Asianet Suvarna News Asianet Suvarna News

ಬೆಂಗ್ಳೂರಲ್ಲಿ 28 ತಿಂಗಳ ಬಳಿಕ ಕನಿಷ್ಠ ಮಟ್ಟಕ್ಕಿಳಿದ ಕೊರೋನಾ..!

ಭಾನುವಾರ 8 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಎರಡು ವರ್ಷ ನಾಲ್ಕು ತಿಂಗಳಲ್ಲಿ ಕನಿಷ್ಠ ಪ್ರಕರಣವಾಗಿವೆ.

8 New Coronavirus Cases On October 2nd in Bengaluru grg
Author
First Published Oct 3, 2022, 3:30 AM IST

ಬೆಂಗಳೂರು(ಅ.03):  ರಾಜಧಾನಿ ಬೆಂಗಳೂರಿನಲ್ಲಿ 28 ತಿಂಗಳ ಬಳಿಕ ಕನಿಷ್ಠ ಸಂಖ್ಯೆಯಾದ ಎಂಟು ಕೊರೋನಾ ಸೋಂಕು ಪ್ರಕರಣ ಭಾನುವಾರ ದೃಢಪಟ್ಟಿವೆ. ಕೊರೋನಾ ಸೋಂಕಿನ ಆರಂಭದ ಸಂದರ್ಭದಲ್ಲಿ 2020ರ ಮೇ 8 ರಂದು ಆರು ಪ್ರಕರಣಗಳು ನಗರದಲ್ಲಿ ದೃಢಪಟ್ಟಿದ್ದವು. ಅದಾದ ಬಳಿಕ ಕೊರೋನಾ ಮೊದಲ ಹಾಗೂ ಎರಡನೇ ಅಲೆಯ ವೇಳೆಯಲ್ಲಿ ಈ ಸಂಖ್ಯೆಯ ಕನಿಷ್ಠ ಪ್ರಕರಣ ದಾಖಲಾಗಿರಲಿಲ್ಲ. ಭಾನುವಾರ 8 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದು ಎರಡು ವರ್ಷ ನಾಲ್ಕು ತಿಂಗಳಲ್ಲಿ ಕನಿಷ್ಠ ಪ್ರಕರಣವಾಗಿವೆ.

ಇನ್ನು ನಗರದ ಕೊರೋನಾ ಸೋಂಕಿನ ಪಾಸಿಟಿವಿಟಿ ದರ ಶೇ.1.13 ದಾಖಲಾಗಿದೆ. ಸೋಂಕಿನಿಂದ ಗುಣಮುಖರಾದ ಮತ್ತು ಮೃತಪಟ್ಟವರದಿಯಾಗಿಲ್ಲ. ನಗರದಲ್ಲಿ 2,275 ಸಕ್ರಿಯ ಸೋಂಕು ಪ್ರಕರಣಗಳಿದ್ದು, ಈ ಪೈಕಿ 26 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, 8 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರ್ನಾಟಕದಲ್ಲಿ 153 ಮಂದಿಗೆ ಕೋವಿಡ್‌: 4 ತಿಂಗಳಲ್ಲೇ ಅತಿ ಕನಿಷ್ಠ

ಒಟ್ಟು 1672 ಮಂದಿ ಕೋವಿಡ್‌ ವಿರುದ್ಧ ಲಸಿಕೆ ಪಡೆದುಕೊಂಡಿದ್ದಾರೆ. 147 ಮಂದಿ ಮೊದಲ ಡೋಸ್‌, 758 ಮಂದಿ ಎರಡನೇ ಡೋಸ್‌ ಮತ್ತು 767 ಮಂದಿ ಮೂರನೇ ಡೋಸ್‌ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 3371 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದ್ದು, ಈ ಪೈಕಿ 2960 ಆರ್‌ಟಿಪಿಸಿಆರ್‌ ಹಾಗೂ 411 ಮಂದಿಗೆ ರಾರ‍ಯಪಿಡ್‌ ಆ್ಯಂಟಿಜನ್‌ ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.
 

Follow Us:
Download App:
  • android
  • ios