Coronavirus: ಪ್ರಮುಖ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ಡ್ರಿಲ್‌

  • ಪ್ರಮುಖ ಆಸ್ಪತ್ರೆಗಳಲ್ಲಿ ಕೊರೋನಾ ಚಿಕಿತ್ಸೆ ಡ್ರಿಲ್‌
  • -ಸೋಂಕಿತರಿಗೆ ಚಿಕಿತ್ಸೆ, ಆರೈಕೆ, ಮುನ್ನೆಚ್ಚರಿಕೆ ಬಗ್ಗೆ ವೈದ್ಯಕೀಯ ಸಿಬ್ಬಂದಿಗೆ ಅರಿವು
  • ಪಾಲಿಸಲೇ ಬೇಕಾದ ಕ್ರಮಗಳ ಜಾಗೃತಿ ಆಕ್ಸಿಜನ್‌ ಪ್ಲಾಂಟ್‌ಗಳ ಪರೀಕ್ಷೆ
Oronavirus Corona treatment drill in major hospitals at bengaluru rav

ಬೆಂಗಳೂರು (ಡಿ.28) : ನಗರದ ವಿವಿಧ ಆಸ್ಪತ್ರೆಗಳಲ್ಲಿ ಮಂಗಳವಾರ ಕೊರೋನಾ ತುರ್ತು ಆರೋಗ್ಯ ಪರಿಸ್ಥಿತಿ ನಿರ್ವಹಣೆ ಕುರಿತು ಅಣಕು ಪ್ರದರ್ಶನ (ಮಾಕ್‌ ಡ್ರಿಲ್‌) ನಡೆಯಿತು. ವಿಕ್ಟೋರಿಯಾ ಆಸ್ಪತ್ರೆ, ಇಂದಿರಾ ನಗರದ ಸರ್‌ ಸಿ.ವಿ.ರಾಮನ್‌ ಆಸ್ಪತ್ರೆ, ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ ಸೇರಿ ಪ್ರಮುಖ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರನ್ನು ಯಾವ ರೀತಿ ಚಿಕಿತ್ಸೆ ನೀಡಬೇಕು, ಆರೈಕೆ ಮಾಡಬೇಕು ಎಂದು ವೈದ್ಯರು, ಶುಶ್ರೂಷಕರು ಹಾಗೂ ಸಿಬ್ಬಂದಿಗೆ ಅರಿವು ಮೂಡಿಸಲಾಯಿತು. ಆಕ್ಸಿಜನ್‌ ಪ್ಲಾಂಟ್‌, ಆಕ್ಸಿಜನ್‌ ಜನರೇಟರ್‌ ಸೇರಿದಂತೆ ಕೋವಿಡ್‌ ಉಪಕರಣಗಳು ಸರಿಯಾಗಿದೆಯೇ ಎನ್ನುವುದನ್ನು ಪರಿಶೀಲನೆ ನಡೆಸಲಾಯಿತು.

ಆ್ಯಂಬುಲೆನ್ಸ್‌(Amblulance)ನಿಂದ ಬಂದ ರೋಗಿಯನ್ನು ತುರ್ತು ನಿಗಾಕ್ಕೆ ಕೊರೆದೊಯ್ಯಿವುದು ಅಲ್ಲಿಂದ ವಿವಿಧ ಪರೀಕ್ಷೆ ತಪಾಸಣೆ ನಡೆಸಿ ವಾರ್ಡ್‌ಗೆ ವರ್ಗಾವಣೆ ಮಾಡಿ ಅಲ್ಲಿನ ಚಿಕಿತ್ಸಾ ವಿಧಾನಗಳನ್ನು ಹಿರಿಯ, ಪರಿಣಿತ ವೈದ್ಯರು ಸಿಬ್ಬಂದಿಗಳಿಗೆ ವಿವರಿಸಿದರು. ಎದುರಾಗುವ ಗೊಂದಲಗಳು, ಕಡ್ಡಾಯವಾಗಿ ಪಾಲಿಸಬೇಕಾದ ಕ್ರಮಗಳ ಕುರಿತು ಮಾರ್ಗದರ್ಶನ ನೀಡಲಾಯಿತು. ಈ ಕುರಿತು ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ ರಮೇಶ್‌ ಕೃಷ್ಣ ಮಾತನಾಡಿ, ಕೊರೋನಾ ಸೋಂಕಿತರು ಆಸ್ಪತ್ರೆಗೆ ಆಗಮಿಸಿದಾಗ ಅವರನ್ನು ಯಾವ ರೀತಿ ಉಪಚರಿಸಬೇಕು. ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳನ್ನು ಯಾವ ರೀತಿ ಆರೈಕೆ ಮಾಡಬೇಕು ಎಂಬುದನ್ನು ತಿಳಿಸಲಾಗುತ್ತಿದೆ. ಸೋಂಕಿತರ ಚಿಕಿತ್ಸೆಗಾಗಿ 50 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

 

ಲಸಿಕೆ ಹಾಕಿಸಿಕೊಂಡವರಿಗೂ ಮತ್ತೆ ವಕ್ಕರಿಸುತ್ತೆ ಕೋವಿಡ್, ರೋಗ ಲಕ್ಷಣಗಳೇನು ?

ಇಂದಿರಾ ನಗರದ ಸರ್‌ ಸಿ.ವಿ.ರಾಮನ್‌ ಆಸ್ಪತ್ರೆ(Sir CV Raman Hospital)ಯಲ್ಲಿ ವೈದ್ಯಕೀಯ ಅಧೀಕ್ಷಕ ಡಾ ರಾಧಾಕೃಷ್ಣ ನೇತೃತ್ವದಲ್ಲಿ ಅಣಕು ಪ್ರದರ್ಶನ ನಡೆಯಿತು. ಆಸ್ಪತ್ರೆಯಲ್ಲಿ ಕೇಂದ್ರೀಯಾ ನಿಗಾ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದ್ದು, ಒಟ್ಟು 90 ಹಾಸಿಗೆಗಳ ವ್ಯವಸ್ಥೆ ಮಾಡಿಕೊಂಡಿರುವುದಾಗಿ ಆಸ್ಪತ್ರೆ ವೈದ್ಯಾಧಿಕಾರಿಗಳು ಮಾಹಿತಿ ನೀಡಿದರು. ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ(Kc genral hospital)ಯಲ್ಲಿ ಕೈಗೊಂಡಿರುವ ಸಿದ್ಧತೆಗಳು ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡುವ ಕುರಿತು ಜಾಗೃತಿ ಮೂಡಿಸಲಾಯಿತು. ಈ ವೇಳೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ ಇಂದಿರಾ ಕಬಾಡೆ ಹಾಗೂ ಸ್ಥಾನಿಕ ವೈದ್ಯಾಧಿಕಾರಿ ಆರ್‌.ಎಂ. ಮೋಹನ್‌ ಇತರೆ ವೈದ್ಯರು ಹಾಗೂ ಸಿಬ್ಬಂದಿ ಹಾಜರಿದ್ದರು.

ಬೌರಿಂಗ್‌ನಲ್ಲಿ ಅಣಕು ನಡೆಸಿಲ್ಲ

ಬೌರಿಂಗ್‌ ಆಸ್ಪತ್ರೆ(Bowring Hospital)ಯಲ್ಲಿ ಯಾವುದೇ ಅಣಕು ಪ್ರದರ್ಶನ ನಡೆಯಲಿಲ್ಲ. ಆಸ್ಪತ್ರೆಯು ಕಳೆದ ಮೂರು ಅಲೆಗಳಿಂದ ಕೊರೋನಾ(Corona) ಚಿಕಿತ್ಸೆ ನೀಡುತ್ತಿದ್ದು, ಕೊರೋನಾ ವಾರ್ಡ್‌ ಮುಚ್ಚಿಯೇ ಇಲ್ಲ. ಹೀಗಾಗಿ, ಅಣಕು ಪ್ರದರ್ಶನದ ಅಗತ್ಯವಿಲ್ಲ. ಅಲ್ಲದೆ ಈ ಕುರಿತು ಸರ್ಕಾರದಿಂದ ಯಾವುದೇ ಲಿಖಿತ ಆದೇಶ ಬಂದಿಲ್ಲ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಕೆಂಪರಾಜು ತಿಳಿಸಿದರು.

ಬೌರಿಂಗಲ್ಲಿ 60 ಹಾಸಿಗೆ, 10 ಐಸಿಯು ಮೀಸಲು

ವಿಮಾನ ನಿಲ್ದಾಣ(Airport)ದಲ್ಲಿ ಸೋಂಕು ದೃಢಪಟ್ಟವರನ್ನು ದಾಖಲಿಸಲಾಗುತ್ತದೆ. ಯಾವುದೇ ಸರ್ಕಾರಿ ಆಸ್ಪತ್ರೆಯಲ್ಲಿ ಸೋಂಕು ವರದಿಯಾದರೆ ಅವರನ್ನೂ ಬೌರಿಂಗ್‌ ಆಸ್ಪತ್ರೆಗೆ ರೆಫರ್‌ ಮಾಡಲಾಗುತ್ತದೆ. ಆಸ್ಪತ್ರೆಯ 8ನೇ ಮಹಡಿಯಲ್ಲಿ ಮೀಸಲಿಟ್ಟಿರುವ ವಾರ್ಡ್‌ನಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ 60 ಹಾಸಿಗೆ ಹಾಗೂ 10 ಐಸಿಯು ಹಾಸಿಗೆ ಮೀಸಲಿಡಲಾಗಿದೆ. ಸರ್ಕಾರ ಏನಾದರೂ ಹಾಸಿಗೆ ಸಂಖ್ಯೆ ಹೆಚ್ಚಿಸಲು ಸೂಚಿಸಿದರೆ 150ಕ್ಕೆ ಏರಿಕೆ ಮಾಡಲಾಗುವುದು ಎಂದು ಅಧೀಕ್ಷಕ ಕೆಂಪರಾಜು ತಿಳಿಸಿದರು.

Covid Vaccine ಖರೀದಿ ಬಂದ್: ಸರ್ಕಾರದ ಬಳಿಯಿದೆ 6 ತಿಂಗಳಿಗೆ ಸಾಕಾಗುವಷ್ಟು ಲಸಿಕೆ ಸಂಗ್ರಹ

ಸಿಬ್ಬಂದಿ ಕೂಡ ಉತ್ತಮ ತರಬೇತಿ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ಮೂರು ಆಕ್ಸಿಜನ್‌ ಘಟಕಗಳಿದ್ದು, ಸದ್ಯ ಎರಡು ಘಟಕಗಳು ಕಾರ್ಯ ನಿರ್ವಹಿಸುತ್ತಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಒಂದು ಘಟಕದಿಂದ ಸಿಗುವ ಆಕ್ಸಿಜನ್‌ ಸಾಕಾಗುತ್ತಿದೆ. ಆಸ್ಪತ್ರೆಗೆ ಹತ್ತು ದಿನಗಳ ಹಿಂದೆ ಒಬ್ಬ ರೋಗಿ ಚಿಕಿತ್ಸೆ ಪಡೆದಿದ್ದಾರೆ. ಮಂಗಳವಾರ ಸಂಜೆ ಸ್ಥಳೀಯ 85 ವರ್ಷದ ವೃದ್ಧೆಯೊಬ್ಬರು ದಾಖಲಾಗಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios