15ನೇ ಐಪಿಎಲ್ ಇಂದಿನಿಂದ ಆರಂಭವಾಗ್ತಿದೆ. ಈ ಸಲದ ಐಪಿಎಲ್ ಮೂವರು ಬಿಗ್ ಪ್ಲೇಯರ್​ಗಳನ್ನ ಮಿಸ್ ಮಾಡಿಕೊಳ್ಳಲಿದೆ. ಆದೆಷ್ಟೋ ಮಂದಿ ಐಪಿಎಲ್ ಆಡಿ ರಿಟೈರ್ಡ್​ ಆಗಿರಬಹುದು. 

ಬೆಂಗಳೂರು (ಮಾ.26): 15ನೇ ಐಪಿಎಲ್ ಇಂದಿನಿಂದ ಆರಂಭವಾಗ್ತಿದೆ. ಈ ಸಲದ ಐಪಿಎಲ್ ಮೂವರು ಬಿಗ್ ಪ್ಲೇಯರ್​ಗಳನ್ನ ಮಿಸ್ ಮಾಡಿಕೊಳ್ಳಲಿದೆ. ಆದೆಷ್ಟೋ ಮಂದಿ ಐಪಿಎಲ್ ಆಡಿ ರಿಟೈರ್ಡ್​ ಆಗಿರಬಹುದು. ಆದರೆ ಈ ಮೂವರು ಮಾತ್ರ ಕಲರ್ ಫುಲ್ ಟೂರ್ನಿ ಸಕ್ಸಸ್​ಗೆ ತಮ್ಮದೇ ಆದ ಕೊಡುಗೆ ನೀಡಿ ಹೋಗಿದ್ದಾರೆ. ಈ ಮೂವರು ಇಲ್ಲದ ಐಪಿಎಲ್ ಊಹಿಸಿಕೊಳ್ಳಲು ಸಾಧ್ಯವಿಲ್ಲ. 14 ವರ್ಷದಿಂದ ಆಡಿ 15ನೇ ವರ್ಷ ಮೂವರು ಒಟ್ಟಿಗೆ ಐಪಿಎಲ್​ನಿಂದ ದೂರ ಉಳಿದಿದ್ದಾರೆ. ಮಿಸ್ಟ್​​ಗಳಿಲ್ಲದೆ ಈ ಸಲದ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಯುತ್ತಿದೆ.

ಮಿಸ್ಟರ್ ಐಪಿಎಲ್ ಸುರೇಶ್ ರೈನಾ: ಸುರೇಶ್ ರೈನಾ (Suresh Raina), 2008ರಿಂದ 2017ರವರೆಗೆ ಅಂದರೆ ಒಂದು ದಶಕಗಳ ಕಾಲ IPL​​​ನಲ್ಲಿ ಗರಿಷ್ಠ ರನ್ ಸರದಾರರ ಲಿಸ್ಟ್​ನಲ್ಲಿ ಅಗ್ರಸ್ಥಾನದಲ್ಲಿದ್ದರು. ಹಾಗಾಗಿಯೇ ಸುರೇಶ್ ರೈನಾ ಅವರನ್ನ ಮಿಸ್ಟರ್ IPL ಎಂದು ಕರೆಯೋದು. ಕಳೆದ 14 IPLನಲ್ಲಿ 12 ವರ್ಷ ಸಿಎಸ್​ಕೆ ಪರ, ಎರಡು ವರ್ಷ ಗುಜರಾತ್ ಲಯನ್ಸ್​​ ಪರ ಆಡಿದ್ದ ರೈನಾ, 2020ರಲ್ಲಿ ವೈಯಕ್ತಿಕ ಕಾರಣ ನೀಡಿ IPL ಆಡಿರಲಿಲ್ಲ. ದಶಕಗಳ ಕಾಲ ಪ್ರತಿ IPLನಲ್ಲೂ 400 ಪ್ಲಸ್ ರನ್ ಹೊಡೆದ ದಾಖಲೆ ನಿರ್ಮಿಸಿದ್ದ ರೈನಾ, ಈಗ ಗರಿಷ್ಠ ರನ್ ಸರದಾರರ ಲಿಸ್ಟ್​ನಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ಏಪ್ರಿಲ್​ನಲ್ಲಿ ಎರಡು KGFಗಳು ರಿಲೀಸ್: ಅಷ್ಟಕ್ಕೂ ಇನ್ನೊಂದು 'ಕೆಜಿಎಫ್' ಯಾವ್ದು ಗೊತ್ತಾ?

ರೈನಾ, ಟೀಂ ಇಂಡಿಯಾ ಪರ ಆಡಿ ಸದ್ದು ಮಾಡಿದಕ್ಕಿಂತ IPL ಆಡಿ ಸದ್ದು ಮಾಡಿದ್ದೇ ಹೆಚ್ಚು. 205 IPL ಪಂದ್ಯಗಳಿಂದ 5528 ರನ್ ಬಾರಿಸಿದ್ದಾರೆ. ಒಂದು ಸೆಂಚುರಿಯೂ ಅವರ ಖಾತೆಯಲ್ಲಿದೆ. 2018ರಲ್ಲಿ ಟೀಂ ಇಂಡಿಯಾದಿಂದ ಡ್ರಾಪ್ ಆದ್ರು. 2020ರಲ್ಲಿ ಎಂಎಸ್ ಧೋನಿ ಜೊತೆ ಎಲ್ಲಾ ಮಾದರಿ ಕ್ರಿಕೆಟ್​ಗೆ ಗುಡ್ ಬೈ ಹೇಳಿ ಐಪಿಎಲ್ ಮಾತ್ರ ಆಡ್ತಿದ್ದರು. ಆದರೆ ಫಿಟ್ನೆಸ್ ಮತ್ತು ಫಾರ್ಮ್​ ಇರಲಿಲ್ಲ. ಹಾಗಾಗಿ ಕಳೆದ ಐಪಿಎಲ್​ನಲ್ಲಿ ಸಿಎಸ್​ಕೆ ಟೀಮ್​ನಲ್ಲಿದ್ದರೂ ಕೆಲ ಪಂದ್ಯಗಳಲ್ಲಿ ಬೆಂಚ್ ಕಾದ್ರು. ಈ ಸಲ 2 ಕೋಟಿ ಮೂಲ ಬೆಲೆ ಹೊಂದಿದ್ದರೂ ಯಾರೂ ಖರೀದಿಸಲಿಲ್ಲ. ಫಿಟ್ನೆಸ್ ಮತ್ತು ಕಳಪೆ ಫಾರ್ಮ್​ ರೈನಾ, ಆನ್ ಸೋಲ್ಡ್ ಆಗಲು ಕಾರಣವಾಯ್ತು. ಫಾರ್ ದ ಫಸ್ಟ್ ಟೈಮ್ ಮಿಸ್ಟರ್ IPL ಇಲ್ಲದೆ ಕಲರ್ ಫುಲ್ ಟೂರ್ನಿ ನಡೆಯುತ್ತಿದೆ.

ಮಿಸ್ಟರ್​ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್: ಮಿಸ್ಟರ್ ಯೂನಿವರ್ಸಲ್ ಬಾಸ್ ಕ್ರಿಸ್ ಗೇಲ್ (Chris Gayle), ನಿವೃತ್ತಿ ಘೋಷಿಸಿಲ್ಲ. ಆದ್ರೂ ಈ ಸಲದ IPL ಪ್ಲೇಯರ್ಸ್ ಬಿಡ್​​ನಲ್ಲಿ ಹೆಸರು ಇರಲಿಲ್ಲ. ಕಳಪೆ ಫಾರ್ಮ್​, ಫಿಟ್ನೆಸ್ ಮತ್ತು ವಯಸ್ಸು. ಇವು, ಗೇಲ್​ ಅವರನ್ನ IPLನಿಂದ ದೂರ ಮಾಡಿವೆ. ಹಾಗಾಗಿ ಫಾರ್ ದ ಫಸ್ಟ್ ಟೈಮ್ ವಿಂಡೀಸ್ ದೈತ್ಯ ಇಲ್ಲದೆ IPL ನಡೆಯುತ್ತಿದೆ. ಮೊದಲ ಮೂರು ವರ್ಷ ಕೆಕೆಆರ್​ನಲ್ಲಿದ್ದರೂ ಗೇಲ್ ಯಾರು ಅಂತ ಅದೆಷ್ಟೋ ಮಂದಿಗೆ ಗೊತ್ತಿರಲಿಲ್ಲ. 

ಆದರೆ ಯಾವಾಗ 2011ರಲ್ಲಿ ಆರ್​ಸಿಬಿ ಸೇರಿಕೊಂಡ್ರೋ ಅಲ್ಲಿಂದ ಗೇಲ್​ IPL​​ನಲ್ಲಿ ಸಿಕ್ಸರ್ ಕಿಂಗ್ ಆದ್ರು. ಈಗಲೂ ಅಷ್ಟೇ IPL​ನಲ್ಲಿ ಅತಿಹೆಚ್ಚು ಅಂದ್ರೆ 357 ಸಿಕ್ಸರ್ ಮತ್ತು 6 ಸೆಂಚುರಿ ಹೊಡೆದಿರುವ ದಾಖಲೆ ಹೊಂದಿದ್ದಾರೆ. ಆರ್​ಸಿಬಿ ತಂಡದ ಫ್ಯಾನ್ ಫಾಲೋಹಸ್​ ಹೆಚ್ಚಿಸಿರುವವರಲ್ಲಿ ಇವರು ಸಹ ಒಬ್ಬರು. ಆರ್​ಸಿಬಿ ಬಿಟ್ಟು ಪಂಜಾಬ್ ಕಿಂಗ್ಸ್​ ಪರ ಆಡಿದ್ರೂ ಹೆಚ್ಚು ಸದ್ದು ಮಾಡಲಿಲ್ಲ. ವೆಸ್ಟ್ ಇಂಡೀಸ್ ಪರ ಮತ್ತು ಬೇರೆ ಫ್ರಾಂಚೈಸಿ ಲೀಗ್​ನಲ್ಲೂ ರನ್ ಬರ ಎದುರಿಸಿದ್ರು. ಪರಿಣಾಮ 42 ವರ್ಷದ ಗೇಲ್, ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ. ಆದ್ರೆ ಯಾವಾಗ ಅಂತ ಗೊತ್ತಿಲ್ಲ.

IPL 2022 CSK vs KKR ಟಾಸ್ ಬೆನ್ನಲ್ಲೇ ಹೊಸ ದಾಖಲೆ ಬರೆದ ಕ್ಯಾಪ್ಟನ್ ಜಡೇಜಾ!

ಮಿಸ್ಟರ್​ 360 ಎಬಿ ಡಿವಿಲಿಯರ್ಸ್​: ಮಿಸ್ಟರ್​ 360 ಎಬಿ ಡಿವಿಲಿಯರ್ಸ್ (AB De Villiers) ರಿಟೈರ್ಡ್​ ಆಗಿ ಆರ್​ಸಿಬಿಗೆ ಮಾತ್ರ ಶಾಕ್ ಕೊಡಲಿಲ್ಲ, ಇಡೀ IPL​ಗೇ ಶಾಕ್ ಕೊಟ್ರು. IPL ಕಂಡ ದಿ ಬೆಸ್ಟ್​ ಫಿನಿಶರ್​ ಎಬಿಡಿ. ವಯಸ್ಸು 37. ಆದ್ರೂ ಫಿಟ್ನೆಸ್ ಸಮಸ್ಯೆಯಿಂದ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ. ಡಿವಿಲಿಯರ್ಸ್ ಸಹ ಅಷ್ಟೆ. ಡೆಲ್ಲಿ ಟೀಮ್​ನಲ್ಲಿದ್ದಾಗ ಸೈಲೆಂಟ್ ಆಗಿದ್ದರು. ಆದ್ರೆ ಆರ್​ಸಿಬಿ ಸೇರಿಕೊಂಡ ಮೇಲೆ ವೈಲೆಂಟ್ ಆದ್ರು. ಟಾರ್ಗೆಟ್ ಇಷ್ಟೇ ಇರಲಿ, ಎಬಿಡಿ ಬ್ಯಾಟ್ ಹಿಡಿದು ಕ್ರೀಸಿಗಿಳಿದ್ರೆ ಸಾಕು, ಎದುರಾಳಿ ಬೌಲಿಂಗ್ ಧೂಳಿಪಟ. ಮೂರು ಸೆಂಚುರಿಗಳನ್ನ ಬಾರಿಸಿದ್ದಾರೆ.

ಹಳಬರು ಹೋಗಬೇಕು, ಹೊಸಬರು ಬರಬೇಕು ನಿಜ. ಆದರೆ ಈ ಮಿಸ್ಟರ್​​ಗಳಿಲ್ಲದ IPL ಅನ್ನ ಊಹಿಸಿಕೊಳ್ಳಲು ಸಾಧ್ಯವಿಲ್ಲ. IPL​ನಲ್ಲಿ ಈ ತ್ರಿಮೂರ್ತಿಗಳ ಸ್ಥಾನವನ್ನ ಯಾರು ತುಂಬುತ್ತಾರೆ ಅನ್ನೋದೇ ಸದ್ಯಕ್ಕಿರುವ ಕುತೂಹಲ.