ಒಂದೇ ದಿನ 3016 ಕೋವಿಡ್ ಕೇಸ್: 6 ತಿಂಗಳಲ್ಲೇ ಗರಿಷ್ಠ
ಕಳೆದ ವರ್ಷದ ಅಕ್ಟೋಬರ್ 2ರಂದು 3,375 ಕೋವಿಡ್ ಕೇಸು ದಾಖಲಾಗಿದ್ದವು. ಇದಾದ ನಂತರದ ಗರಿಷ್ಠ ಸೋಂಕಿನ ಪ್ರಮಾಣ ಇದಾಗಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 13,509ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ 3, ದೆಹಲಿಯಲ್ಲಿ 2, ಹಿಮಾಚಲದಲ್ಲಿ 1, ಹಾಗೂ ಕೇರಳದಲ್ಲಿ 8 ಸೇರಿದಂತೆ ಒಟ್ಟು 14 ಸೋಂಕಿತರು ಸಾವು.
ನವದೆಹಲಿ(ಮಾ.31): ದೇಶದಲ್ಲಿ ಮತ್ತೆ ಕೋವಿಡ್ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದ್ದು ದೇಶದಲ್ಲಿ ಗುರುವಾರ ಒಂದೇ ದಿನ 3,016 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಕಳೆದ ಆರು ತಿಂಗಳ ಅವಧಿಯಲ್ಲೇ ದಾಖಲಾದ ಗರಿಷ್ಠ ಪ್ರಕರಣವಾಗಿದೆ.
ಕಳೆದ ವರ್ಷದ ಅಕ್ಟೋಬರ್ 2ರಂದು 3,375 ಕೋವಿಡ್ ಕೇಸು ದಾಖಲಾಗಿದ್ದವು. ಇದಾದ ನಂತರದ ಗರಿಷ್ಠ ಸೋಂಕಿನ ಪ್ರಮಾಣ ಇದಾಗಿದೆ. ಈ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 13,509ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಮಹಾರಾಷ್ಟ್ರದಲ್ಲಿ 3, ದೆಹಲಿಯಲ್ಲಿ 2, ಹಿಮಾಚಲದಲ್ಲಿ 1, ಹಾಗೂ ಕೇರಳದಲ್ಲಿ 8 ಸೇರಿದಂತೆ ಒಟ್ಟು 14 ಸೋಂಕಿತರು ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಈ ವರ್ಷದ ಗರಿಷ್ಠ ಕೊರೋನಾ ಕೇಸ್ ಪತ್ತೆ...!
ಇನ್ನು ದೈನನಂದಿನ ಪಾಸಿಟಿವಿಟಿ ದರವು ಹೆಚ್ಚು ಎನ್ನಬಹುದಾದ 2.73 ರಷ್ಟುಹಾಗೂ ವಾರದ ಪಾಸಿಟಿವಿಟಿ ದರವು 1.71 ರಷ್ಟು ದಾಖಲಾಗಿದೆ. ಸೋಂಕಿತರ ಚೇತರಿಕೆಯ ಪ್ರಮಾಣವು 98.78 ರಷ್ಟುದಾಖಲಾಗಿದೆ. ದೇಶದಲ್ಲಿ ಈವರೆಗೆ ಒಟ್ಟು 4.47 ಕೋಟಿ ಜನರಿಗೆ ಕೋವಿಡ್ ತಗುಲಿದ್ದು, ಒಟ್ಟು 220.65 ಕೋಟಿ ಡೋಸ್ ಕೋವಿಡ್ ಲಸಿಕೆಗಳ ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.