Covid Mask ಮಾಸ್ಕ್ ಕಡ್ಡಾಯ ನಿಮಯ ಹಿಂತೆಗೆಯಬೇಕೆ? ಜನಸಾಮಾನ್ಯರ ಅಭಿಪ್ರಾಯವೇನು?

  • ಕೊರೋನಾ ಇಳಿಮುಖ, ಮಾಸ್ಕ್ ಬೇಕು, ಬೇಡ ಚರ್ಚೆ
  • ಹಲವು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮ ವಾಪಸ್
  • ಕರ್ನಾಟಕಗಲ್ಲಿ ಮಾಸ್ಕ್ ನಿಯಮ ಕುರಿತು ಜನರ ಅಭಿಪ್ರಾಯ
     
Covid active cases decline Karnataka people react on lift mask mandate rule on social media koo ckm

ಬೆಂಗಳೂರು(ಏ.05): ಚೀನಾ, ಯೂರೋಪ್ ಸೇರಿದಂತೆ ಕೆಲ ಭಾಗಗಳಲ್ಲಿ ಕೊರೋನಾ ಏರಿಕೆಯಾಗುತ್ತಿದ್ದರೂ ಭಾರತದಲ್ಲಿ ನಿಯಂತ್ರಣದಲ್ಲಿದೆ. ದಿನದಿಂದ ದಿನಕ್ಕೆ ಪ್ರಕರಣ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಮಾಸ್ಕ್ ಕಡ್ಡಾಯ ನಿಯಮವನ್ನು ರಾಜ್ಯದಲ್ಲಿ ಸಡಿಲಗೊಳಿಸುವ ಬಗ್ಗೆ  ಈಗಾಗಲೇ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಜನರು ಬಗೆ ಬಗೆಯ ಅಭಿಪ್ರಾಯಗಳು ವ್ಯಕ್ತಪಡಿಸುತ್ತಿದ್ದಾರೆ. 

ಮೈಕ್ರೋ ಬ್ಲಾಗಿಂಗ್ ವೇದಿಕೆ ಕೂ ನಲ್ಲಿ #ಮಾಸ್ಕ್_ಕಡ್ಡಾಯ ಎನ್ನುವ ಹ್ಯಾಶ್ಟ್ಯಾಗ್ ಅಡಿ ನೆಟ್ಟಿಗರು ಮಾಸ್ಕ್ ಬೇಕೇ ಬೇಡವೇ ಎನ್ನುವ ಬಗ್ಗೆ ವಿವಿಧ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.  ಕೆಲವರು ಕೊರೋನಾ ಇರಲಿ ಬಿಡಲಿ ಮಾಸ್ಕ್ ಧರಿಸುವುದು ಒಳ್ಳೆಯದು ಎಂದು ಹೇಳಿದರೆ, ಇನ್ನು ಕೆಲವರು ಅಯ್ಯೋ ಎರಡುವರ್ಷದಿಂದ ಮಾಸ್ಕ್ ಧರಿಸಿ ಸಾಕಾಗಿದೆ ಎಂದೂ ಹೇಳಿದ್ದಾರೆ.

ದೇಶದ ಹಲವು ರಾಜ್ಯಗಳು ಮಾಸ್ಕ್ ಕಡ್ಡಾಯವಲ್ಲ ಎಂದು ಘೋಷಿಸಿದೆ. ಕರ್ನಾಟಕದಲ್ಲೂ ಈ ಕುರಿತು ಚರ್ಚೆ, ಚಿಂತನೆ ನಡೆಯುತ್ತಿದೆ. ನೆರೆಯ ಚೀನಾದಲ್ಲಿ ಮತ್ತೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದರಿಂದ ಮಾಸ್ಕ್ ನಿಯಮ ಹಿಂತೆಗೆದುಕೊಳ್ಳವುದು ಸೂಕ್ತವಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ. 

'ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಲಾಗಿದೆ. ಸದ್ಯದಲ್ಲೇ ಕರ್ನಾಟಕದಲ್ಲೂ ಈ ನಿಯಮವನ್ನು ಸಡಿಲಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಆದರೆ ಆರೋಗ್ಯದ ದೃಷ್ಟಿಯಿಂದ, ಸ್ವಲ್ಪ ದಿನಗಳ ಮಟ್ಟಿಗೆ, ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಒಳಿತು. ಯಾಕೆಂದರೆ ಕೊರೊನಾದಿಂದ ನಾವಿನ್ನೂ ಸಂಪೂರ್ಣವಾಗಿ ಮುಕ್ತಿಯನ್ನು ಪಡೆದಿಲ್ಲ ಎಂದು ಶಿಕ್ಷಕಿ ಸವಿತಾ ಕೂ ಮಾಡಿದ್ದಾರೆ.

 

Koo App
#ಮಾಸ್ಕ್_ಕಡ್ಡಾಯ ಬೇರೆ ಬೇರೆ ರಾಜ್ಯಗಳಲ್ಲಿ ಈಗಾಗಲೇ ಮಾಸ್ಕ್ ಕಡ್ಡಾಯ ನಿಯಮವನ್ನು ಸಡಿಲಗೊಳಿಸಲಾಗಿದೆ. ಸದ್ಯದಲ್ಲೇ ಕರ್ನಾಟಕದಲ್ಲೂ ಈ ನಿಯಮವನ್ನು ಸಡಿಲಗೊಳಿಸುವ ಬಗ್ಗೆ ಸರ್ಕಾರ ಚಿಂತಿಸುತ್ತಿದೆ. ಆದರೆ ಆರೋಗ್ಯದ ದೃಷ್ಟಿಯಿಂದ, ಸ್ವಲ್ಪ ದಿನಗಳ ಮಟ್ಟಿಗೆ, ಜನಸಂದಣಿ ಇರುವ ಪ್ರದೇಶದಲ್ಲಿ ಮಾಸ್ಕ್ ಧರಿಸುವುದು ಒಳಿತು. ಯಾಕೆಂದರೆ ಕೊರೊನಾದಿಂದ ನಾವಿನ್ನೂ ಸಂಪೂರ್ಣವಾಗಿ ಮುಕ್ತಿಯನ್ನು ಪಡೆದಿಲ್ಲ. #ಸವಿತಾಸಿಂಚನ✍️ #ದಿನದಕೂ
 
- ಸವಿತಾ (@ಗಡಿನಾಡ_ಕನ್ನಡತಿ) 5 Apr 2022

Covid active cases decline Karnataka people react on lift mask mandate rule on social media koo ckm

 

ಪಂಚೇಂದ್ರಿಯಗಳಲಿ ನಾಸಿಕವು ಒಂದು, ಜೀವಾನಿಲದ ಹೀರುವಿಕೆಯ ಇದರ ಕಾರ್ಯ ಸೂಕ್ಷ್ಮವಾದದು,ಗಾಳಿಯಲಿ ಮುಕ್ಕಾಲು ಭಾಗ ಸಾರಜನಕ, ಮತ್ತಿತ್ತರ ಅನಿಲಗಳಿರಲೂ ಕೇವಲ ಆಮ್ಲಜನಕವನಷ್ಟೇ ಹೀರುವ ಶ್ವಾಸನಾಳಕ್ಕೆ,ಮಾಸ್ಕ್ ನಿಂದ ರಿಸ್ಕೇ ಆಗುತಿದೆ, ಮಾಸ್ಕ್ ಧರಿಸಿದಾಗ ನಿಶ್ವಾಸದಲಿ ಹೊರಹೋಗುವ ಇಂಗಾಲದ ಡೈ ಆಕ್ಸೈಡ್ ಮಾಸ್ಕನಲ್ಲೆ ಬಹುಕಾಲ ಉಳಿದು, ಮತ್ತದೆ ಅನಿಲ ಸೇವನೆಯಿಂದ ಶ್ವಾಸಕೋಶಕ್ಕೆ ತೊಂದರೆ ಇದೆ, ಮಾಸ್ಕ ಬದಲು ಅಂತರಪಾಲಿಸಿ, ಕೊರೋನಾ ಓಡಿಸಿ ಎಂದು ಕವಿಸುತ ಕೂನಲ್ಲಿ ಆಗ್ರಹಿಸಿದ್ದಾರೆ. 

'ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಬಳಸುವುದು ವೈಯಕ್ತಕವಾಗಿ ಲಾಭದಾಯಕ ಎಂದು ಬಸವರಾಜು ಕೂ ಮಾಡಿದ್ದಾರೆ. '#ಮಾಸ್ಕ್_ಕಡ್ಡಾಯ ಮಾಡುವುದು ಒಳ್ಳೆಯದು. ಕಾರಣ ಕೇವಲ ಕೊರೊನಾಒಂದೇ ಅಲ್ಲ.ಪರಿಸರ ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲೆಲ್ಲಿಯೂ ಬರಿ ಧೂಳು ರಸ್ತೆಗಳ ನಿರ್ಮಾಣ ಕಾಮಗಾರಿ ನಡೆಯುತ್ತಲೇ ಇರುತ್ತವೆ. ಕೊರೊನಾ ಯಾವಗ ಸೃಷ್ಟಿ ಆಗುತ್ತದೆಯೇ ಗೊತ್ತಾಗುವುದಿಲ್ಲ. ಹಾಗಾಗಿ ಮಾಸ್ಕ್ ಕಡ್ಡಾಯ ಆದರೆ ಸೂಕ್ತ' ಎಂದು ರೇಖಾ ವಿ ಸಿಂಗ್ ಬರೆದುಕೊಂಡಿದ್ದಾರೆ. 
&

Covid active cases decline Karnataka people react on lift mask mandate rule on social media koo ckm

 

'ನಮ್ಮ ಅರೋಗ್ಯ ನಮ್ಮ ಕೈ ಯಲ್ಲಿ ಅನ್ನೋ ಹಾಗೆ ಮಾಸ್ಕ ಬಳಸೋದು ಬಿಡೋದು ಅವರ ಅವರ ವಿಚಾರ ಆದಷ್ಟು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ ಬಳಸೋದು ಉತ್ತಮ. ಆ ಅಲೆ ಬಂತು ಈಗ ಈ ಅಲೆ ಬಂತು ಅಂತ ಭಯದಲ್ಲಿ ಇರೋದಕ್ಕಿಂತ ನಮ್ಮ ನಮ್ಮ ಎಚ್ಚರಿಕೆಯಲ್ಲಿ ಇರೋದು ಉತ್ತಮ' ಎನ್ನುವುದು ಮಧು ಅವರ ಅಭಿಪ್ರಾಯ. 

'ದೇಶದಲ್ಲಿ ಸುಮಾರು 1000 ಮತ್ತು ರಾಜ್ಯದಲ್ಲಿ 30 ಆಸುಪಾಸು ಕೊರೊನ ಪ್ರಕರಣಗಳಿವೆ!  ನಿಮ್ಮ ಪ್ರಕಾರ ”ಮಾಸ್ಕ್” ಇನ್ನೂ  ಅಗತ್ಯವಿದೆಯೇ? ಎಂಬ ಮಂಜುನಾಥ್ ಪಾಪಣ್ಣ ಅವರ ಪೋಲ್ ಗೆ ಮಾಸ್ಕ್ ಅಗತ್ಯವಿದೆ ಎಂದೇ ಬಹುತೇಕರು ವೋಟ್ ಮಾಡಿದ್ದಾರೆ. 

Latest Videos
Follow Us:
Download App:
  • android
  • ios