* ನೋಬಾಲ್ ಬಾರತೀಯ ತಂಡದ ಪಾಲಿಗೆ ದೊಡ್ಡ ವಿಲನ್* ದೀಪ್ತಿ ಹಾಕಿದ ನೋಬಾಲ್‌ಗೆ ಬೆಲೆತೆತ್ತ ಮಿಥಾಲಿ ರಾಜ್ ಪಡೆ* ಭಾರತೀಯರ ಐಸಿಸಿ ಟ್ರೋಫಿ ನುಚ್ಚುನೂರು ಮಾಡಿದ 3 ನೋಬಾಲ್ ಕಹಾನಿ

ಬೆಂಗಳೂರು(ಮಾ.28): ಶನಿ ಹೇಗೆಲ್ಲಾ ಬೆನ್ನೇರಬಹುದು ಅನ್ನೋದಕ್ಕೆ ಈ ಸ್ಟೋರಿ ಬೆಸ್ಟ್​ ಎಕ್ಸಾಂಪಲ್​​​. ಬರೀ ಒಂದಿಂಚು ನೋಬಾಲ್​ ಭಾರತಕ್ಕೆ ಐಸಿಸಿ ಟ್ರೋಫಿಗಳಲ್ಲಿ (ICC Trophies) ಇನ್ನಿಲ್ಲದಂತೆ ಕಾಟ ಕೊಟ್ಟಿದೆ. ಭಾರತೀಯ ಕ್ರಿಕೆಟ್ ಪ್ರೇಮಿಗಳ (Indian Cricket Fans) ಹೃದಯ ಚೂರಾಗಿಸಿದೆ. ಒಂದಲ್ಲ, ಎರಡಲ್ಲ ಬರೋಬ್ಬರಿ ಮೂರು ಬಾರಿ. ಇದರಿಂದ ಮೂರು ಐಸಿಸಿ ಟ್ರೋಫಿ ಗೆಲ್ಲುವ ಮಹಾದಾಸೆ ನುಚ್ಚು ನೂರಾಗಿದೆ. ಕೋಟ್ಯಾನುಕೋಟಿ ಕ್ರಿಕೆಟ್ ಪ್ರೇಮಿಗಳ ಹೃದಯ ಛಿದ್ರಗೊಂಡಿದೆ. ಅಂದಹಾಗೇ ಐಸಿಸಿ ಇವೆಂಟ್​ಗಳಲ್ಲಿ ಭಾರತಕ್ಕೆ ಎದುರಾಳಿಗಿಂತ ದೊಡ್ಡ ಶತ್ರು ರೀತಿಯಲ್ಲಿ ಕಾಡ್ತಿರೋ ಆ ದುಷ್ಮನ್​​ ಬೇರಾರು ಅಲ್ಲ, ಅದೇ ನೋ ಬಾಲ್​​.

ಭಾರತ ವನಿತೆಯರಿಗೆ ಸೆಮೀಸ್​ ಕನಸಿಗೆ ಕೊಳ್ಳಿಯಿಟ್ಟ ನೋ ಬಾಲ್​​..!

ಮಹಿಳಾ ಏಕದಿನ ವಿಶ್ವಕಪ್​​ನಲ್ಲಿ (ICC Women's World Cup) ಭಾರತ ವನಿತೆಯರ ಹೋರಾಟ ತೀರ ಬೇಸರದೊಂದಿಗೆ ಅಂತ್ಯಗೊಂಡಿದೆ. ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮಿಥಾಲಿ ರಾಜ್ (Mithali Raj) ಪಡೆಯ ಸೆಮಿಫೈನಲ್​​ ಕನಸಿಗೆ ಒಂದು ನೋ ಬಾಲ್​​ ಕೊಳ್ಳಿಯಿಟ್ಟಿದೆ. ಇನ್ನೇನು ಭಾರತ ಸೆಮೀಸ್​​​​​​ಗೆ ಎಂಟ್ರಿಕೊಟ್ಟೆ ಬಿಡ್ತು ಅನ್ನೋವಾಗ್ಲೇ ಒಂದಿಂಚು ನೋ ಬಾಲ್ (No Ball)​ ಶನಿ ರೀತಿಯಲ್ಲಿ ಮಿಥಾಲಿ ಬಳಗದ ಬೆನ್ನೇರಿತ್ತು.

ಹೌದು, ಗೆಲ್ಲಲು 276 ರನ್​ ಗುರಿ ಬೆನ್ನಟ್ಟಿದ್ದ ಆಫ್ರಿಕಾಗೆ ಕೊನೆ ಓವರ್​​ನಲ್ಲಿ 7 ರನ್​​ ಬೇಕಿತ್ತು. ಮೊದಲ ನಾಲ್ಕು ಎಸೆತಗಳಲ್ಲಿ ದೀಪ್ತಿ ಶರ್ಮಾ ಬರೀ 3 ರನ್​ ಬಿಟ್ಟುಕೊಟ್ರು. 5ನೇ ಎಸೆತದಲ್ಲಿ ವೆಲ್ ಸೆಟಲ್ಡ್​​ ಮಿಗ್​ನಾನ್ ವಿಕೆಟ್​ ಕಬಳಿಸಿ ಪಂದ್ಯಕ್ಕೆ ಟ್ವಿಸ್ಟ್​​ ತಂದುಕೊಟ್ರು. ಆದ್ರೆ ದುರಾದೃಷ್ಟ ಎಂಬಂತೆ ಈ ಎಸೆತವನ್ನ ಥರ್ಡ್​ ಅಂಪೈರ್ ನೋ ಬಾಲ್​ ಎಂದು ತೀರ್ಪು ನೀಡಿದ್ರು. ಎರಡು ರನ್ಸ್ ಬೋನಸ್ ರೀತಿಯಲ್ಲಿ ಪಡೆದ ಆಫ್ರಿಕಾ ಕೊನೆ ಎಸೆತದಲ್ಲಿ ಗೆಲುವು ದಾಖಲಿಸ್ತು. ಪಂದ್ಯ ಗೆದ್ದು ಸೆಮೀಸ್​​ಗೆ ಎಂಟ್ರಿಕೊಡಬೇಕಿದ್ದ ಭಾರತ ವೀರೋಚಿತ ಸೋಲುಂಡು ಟೂರ್ನಿಯಿಂದ ಹೊರಬಿತ್ತು.

2016ರ ಟಿ20 ವಿಶ್ವಕಪ್​​​​​​​​​ನಲ್ಲಿ ಪಾಂಡ್ಯ ನೋ ಬಾಲ್​​​. ಫೈನಲ್​ ಕನಸು ಛಿದ್ರ.

ಇನ್ನು ನಿನ್ನೆಯ ಪಂದ್ಯದಂತೆ 2016ರ ಟಿ20 ವಿಶ್ವಕಪ್ (ICC T20 World Cup)​ ನೋಡಿ ಭಾರತೀಯ ಕ್ರಿಕೆಟ್​ ಪ್ರಿಯರ ಹೃದಯ ಚೂರು ಚೂರಾಗಿತ್ತು. ಸೆಮಿಫೈನಲ್​​ನಲ್ಲಿ ಟೀಂ ಇಂಡಿಯಾ (Team India) ವಿಂಡೀಸ್​ಗೆ 193 ರನ್​​ ಗುರಿ ನೀಡಿತ್ತು. ಹಾರ್ದಿಕ್‌ ಪಾಂಡ್ಯ (Hardik Pandya) 50 ರನ್ ಆಗಿದ್ದಾಗ ಲೆಂಡಲ್​ ಸಿಮನ್ಸ್​ ಔಟ್ ಮಾಡಿದ್ರು. ಆದ್ರೆ ಅದು ನೋ ಬಾಲ್ ಆಗಿತ್ತು. ಇದರ ಲಾಭ ಪಡೆ ಸಿಮನ್ಸ್ ಬಳಿಕ ಸ್ಪೋಟಕ ಆಟವಾಡಿ ಭಾರತ ಫೈನಲ್​​​ ಆಸೆಗೆ ತಣ್ಣೀರೆರೆಚಿದ್ರು.

ICC Women's World Cup: ಭಾರತದ ಸೆಮೀಸ್ ಕನಸು ಭಗ್ನ, ರೋಚಕ ಸೋಲುಂಡ ಮಿಥಾಲಿ ಪಡೆ

ಬುಮ್ರಾ ನೋ ಬಾಲ್​​ನಿಂದ ಚಾಂಪಿಯನ್ಸ್ ಟ್ರೋಫಿ ಕೈಚೆಲ್ಲಿದ ಭಾರತ 

ಇನ್ನು ಈ ಪಂದ್ಯವನ್ನಂತೂ ಯಾವೊಬ್ಬ ಭಾರತೀಯ ಕ್ರಿಕೆಟ್​ ಪ್ರೇಮಿ ಮರೆಯೋಕೆ ಸಾಧ್ಯವಿಲ್ಲ. ಅದು 2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​​​ ಪಂದ್ಯ. 3 ರನ್​ ಗಳಿಸಿದ್ದಾಗ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಪಾಕಿಸ್ತಾನದ ಫಖರ್​ ಜಮಾನ್ ವಿಕೆಟ್​​​​​​​​​​ ಕಬಳಿಸಿದ್ರು. ಆದ್ರೆ ಅದು ನೋ ಬಾಲ್ ಆಗಿತ್ತು. ಇದರ ಲಾಭ ಪಡೆದ ಜಮಾನ್​ ಶತಕ ಬಾರಿಸಿ ಭಾರತಕ್ಕೆ ವಿಲನ್ ಆದ್ರು. ಭಾರತ 340 ರನ್ ಚೇಸ್​ ಮಾಡದೇ ಟ್ರೋಫಿ ಕೈಚೆಲ್ತು.

ಒಟ್ಟಿನಲ್ಲಿ ಈ ಮೂರು ನೋ ಬಾಲ್ಸ್​​​ ಭಾರತೀಯರ ಹೃದಯ ಚೂರಾಗಿಸಿದ್ದಂತೂ ಸುಳ್ಳಲ್ಲ. ಮತ್ತೊಮ್ಮೆ ಹೀಗೆ ಭಾರತೀಯರ ಹಾರ್ಟ್​ ಬ್ರೋಕನ್ ಆಗದಿರ್ಲಿ ಎಂದು ನಾವು ಆಶಿಸ್ತೀವಿ.