Asianet Suvarna News Asianet Suvarna News

29 ಶತಕ, 10 ಸಾವಿರಕ್ಕೂ ಅಧಿಕ ರನ್‌... ಈ 13 ವರ್ಷದ ಯುವ ಕ್ರಿಕೆಟಿಗ ಭವಿಷ್ಯದ ಆಶಾಕಿರಣ..!

ಜೂನಿಯರ್ ಕ್ರಿಕೆಟ್ ಕ್ಲಬ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಅಬೀರ್ ನಾಗ್‌ಪಾಲ್
13 ವರ್ಷದ ಯುವ ಕ್ರಿಕೆಟಿಗ ಹೆಸರಿನಲ್ಲಿ ಈಗಾಗಲೇ 29 ಶತಕ
ಅಬೀರ್ ನಾಗ್‌ಪಾಲ್ ಅವರು ಬ್ಯಾಟಿಂಗ್ ಸರಾಸರಿ 50+ ಇದೆ

29 Centuries and Over 10000 Runs 13 Year Old Abeer Nagpal Cricket Fans Remember the name kvn
Author
First Published Jan 4, 2023, 2:00 PM IST

ಬೆಂಗಳೂರು(ಜ.04): ನೀವು 13 ವರ್ಷದವರಾಗಿದ್ದಾಗ ಏನು ಮಾಡುತ್ತಿದ್ರಿ ಎಂದು ಕೇಳಿದರೆ, ಹೆಚ್ಚೆಂದರೆ ಒಂದೆರಡು ಸಾಲಿನಲ್ಲಿ ಉತ್ತರಿಸಬಹುದು. ಆದರೆ ಇಲ್ಲೊಬ್ಬ 13 ವರ್ಷದ ಅಬೀರ್ ನಾಗ್‌ಪಾಲ್ ಎನ್ನುವ ಪ್ರತಿಭಾನ್ವಿತ ಯುವ ಕ್ರಿಕೆಟಿಗನ ಬಳಿ ಇದೇ ಪ್ರಶ್ನೆ ಕೇಳಿದರೆ ನೀವೊಮ್ಮೆ ತಬ್ಬಿಬ್ಬಾಗೋದು ಗ್ಯಾರಂಟಿ. ಯಾಕೆಂದರೆ ಅಬೀರ್ ನಾಗ್‌ಪಾಲ್ ತಮ್ಮ 13ನೇ ವಯಸ್ಸಿನಲ್ಲೇ ಎದುರಾಳಿ ಬೌಲರ್‌ಗಳ ಪಾಲಿಗೆ ಸಿಂಹಸ್ವಪ್ನವಾಗಿ ಕಾಡುತ್ತಿದ್ದಾನೆ.  ಅಬೀರ್ ನಾಗ್‌ಪಾಲ್ ಅವರ ಬ್ಯಾಟಿಂದ ರನ್ ಮಳೆಯೇ ಹರಿಯುತ್ತಿದ್ದು, ಶತಕದ ಮೇಲೆ ಶತಕ ಸಿಡಿಸುವ ಮೂಲಕ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸುತ್ತಿದ್ದಾನೆ. ಜೂನಿಯರ್ ಕ್ಲಬ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಅಬೀರ್ ನಾಗ್‌ಪಾಲ್ ಅವರು ಬ್ಯಾಟಿಂಗ್ ಸರಾಸರಿ 50+ ಇದೆ ಎಂದರೇ ನೀವೇ ಯೋಚನೆ ಮಾಡಿದೆ.

ಹೌದು, ಡೆಲ್ಲಿ ಮೂಲದ ಯುವ ಬ್ಯಾಟರ್ ಅಬೀರ್ ನಾಗ್‌ಪಾಲ್, ಅವರ ಬ್ಯಾಟಿಂಗ್ ಪ್ರದರ್ಶನವನ್ನು ಗಮನಿಸಿದ ಹಲವರು, ಈತ ಭಾರತದ ಭವಿಷ್ಯದ ಕ್ರಿಕೆಟಿನಾಗಲಿದ್ದಾನೆ ಷರಾ ಬರೆಯುತ್ತಿದ್ದಾರೆ. ಅವನ ಬ್ಯಾಟಿಂಗ್ ಶೈಲಿ ಹಾಗೂ ರನ್‌ ಗಳಿಸುವ ರೀತಿಯನ್ನು ಗಮನಿಸಿದರೇ ಈ ಮಾತು ಉತ್ಪ್ರೇಕ್ಷೆಯೇನಲ್ಲ ಎನ್ನುವುದು ಎಂಥವರಿಗೂ ಭಾಸವಾಗುತ್ತದೆ. ಇದೇ ರೀತಿಯ ಪ್ರದರ್ಶನವನ್ನು ಅಬೀರ್ ನಾಗ್‌ಪಾಲ್ ಮುಂದುವರೆಸಿದರೇ ಖಂಡಿತಾ, ದೇಶವನ್ನು ಪ್ರತಿನಿಧಿಸಿದರೇ ಅಚ್ಚರಿಪಡುವಂತಿಲ್ಲ.

ಅಬೀರ್ ನಾಗ್‌ಪಾಲ್: ಈ ಹೆಸರು ನೆನಪಿಟ್ಟುಕೊಳ್ಳಿ:

ಅಬೀರ್ ನಾಗ್‌ಪಾಲ್ ಅವರ ಬ್ಯಾಟಿಂಗ್ ಕೇವಲ ಕ್ರಿಕೆಟ್ ಅಭಿಮಾನಿಗಳಿಗೆ ಮಾತ್ರವಲ್ಲದೇ, ದೊಡ್ಡ ದೊಡ್ಡ ಪತ್ರಕರ್ತರ ಗಮನ ಸೆಳೆಯುವಲ್ಲಿಯೂ ಯಶಸ್ವಿಯಾಗಿದೆ. ಖ್ಯಾತ ಪತ್ರಕರ್ತ ವಿಜಯ್ ಲೋಕಪಲ್ಲಿಯವರು, ಇದು ಅಬೀರ್ ನಾಗ್‌ಪಾಲ್, ಕೇವಲ 13 ವರ್ಷವಷ್ಟೇ. ಈಗಾಗಲೇ ಡೆಲ್ಲಿಯಲ್ಲಿನ ಜೂನಿಯರ್ ಕ್ಲಬ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ 10 ಸಾವಿರ ರನ್ ಬಾರಿಸಿದ್ದಾರೆ. ಎಲ್ಲದಕ್ಕೂ ದಾಖಲೆಯಿದೆ. ಈತನ ಹೆಸರನ್ನು ನೆನಪಿಟ್ಟುಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.

ಬಿಸಿಸಿಐನಿಂದ ಹೊರಗುಳಿದ ಸೌರವ್ ಗಂಗೂಲಿಗೆ ಐಪಿಎಲ್‌ನಲ್ಲಿ ಪ್ರಮುಖ ಹುದ್ದೆ!

13 ವರ್ಷದ ಅಬೀರ್ ದಾಖಲೆ ಕೇಳಿದ್ರೆ ನೀವೂ ದಂಗಾಗ್ತೀರ: 

ಹೌದು, ಕ್ರಿಕೆಟ್‌ ಸುದ್ದಿಗಳನ್ನು ವರದಿ ಮಾಡುವವರ ಪಾಲಿಗೆ ಅಬೀರ್ ನಾಗ್‌ಪಾಲ್ ಹೆಸರು ತೀರಾ ಚಿರಪರಿಚಿತ ಹೆಸರು ಎನಿಸಿಕೊಂಡಿದೆ. ಯಾಕೆಂದರೇ ಆ ಮಟ್ಟಿಗೆ ಅಬೀರ್, ತಮ್ಮ ಪ್ರದರ್ಶನದ ಮೂಲಕವೇ ಗಮನ ಸೆಳೆದಿದ್ದಾರೆ. ಇದುವರೆಗೂ 262 ಪಂದ್ಯಗಳನ್ನಾಡಿರುವ ಅಬೀರ್ ನಾಗ್‌ಪಾಲ್‌, 255 ಇನಿಂಗ್ಸ್‌ಗಳಲ್ಲಿ 50.01ರ ಬ್ಯಾಟಿಂಗ್ ಸರಾಸರಿಯಲ್ಲಿ 29 ಶತಕ ಹಾಗೂ 56 ಅರ್ಧಶತಕ ಸಹಿತ 10,203 ರನ್ ಬಾರಿಸಿದ್ದಾನೆ. ಇದರಲ್ಲಿ 179 ಸಿಕ್ಸ್‌ ಹಾಗೂ 1593 ಬೌಂಡರಿಗಳು ಸೇರಿವೆ. ಜೂನಿಯರ್ ಕ್ಲಬ್ ಕ್ರಿಕೆಟ್ ಟೂರ್ನಿಯಲ್ಲಿ ಅಬೀರ್ ಇದುವರೆಗೂ 41 ಬಾರಿ 30+ ರನ್ ಬಾರಿಸಿ ಮಿಂಚಿದ್ದಾರೆ. ಇನಿಂಗ್ಸ್‌ವೊಂದರಲ್ಲಿ ಅಜೇಯ 158 ರನ್ ಬಾರಿಸಿದ್ದು ಅಬೀರ್ ನಾಗ್‌ಪಾಲ್ ಅವರ ವೈಯುಕ್ತಿಕ ಗರಿಷ್ಠ ಸ್ಕೋರ್ ಎನಿಸಿಕೊಂಡಿದೆ.

Follow Us:
Download App:
  • android
  • ios