Asianet Suvarna News Asianet Suvarna News

ಕರ್ನಾಟಕದಲ್ಲಿ 379 ಕೋವಿಡ್‌ ಕೇಸ್‌: 3 ತಿಂಗಳಲ್ಲೇ ಕನಿಷ್ಠ

ಜೂನ್‌ 8ರಂದು 376 ಪ್ರಕರಣ ಪತ್ತೆಯಾದ ಬಳಿಕದ ಕನಿಷ್ಠ ಪ್ರಕರಣ ಭಾನುವಾರ ದಾಖಲಾಗಿದೆ. ಕಳೆದ 10-15 ದಿನಗಳ ಹಿಂದೆ ಸಾವಿರ ಮೀರಿ ದಾಖಲಾಗುತ್ತಿದ್ದ ದೈನಂದಿನ ಪ್ರಕರಣ ಇದೀಗ ಐನೂರರ ಅಸುಪಾಸಿಗೆ ಇಳಿದಿದೆ.

379 New Coronavirus Cases on September 10th in Karnataka grg
Author
First Published Sep 12, 2022, 12:30 AM IST

ಬೆಂಗಳೂರು(ಸೆ.12):  ರಾಜ್ಯದಲ್ಲಿ ಭಾನುವಾರ 379 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. 486 ಮಂದಿ ಚೇತರಿಸಿಕೊಂಡಿದ್ದಾರೆ.

ಜೂನ್‌ 8ರಂದು 376 ಪ್ರಕರಣ ಪತ್ತೆಯಾದ ಬಳಿಕದ ಕನಿಷ್ಠ ಪ್ರಕರಣ ಭಾನುವಾರ ದಾಖಲಾಗಿದೆ. ಕಳೆದ 10-15 ದಿನಗಳ ಹಿಂದೆ ಸಾವಿರ ಮೀರಿ ದಾಖಲಾಗುತ್ತಿದ್ದ ದೈನಂದಿನ ಪ್ರಕರಣ ಇದೀಗ ಐನೂರರ ಅಸುಪಾಸಿಗೆ ಇಳಿದಿದೆ.

COVID-19: ಶೇ.75 ರಷ್ಟು ಮಕ್ಕಳಲ್ಲಿ ಕೊರೋನಾ ಪ್ರತಿಕಾಯ: ಲಸಿಕೆ ಪಡೆಯದಿದ್ದರೂ ರೋಗ ನಿರೋಧಕ ಶಕ್ತಿ

ಬೆಂಗಳೂರು ನಗರದಲ್ಲಿ 198, ಮೈಸೂರು 26, ದಕ್ಷಿಣ ಕನ್ನಡ 18, ಹಾಸನ 12, ತುಮಕೂರು, ರಾಯಚೂರು ಮತ್ತು ಬೆಳಗಾವಿ ತಲಾ 11, ಚಿಕ್ಕಬಳ್ಳಾಪುರ ಮತ್ತು ಧಾರವಾಡ ಜಿಲ್ಲೆಯಲ್ಲಿ ತಲಾ 10 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ ಈವರೆಗೆ 40.58 ಲಕ್ಷ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 40.14 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 40,217 ಮಂದಿ ಮರಣವನ್ನಪ್ಪಿದ್ದಾರೆ.

ಲಸಿಕೆ ಅಭಿಯಾನ:

ಭಾನುವಾರ 2,592 ಮಂದಿ ಕೋವಿಡ್‌ ಲಸಿಕೆ ಪಡೆದಿದ್ದಾರೆ. 2,444 ಮಂದಿ ಮುನ್ನೆಚ್ಚರಿಕೆ ಡೋಸ್‌, 97 ಮಂದಿ ಎರಡನೇ ಡೋಸ್‌ ಮತ್ತು 51 ಮಂದಿ ಮೊದಲ ಡೋಸ್‌ ಪಡೆದಿದ್ದಾರೆ. ಈವರೆಗೆ ಒಟ್ಟು 11.90 ಕೋಟಿ ಡೋಸ್‌ ಲಸಿಕೆ ನೀಡಲಾಗಿದೆ.
 

Follow Us:
Download App:
  • android
  • ios