14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ 8 ತಂಡಗಳ ಬದಲಾಗಿ 10 ತಂಡಗಳು ಪಾಲ್ಗೊಳ್ಳುವ ಸಾಧ್ಯತೆಯಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ನವದೆಹಲಿ(ಡಿ.04): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಡಿ. 24 ರಂದು ಮುಂಬೈನಲ್ಲಿ ವಾರ್ಷಿಕ ಸಾಮಾನ್ಯ ಸಭೆ ನಡೆಸಲಿದೆ. ಈ ಸಭೆಯಲ್ಲಿ ಮುಖ್ಯವಾಗಿ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆ ಬಗ್ಗೆ ಚರ್ಚೆ ನಡೆಸಲಿದೆ. ಈ ಮೊದಲು ಹೊಸ ತಂಡದ ಬಗ್ಗೆ ಸುಳಿವು ನೀಡಿದ್ದ ಬಿಸಿಸಿಐ, ಇದೀಗ 2 ಹೊಸ ತಂಡಗಳು ಸೇರಿಸುವ ಬಗ್ಗೆ ಚರ್ಚೆ ನಡೆಸಲಿದೆ.
2016-17ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು 2 ವರ್ಷ ಅಮಾನತುಗೊಂಡಿದ್ದಾಗ ರೈಸಿಂಗ್ ಪುಣೆ ಮತ್ತು ಗುಜರಾತ್ ಲಯನ್ಸ್ ತಂಡಗಳು ಆಡಿದ್ದವು. ಇದೀಗ ಈ ಎರಡೂ ತಂಡಗಳು ಅಖಾಡ ಪ್ರವೇಶಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಲ್ಲದೇ ಅದಾನಿ ಹಾಗೂ ಸಂಜಯ್ ಗೋಯೆಂಕಾ ಸಂಸ್ಥೆಗಳಿಂದ ತಂಡ ಖರೀದಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಇಂದಿನಿಂದ ಆಸೀಸ್ ಎದುರು ಭಾರತಕ್ಕೆ ಟಿ20 ಅಗ್ನಿ ಪರೀಕ್ಷೆ
ಭಾರತ ತಂಡಕ್ಕೆ ಮೂವರು ನೂತನ ರಾಷ್ಟ್ರೀಯ ಆಯ್ಕೆಗಾರರನ್ನು ನೇಮಿಸುವ ಬಗ್ಗೆ ಚರ್ಚೆ ನಡೆಯಲಿದೆ. ಈ ನಡುವೆ ಉಪಾಧ್ಯಕ್ಷರ ಆಯ್ಕೆ ನಡೆಯಲಿದ್ದು, ಒಟ್ಟು 21 ವಿಷಯಗಳ ಬಗ್ಗೆ ವಾರ್ಷಿಕ ಸಭೆಯಲ್ಲಿ ಚರ್ಚೆಯಾಗಲಿದೆ. ಇನ್ನು ಏಷ್ಯಾ ಕ್ರಿಕೆಟ್ ಕೌನ್ಸಿಲ್‌ನಲ್ಲಿ ಬಿಸಿಸಿಐನ ಪ್ರತಿನಿಧಿಯ ಆಯ್ಕೆ ಕೂಡ ಆಗಲಿದೆ. ಜಾಗತಿಕ ಮಟ್ಟದಲ್ಲಿ ಬಿಸಿಸಿಐ ಕಾರ‍್ಯದರ್ಶಿ ಜಯ್ ಶಾ ಬಿಸಿಸಿಐನ ಪ್ರತಿನಿಧಿಯಾಗಿ ಭಾಗವಹಿಸುವುದು ಬಹುತೇಕ ಖಚಿತವಾಗಿದೆ.
