Asianet Suvarna News Asianet Suvarna News

ಕೋವಿಡ್‌ 7 ತಿಂಗಳ ಗರಿಷ್ಠ: ಸಕ್ರಿಯ ಕೇಸಲ್ಲಿ ದೇಶಕ್ಕೆ ಕರ್ನಾಟಕ ನಂ.2..!

ದೇಶದಲ್ಲಿ ನಿತ್ಯ ಸರಾಸರಿ 310 ಪ್ರಕರಣಗಳು ವರದಿಯಾಗುತ್ತಿವೆ. ಪರಿಣಾಮ ಡಿ.6ರಂದು ಕೇವಲ 587 ಇದ್ದ ಸಕ್ರಿಯ ಪ್ರಕರಣ ಡಿ.20ರ ಮಧ್ಯಾಹ್ನ 12 ಗಂಟೆ ವೇಳೆಗೆ 2311ಕ್ಕೆ ತಲುಪಿದೆ. ಅಂದರೆ ಕೇವಲ ಎರಡೇ ವಾರದಲ್ಲಿ ಆರು ಪಟ್ಟು ಹೆಚ್ಚಾಗಿದೆ.

92 Coronavirus Positive Case in Karnataka  grg
Author
First Published Dec 21, 2023, 4:05 AM IST

ಬೆಂಗಳೂರು(ಡಿ.21): ದೇಶದಲ್ಲಿ ಹೊಸ ಕೋವಿಡ್‌ ಪ್ರಕರಣಗಳು ಏರುಮುಖವಾಗಿರುವ ನಡುವೆಯೇ, ರಾಜ್ಯದಲ್ಲೂ ಸೋಂಕು ದಿನೇ ದಿನೇ ಏರಿಕೆಯಾಗುತ್ತಿದ್ದು ಸಕ್ರಿಯ ಪ್ರಕರಣಗಳಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ಏರಿದೆ. 2041 ಸಕ್ರಿಯ ಪ್ರಕರಣಗಳೊಂದಿಗೆ ನೆರೆಯ ಕೇರಳ ಮೊದಲ ಸ್ಥಾನದಲ್ಲಿದ್ದರೆ, 92 ಪ್ರಕರಣಗಳೊಂದಿಗೆ ಕರ್ನಾಟಕ 2ನೇ ಸ್ಥಾನ ತಲುಪಿರುವುದು ಆತಂಕ ಮೂಡಿಸಿದೆ.

ದೇಶದಲ್ಲಿ ನಿತ್ಯ ಸರಾಸರಿ 310 ಪ್ರಕರಣಗಳು ವರದಿಯಾಗುತ್ತಿವೆ. ಪರಿಣಾಮ ಡಿ.6ರಂದು ಕೇವಲ 587 ಇದ್ದ ಸಕ್ರಿಯ ಪ್ರಕರಣ ಡಿ.20ರ ಮಧ್ಯಾಹ್ನ 12 ಗಂಟೆ ವೇಳೆಗೆ 2311ಕ್ಕೆ ತಲುಪಿದೆ. ಅಂದರೆ ಕೇವಲ ಎರಡೇ ವಾರದಲ್ಲಿ ಆರು ಪಟ್ಟು ಹೆಚ್ಚಾಗಿದೆ.

ಕೋವಿಡ್ 4ನೇ ಅಲೆ ಕಟ್ಟಿಹಾಕಲು ಆರೋಗ್ಯ ಇಲಾಖೆ ಪ್ಲ್ಯಾನ್ ರಿವೀಲ್ ಮಾಡಿದ ಸಚಿವ ದಿನೇಶ್ ಗುಂಡೂರಾವ್!

ದಿನೇ ದಿನೇ ಹೆಚ್ಚಳ:

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಶೇ.1.72 ಪಾಸಿಟಿವಿಟಿ ದರದಂತೆ ಸರಾಸರಿ 17 ಪ್ರಕರಣ ವರದಿಯಾಗುತ್ತಿವೆ. ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿವೆ. ಈ ಪೈಕಿ ಡಿ.18 ರಂದು ಒಂದೇ ದಿನ 27 ಪ್ರಕರಣ ವರದಿಯಾಗಿದ್ದರೆ, ಡಿ.19 ರಂದು 44 ಪ್ರಕರಣ ವರದಿಯಾಗಿವೆ. ಡಿ.20 ರಂದು 22 ಪ್ರಕರಣ ವರದಿಯಾಗಿವೆ.

7 ಮಂದಿ ಐಸಿಯುನಲ್ಲಿ:

ರಾಜ್ಯದಲ್ಲಿನ 92 ಸೋಂಕಿತರಲ್ಲಿ 72 ಮಂದಿ ಹೋಂ ಐಸೊಲೇಷನ್‌ನಲ್ಲೇ ಇದ್ದಾರೆ. ಉಳಿದಂತೆ 20 ಮಂದಿ ಆಸ್ಪತ್ರೆಯಲ್ಲಿದ್ದು ಈ ಪೈಕಿ 7 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಿ.19ರ ವರದಿ ಪ್ರಕಾರ ಗರಿಷ್ಠ ಕೊರೋನಾ ಪರೀಕ್ಷೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 2,394, ಕರ್ನಾಟಕದಲ್ಲಿ 1,112 (ಡಿ.20 ರಂದು 808), ಕೇರಳದಲ್ಲಿ 1,094 ಪರೀಕ್ಷೆ ನಡೆಸಲಾಗಿದೆ.

ಕೋವಿಡ್ ಹೊಸ ವೈರಸ್‌ಗೆ 2 ಬಲಿ: ಶತಕದ ಗಡಿ ತಲುಪಿದ ಸೋಂಕಿತರ ಸಂಖ್ಯೆ!

ವಿಶ್ವದಾದ್ಯಂತ ನಿತ್ಯ 51,214 ಸರಾಸರಿ ವರದಿಯಾಗುತ್ತಿದ್ದು 2.16 ಕೋಟಿ ಸಕ್ರಿಯ ಸೋಂಕಿತರು ವಿಶ್ವದಾದ್ಯಂತ ಇದ್ದಾರೆ. ಈ ಪೈಕಿ ಬ್ರೆಜಿಲ್‌ 11.73 ಲಕ್ಷ, ಅಮೆರಿಕ 9.89 ಲಕ್ಷ, ವಿಯೆಟ್ನಾಂ 9.39 ಲಕ್ಷದಷ್ಟಿದೆ. ವಿಶ್ವದ ಒಟ್ಟಾರೆ ಪ್ರಕರಣಗಳಲ್ಲಿ ಭಾರತದಲ್ಲಿ ಶೇ.0.009 ರಷ್ಟು ಮಾತ್ರ ಇವೆ. ಹೀಗಾಗಿ ಯಾವುದೇ ರೀತಿಯ ಆತಂಕ ಪಡಬೇಕಾಗಿಲ್ಲ. ಆದರೆ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್‌ 3 ಸಕ್ರಿಯ ಕೇಸುಗಳಿರುವ ರಾಜ್ಯಗಳು

ರಾಜ್ಯ ಸಕ್ರಿಯ ಕೇಸು

ಕೇರಳ 2041
ಕರ್ನಾಟಕ 92
ತಮಿಳುನಾಡು 77

Follow Us:
Download App:
  • android
  • ios