Asianet Suvarna News Asianet Suvarna News

T20 World Cup: ವಿಂಡೀಸ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ!

*ಮೊದಲೆರಡು ಪಂದ್ಯಗಳಲ್ಲಿಯೂ ಸೋತು ಕಳಪೆ ಆರಂಭ ಪಡೆದಿದ್ದ ವಿಂಡೀಸ್!‌
*ಈಗಾಗಲೇ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿರುವ ಶ್ರೀಲಂಕಾ
*ವೆಸ್ಟ್‌ ಇಂಡೀಸ್‌ಗೆ ಗುರುವಾರ ಮಾಡು ಇಲ್ಲವೇ ಮಡಿ ಪಂದ್ಯ

35th match of T20 World Cup Sri lanka vs West Indies at Abu Dhabi on Thursday
Author
Bengaluru, First Published Nov 4, 2021, 7:14 AM IST
  • Facebook
  • Twitter
  • Whatsapp

ಅಬು ಧಾಬಿ(ನ.4): ಹಾಲಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ (West Indies) ಟಿ20 ವಿಶ್ವಕಪ್‌ನ ಸೆಮಿಫೈನಲ್‌ ರೇಸ್‌ನಲ್ಲಿ ಉಳಿಯಬೇಕಿದ್ದರೆ ಗುರುವಾರ ಶ್ರೀಲಂಕಾ (Sri lanka) ವಿರುದ್ಧ ಗೆಲ್ಲಲೇಬೇಕಿದೆ. ವಿಂಡೀಸ್‌ ಬಾಕಿ ಇರುವ ಪಂದ್ಯಗಳಲ್ಲಿ ಗೆದ್ದು ಉಳಿದ ಫಲಿತಾಂಶಗಳು ತನ್ನ ಪರವಾಗಿ ಬಂದರಷ್ಟೇ ಸೆಮೀಸ್‌ನಲ್ಲಿ ಸ್ಥಾನ ಸಿಗಲಿದೆ.

Yuvraj Singh Comeback ನಿವೃತ್ತಿ ವಾಪಾಸ್ ಪಡೆದು ಮೈದಾನಕ್ಕಿಳಿಯುವುದಾಗಿ ಘೋಷಿಸಿದ ಸಿಕ್ಸರ್‌ ಕಿಂಗ್ ಯುವರಾಜ್ ಸಿಂಗ್..!

2 ಅಭ್ಯಾಸ ಪಂದ್ಯಗಳಲ್ಲಿ ಸೋತಿದ್ದ ಕೀರನ್‌ ಪೊಲ್ಲಾರ್ಡ್‌ ಪಡೆ, ಪ್ರಧಾನ ಸುತ್ತಿನಲ್ಲಿ ಮೊದಲೆರಡು ಪಂದ್ಯಗಳಲ್ಲಿಯೂ ಸೋತು ಕಳಪೆ ಆರಂಭ ಪಡೆದಿತ್ತು. ಬಾಂಗ್ಲಾದೇಶ (Bangladesh) ವಿರುದ್ಧ ಪ್ರಯಾಸದ ಗೆಲುವು ಸಾಧಿಸಿತ್ತು. ಆದರೆ ತಂಡದ ನೆಟ್‌ ರನ್‌ ರೇಟ್‌ ಪಾತಾಳಕ್ಕೆ ಕುಸಿದಿದ್ದು ಗುಂಪು 1ರಲ್ಲಿ ದ.ಆಫ್ರಿಕಾ (South Africa) ಹಾಗೂ ಆಸ್ಪ್ರೇಲಿಯಾವನ್ನು (Australia) ಹಿಂದಿಕ್ಕಿ ಸೆಮೀಸ್‌ ತಲುಪಬೇಕಾದರೆ ಭಾರೀ ಅಂತರದ ಗೆಲುವು ಅನಿವಾರ್ಯವಾಗಿದೆ. ಇನ್ನು ಹ್ಯಾಟ್ರಿಕ್‌ ಸೋಲಿನಿಂದ ಕಂಗೆಟ್ಟು ಈಗಾಗಲೇ ಸೆಮೀಸ್‌ ರೇಸ್‌ನಿಂದ ಹೊರಬಿದ್ದಿರುವ ಶ್ರೀಲಂಕಾಗಿದು ಟೂರ್ನಿಯಲ್ಲಿ ಅಂತಿಮ ಪಂದ್ಯ. ಗೆಲುವಿನೊಂದಿಗೆ ಟೂರ್ನಿಗೆ ಗುಡ್‌ಬೈ ಹೇಳಲು ತಂಡ ಕಾಯುತ್ತಿದೆ.

ಸಂಭವನೀಯ ಆಟಗಾರರ ಪಟ್ಟಿ

ವೆಸ್ಟ ಇಂಡೀಸ್‌: ಕ್ರಿಸ್ ಗೇಲ್ (Chris Gayle), ಎವಿನ್ ಲೆವಿಸ್, ರೋಸ್ಟನ್ ಚೇಸ್, ನಿಕೋಲಸ್ ಪೂರನ್ (Nicholas Pooran), ಶಿಮ್ರಾನ್ ಹೆಟ್ಮೆಯರ್, ಕೀರಾನ್ ಪೊಲಾರ್ಡ್ (Kieron Pollard), ಆಂಡ್ರೆ ರಸೆಲ್, ಜೇಸನ್ ಹೋಲ್ಡರ್, ಡ್ವೇನ್ ಬ್ರಾವೋ, ಅಕೇಲ್ ಹೊಸೈನ್, ರವಿ ರಾಂಪಾಲ್

T20 World Cup: 9 ತಿಂಗಳ ವಿರಾಟ್‌ ಮಗಳು ವಮಿಕಾಗೆ ಅತ್ಯಾಚಾರದ ಬೆದರಿಕೆ..! ಇದೇನಾ ಸಂಸ್ಕೃತಿ..?

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಶಾಲ್ ಪೆರೇರಾ (Kusal Perera), ಭಾನುಕ ರಾಜಪಕ್ಸೆ, ಚರಿತ್ ಅಸಲಂಕಾ, ಅವಿಷ್ಕ ಫೆರ್ನಾಂಡೋ, ದಸುನ್ ಶನಕ (Dasun Shanaka), ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಮಹೇಶ್ ತೀಕ್ಷಣ, ಲಹಿರು ಕುಮಾರ

ಪಿಚ್‌ ರಿಪೋರ್ಟ್‌

ಅಬುಧಾಬಿಯ ಪಿಚ್ ಇತ್ತೀಚಿನ ದಿನಗಳಲ್ಲಿ ಸುಧಾರಣೆಯ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದೆ, ಆದರೂ ಸರಾಸರಿ ಸ್ಕೋರ್‌ಗಳು ಕಡಿಮೆಯೇ ಇವೆ. ಈ ಮೈದಾನದಲ್ಲಿ ಚೇಸಿಂಗ್ ತಂಡಗಳು ಹೆಚ್ಚಾಗಿ  ಪ್ರಾಬಲ್ಯ ಹೊಂದಿವೆ. ಆದ್ದರಿಂದ, ಎರಡನೇ ಬ್ಯಾಟಿಂಗ್ ಆಯ್ಕೆ ಉತ್ತಮ.

ಭಾರತಕ್ಕೆ ಭರ್ಜರಿ ಜಯ.. ಸೇಮಿಸ್ ಆಸೆ ಜೀವಂತ!

ಟಿ20  ವಿಶ್ವಕಪ್ ನಲ್ಲಿ(T20 World Cup 2021) ಅಫ್ಘಾನಿಸ್ತಾನದ (Afghanistan) ಭಾರತ ( India) ವಿರುದ್ದ ಸೋಲು ಕಂಡಿದೆ. ಭಾರತ ಜಯ ದಾಖಲಿಸುವ ಮೂಲಕ ತನ್ನ ಖಾತೆ ಓಪನ್ ಮಾಡಿದೆ.  ಮೊದಲು ಬ್ಯಾಟಿಂಗ್ ಮಾಡಿದ ಭಾರತ  ರನ್ ಹೊಳೆ ಹರಿಸಿತ್ತು. ನಿಗದಿತ 20 ಓವರ್‌ಗಳಲ್ಲಿ ಭಾರತ ಕೇವಲ 2 ವಿಕೆಟ್ ಕಳೆದುಕೊಂಡು 210 ರನ್‌ಗಳಿಸಿ ದೊಡ್ಡ ಸವಾಲನ್ನು ಮುಂದಿಟ್ಟಿತು. ಆದರೆ ಭಾರತ ನೀಡಿದ ದೊಡ್ಡ ಮೊತ್ತವನ್ನು ಚೇಸ್‌ (Chase) ಮಾಡಲು ಸಾಧ್ಯವಾಗದೆ ಅಫ್ಘಾನಿಸ್ತಾನ ಪಂದ್ಯ ಕೈಚೆಲ್ಲಿತು.

ಕಿವೀಸ್‌ ವಿರುದ್ಧ ವೀರೋಚಿತ ಸೋಲು ಕಂಡ ಸ್ಕಾಟ್ಲೆಂಡ್‌!

ನಿರೀಕ್ಷೆಗೂ ಮೀರಿದ ಹೋರಾಟ ಪ್ರದರ್ಶಿಸಿದ ಹೊರತಾಗಿಯೂ ಸ್ಕಾಟ್ಲೆಂಡ್‌ ಟಿ20 ವಿಶ್ವಕಪ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ 16 ರನ್‌ಗಳ ಸೋಲುಂಡಿದೆ. ಮಹತ್ವದ ಪಂದ್ಯದಲ್ಲಿ ಗೆದ್ದ ಕಿವೀಸ್‌ 4 ಅಂಕದೊಂದಿಗೆ ಗುಂಪು 2ರಲ್ಲಿ 3ನೇ ಸ್ಥಾನ ಪಡೆದಿದ್ದು, ಸೆಮೀಸ್‌ ಆಸೆ ಜೀವಂತವಾಗಿರಿಸಿಕೊಂಡಿದೆ. ಸ್ಕಾಟ್ಲೆಂಡ್‌ ಹ್ಯಾಟ್ರಿಕ್‌ ಸೋಲುಂಡು ಕೊನೆಯ ಸ್ಥಾನದಲ್ಲಿದೆ.

Ind vs NZ T20I ಕ್ರಿಕೆಟ್ ಸರಣಿಗೆ ಕನ್ನಡಿಗ ಕೆ.ಎಲ್ ರಾಹುಲ್‌ಗೆ ನಾಯಕ ಪಟ್ಟ..?

Follow Us:
Download App:
  • android
  • ios