ಈ ವರ್ಷ ಕರ್ನಾಟಕದಲ್ಲಿ ಕೋವಿಡ್‌ಗೆ ಮೊದಲ ಬಲಿ

ರಾಜ್ಯದಲ್ಲಿ ಮಂಗಳವಾರ 17 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 36 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಕಳೆದ ವರ್ಷ (2022) ಡಿಸೆಂಬರ್‌ 31ರಂದು ಸೋಂಕಿತರ ಸಾವು ವರದಿಯಾಗಿತ್ತು. ಆ ಬಳಿಕ ಸಾವು ಶೂನ್ಯವಿತ್ತು. 

First Covid Patient Dies in Karnataka 2023 grg

ಬೆಂಗಳೂರು(ಜ.18):  ಪ್ರಸಕ್ತ ವರ್ಷದಲ್ಲಿ ಕೊರೋನಾ ಸೋಂಕಿಗೆ ಮೊದಲ ಬಲಿಯಾಗಿದ್ದು, ಕೊಪ್ಪಳದಲ್ಲಿ 65 ವರ್ಷದ ವೃದ್ಧೆಯೊಬ್ಬರು ಸೋಂಕಿನಿಂದ ಸಾವಿಗೀಡಾಗಿದ್ದಾರೆ. ರಾಜ್ಯದಲ್ಲಿ ಮಂಗಳವಾರ 17 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, 36 ಮಂದಿ ಗುಣಮುಖರಾಗಿದ್ದಾರೆ. ಒಬ್ಬರು ಮೃತಪಟ್ಟಿದ್ದಾರೆ. ಕಳೆದ ವರ್ಷ (2022) ಡಿಸೆಂಬರ್‌ 31ರಂದು ಸೋಂಕಿತರ ಸಾವು ವರದಿಯಾಗಿತ್ತು. ಆ ಬಳಿಕ ಸಾವು ಶೂನ್ಯವಿತ್ತು. ಜ.15 ರಂದು ಕೊಪ್ಪಳದಲ್ಲಿ ಕೊರೋನಾ ತಗುಲಿದ್ದ ವೃದ್ಧೆ ಸಾವಿಗೀಡಾಗಿದ್ದು, ಜ.17ರಂದು ಆರೋಗ್ಯ ಇಲಾಖೆ ಬುಲಿಟಿನ್‌ನಲ್ಲಿ ವರದಿಯಾಗಿದೆ. ವೃದ್ಧೆಗೆ ಕ್ಷಯ (ಟಿಬಿ) ಕೂಡಾ ಇತ್ತು.

7,716 ಸೋಂಕು ಪರೀಕ್ಷೆಗಳು ನಡೆದಿದ್ದು, ಪಾಸಿಟಿವಿಟಿ ದರ ಶೇ 0.2 ರಷ್ಟುದಾಖಲಾಗಿದೆ. ಸೋಮವಾರಕ್ಕೆ ಹೋಲಿಸಿದರೆ ಸೋಂಕು ಪರೀಕ್ಷೆಗಳು ಐದು ಸಾವಿರ ಹೆಚ್ಚು ನಡೆಸಲಾಗಿದೆ. ಹೊಸ ಪ್ರಕರಣಗಳು 7 ಇಳಿಕೆಯಾಗಿವೆ. (ಸೋಮವಾರ 24 ಪ್ರಕರಣ, ಶೂನ್ಯ ಸಾವು).

ಬೆಳಗಾವಿಯಿಂದ ಉತ್ತರ ಕನ್ನಡ ಜಿಲ್ಲೆಗೆ ಬಂತು 6 ಸಾವಿರ ಕೋವಿಶೀಲ್ಡ್ ಲಸಿಕೆ

ಬೆಂಗಳೂರು ಒಂದರಲ್ಲಿಯೇ 17 ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿ ಪ್ರಸ್ತುತ 103 ಸಕ್ರಿಯ ಕೊರೋನಾ ಸೋಂಕಿತರಿದ್ದು, ಈ ಪೈಕಿ 7 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 96 ಮಂದಿ ಮನೆಯ ಆರೈಕೆಯಲ್ಲಿದ್ದಾರೆ.

ವರ್ಷದ ಮೊದಲ ಸಾವು:

ಕಳೆದ ವರ್ಷ (2022) ಡಿಸೆಂಬರ್‌ 31ರಂದು ಸೋಂಕಿತರ ಸಾವು ವರದಿಯಾಗಿತ್ತು. ಆ ಬಳಿಕ ಸಾವು ಶೂನ್ಯವಿತ್ತು. ಜ.15 ರಂದು ಕೊಪ್ಪಳದಲ್ಲಿ ಕೊರೋನಾ ತಗುಲಿದ್ದ ವೃದ್ಧೆ ಸಾವಿಗೀಡಾಗಿದ್ದು, ಜ.17ರಂದು ಆರೋಗ್ಯ ಇಲಾಖೆ ಬುಲಿಟಿನ್‌ನಲ್ಲಿ ವರದಿಯಾಗಿದೆ. ವೃದ್ಧೆಗೆ ಕ್ಷಯ (ಟಿಬಿ) ಕೂಡಾ ಇತ್ತು. ಎರಡು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಳ್ಳದೆ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios