಕಟಿಸಿದೆ.
 


ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯಲ್ಲೂ ಸೇನಾಪತಿ ಉತ್ತಮ ನಿರ್ವಹಣೆ ತೋರಿದ್ದರು. 27.60ರ ಸರಾಸರಿಯಲ್ಲಿ ಆಡಿದ 5 ಪಂದ್ಯಗಳಿಂದ 138 ರನ್ ಬಾರಿಸಿದ್ದರು. ಒಂದು ಆಕರ್ಷಕ ಅರ್ಧಶತಕವನ್ನೂ ಬಾರಿಸಿದ್ದ ಶುಭ್ರಾಂಶು ಸೇನಾಪತಿ 116.94ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. 20117ರಲ್ಲಿ ತಮ್ಮ ಪಾದಾರ್ಪಣೆ ಆದ ದಿನದಿಂದ 26 ಟಿ20 ಪಂದ್ಯಗಳನ್ನು ಆಡಿರುವ ಶುಭ್ರಾಂಶು, ಮೂರು ಅರ್ಧಶತಕಗಳೊಂದಿಗೆ 28.95ರ ಸರಾಸರಿಯಲ್ಲಿ 637 ರನ್ ಬಾರಿಸಿದ್ದಾರೆ.

IPL Auction 2022: ಸುರೇಶ್ ರೈನಾ ಖರೀದಿಸಲು ಈ ಮೂರು ತಂಡಗಳ ನಡುವೆ ಪೈಪೋಟಿ..?
ಇನ್ನು ಸಿಎಸ್ ಕೆ ತಂಡವನ್ನು ಗಮನಿಸುವುದಾದರೆ, 2022ರ ಐಪಿಎಲ್ ಗೆ ನಾಲ್ವರು ಪ್ಲೇಯರ್ ಗಳನ್ನು ಚೆನ್ನೈ ಸೂಪರ್ ಕಿಂಗ್ಸ್ ರಿಟೇನ್ ಮಾಡಿಕೊಂಡಿದೆ. 16 ಕೋಟಿ ರೂಪಾಯಿಗೆ ರವೀಂದ್ರ ಜಡೇಜಾ ಅವರನ್ನು ರಿಟೇನ್ ಮಾಡಿದ್ದರೆ, 12 ಕೋಟಿ ರೂಪಾಯಿಗೆ ಎಂಎಸ್ ಧೋನಿ, ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿ ಹಾಗೂ ಬ್ಯಾಟ್ಸ್ ಮನ್ ರುತುರಾಜ್ ಗಾಯಕ್ವಾಡ್ ಅವರನ್ನು ತಲಾ 8 ಕೋಟಿ ರೂಪಾಯಿಗೆ ರಿಟೇನ್ ಮಾಡಿದೆ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಿಗೆ ಜವಾಬ್ದಾರಿ ನೀಡುವ ನಿಟ್ಟಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅದ್ಭುತ ತಂಡವಾಗಿದೆ. ರುತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ದೀಪಕ್ ಚಹರ್ ರಂಥ ಪ್ಲೇಯರ್ ಗಳೇ ಇದಕ್ಕೆ ನಿದರ್ಶನವಾಗಿದೆ. ಈ ಬಾರಿಯೂ ಅಂಥದ್ದೇ ಕೆಲವು ಪ್ಲೇಯರ್ ಗಳನ್ನು ಹುಡುಕಿ ತಂಡಕ್ಕೆ ಆಯ್ಕೆ ಮಾಡುವ ವಿಶ್ವಾಸದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವಿದೆ.

MS Dhoni IPL 2022 ಟೂರ್ನಿ ಆಡ್ತಾರಾ? ಮಿಲಿಯನ್ ಡಾಲರ್ ಪ್ರಶ್ನೆಗೆ ಚುಟುಕಾಗಿ ಉತ್ತರಿಸಿದ CSK ನಾಯಕ..!
ಐಪಿಎಲ್ ಹಾಲಿ ಚಾಂಪಿಯನ್ ತಂಡವಾಗಿರುವ ಚೆನ್ನೈ ಸೂಪರ್ ಕಿಂಗ್ಸ್, ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಕೆಕೆಆರ್ ತಂಡವನ್ನು ಸೋಲಿಸಿ ನಾಲ್ಕನೇ ಬಾರಿಗೆ ಪ್ರಶಸ್ತಿ ಜಯಿಸಿತ್ತು. 2020ರಲ್ಲಿ ಮೊಟ್ಟಮೊದಲ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ನ ಪ್ಲೇ ಆಫ್ ಹಂತಕ್ಕೇರುವಲ್ಲಿ ವಿಫಲವಾಗಿದ್ದರೆ, ಈ ಬಾರಿ ಭರ್ಜರಿಯಾಗಿ ವಾಪಸಾಗುವ ಮೂಲಕ ಚಾಂಪಿಯನ್ ಎನಿಸಿಕೊಂಡಿದೆ.

 

Follow Us:
Download App:
  • android
  • ios