Asianet Suvarna News Asianet Suvarna News

ಚೀನಾದಲ್ಲಿ ಒಂದೇ ದಿನ 3.7 ಕೋಟಿ ಕೊರೋನಾ ಕೇಸ್‌..!

ಈ ತಿಂಗಳ ಮೊದಲ 20 ದಿನದಲ್ಲಿ 25 ಕೋಟಿ ಜನರಿಗೆ ಸೋಂಕಿನ ಶಂಕೆ, ಚೀನಾ ಸರ್ಕಾರದ ಲೆಕ್ಕಾಚಾರ: ಮಾಧ್ಯಮ ವರದಿ, ಇದು ಖಚಿತವಾದರೆ ಸೋಂಕಿನ ಸಾರ್ವಕಾಲಿಕ ದಾಖಲೆ

3.7 Crore Coronavirus Cases in a day in China grg
Author
First Published Dec 24, 2022, 3:38 AM IST

ಬೀಜಿಂಗ್‌(ಡಿ.24): ಒಮಿಕ್ರೋನ್‌ ಉಪತಳಿ ಬಿಎಫ್‌.7ನಿಂದಾಗಿ ಅನಾಹುತಕಾರಿ ಪ್ರಮಾಣದಲ್ಲಿ ಕೋವಿಡ್‌ ಸ್ಫೋಟಗೊಂಡಿರುವ ಚೀನಾದಲ್ಲಿ ಈ ವಾರ ಒಂದೇ ದಿನದಲ್ಲಿ ದಾಖಲೆಯ 3.7 ಕೋಟಿ ಜನರಿಗೆ ಸೋಂಕು ದೃಢಪಟ್ಟಿದೆ. ಜೊತೆಗೆ ಡಿಸೆಂಬರ್‌ ತಿಂಗಳ ಮೊದಲ 20 ದಿನದಲ್ಲಿ ದೇಶದ ಒಟ್ಟು ಜನಸಂಖ್ಯೆಯ ಪೈಕಿ ಶೇ.18ರಷ್ಟುಜನರಿಗೆ ಅಂದರೆ 24.8 ಕೋಟಿ ಜನರಿಗೆ ಕೋವಿಡ್‌ ಸೋಂಕು ತಗುಲಿದೆ ಎಂದು ಸ್ವತಃ ಚೀನಾ ಸರ್ಕಾರವೇ ಅಂದಾಜಿಸಿದೆ ಎಂದು ಮಾಧ್ಯಮ ವರದಿಯೊಂದು ಆಘಾತಕಾರಿ ಅಂಶಗಳನ್ನು ಪ್ರಕಟಿಸಿದೆ.

ಕಳೆದ ಬುಧವಾರ ಚೀನಾದ ರಾಷ್ಟ್ರೀಯ ಆರೋಗ್ಯ ಆಯೋಗ ಆಂತರಿಕ ಸಭೆಯೊಂದನ್ನು ನಡೆಸಿದ್ದು, ಅಲ್ಲಿ ಈ ಅಂಕಿ ಅಂಶಗಳನ್ನು ಅಧಿಕಾರಿಗಳು ಪ್ರಕಟಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಬ್ಲೂಂಬಗ್‌ರ್‍ ನ್ಯೂಸ್‌’ ವರದಿ ಮಾಡಿದೆ.

ವಿದೇಶಗಳಲ್ಲಿ ಕೋವಿಡ್ ಹೆಚ್ಚಳ, ಮಾರ್ಗಸೂಚಿ ಪ್ರಕಟಿಸಿದ ಕೇಂದ್ರ ಆರೋಗ್ಯ ಇಲಾಖೆ

ಒಂದೇ ದಿನ 3.7 ಕೋಟಿ ಜನರಿಗೆ ಸೋಂಕು:

ವರದಿ ಅನ್ವಯ ಡಿ.20ರಂದು ಒಂದೇ ದಿನ ದೇಶದಲ್ಲಿ 3.7 ಕೋಟಿ ಜನರಿಗೆ ಕೋವಿಡ್‌ ಸೋಂಕು ದೃಢಪಟ್ಟಿದೆ. ಇದು ವಿಶ್ವದಲ್ಲಿ ಕಳೆದ 3 ವರ್ಷಗಳಲ್ಲಿ ಎಲ್ಲಾ ದೇಶಗಳನ್ನೂ ಸೇರಿಸಿದರೂ ದಾಖಲಾದ ಒಂದು ದಿನದ ಗರಿಷ್ಠಕ್ಕಿಂತ 10 ಪಟ್ಟು ಹೆಚ್ಚು ಎಂಬುದು ಆತಂಕಕಾರಿ ವಿಷಯ. 2022ರ ಜನವರಿಯಲ್ಲಿ ವಿಶ್ವದಾದ್ಯಂತ ಒಂದೇ ದಿನ 40 ಲಕ್ಷ ಕೇಸು ದಾಖಲಾಗಿದ್ದೇ ಇದುವರೆಗಿನ ಗರಿಷ್ಠ ಪ್ರಮಾಣವಾಗಿತ್ತು.

ಬುಧವಾರ ನಡೆದ ಸಭೆಯಲ್ಲಿ ಅಧಿಕಾರಿಗಳು ಸಾವಿನ ಬಗ್ಗೆ ಹೆಚ್ಚಿನ ಚರ್ಚೆ ನಡೆಸಲಿಲ್ಲ. ಸೋಂಕು ಇಷ್ಟುವ್ಯಾಪಕವಾದ ಮೇಲೆ ಸಾವಿನ ಪ್ರಮಾಣವೂ ಹೆಚ್ಚಳವಾಗುವುದು ಖಚಿತ ಎಂಬ ಮಾತುಗಳನ್ನು ಹಿರಿಯ ಅಧಿಕಾರಿಗಳು ಆಡಿದರು. ಜೊತೆಗೆ ಸೋಂಕಿನಿಂದ ಆದ ಸಾವಿನ ಲೆಕ್ಕಾಚಾರ ಹಿಡಿಯಲು ಹೊಸ ಮಾನದಂಡಗಳನ್ನು ಅನುಸರಿಸುವ ಬಗ್ಗೆ ಚರ್ಚೆ ನಡೆಸಲಾಯ್ತು ಎಂದು ವರದಿ ಹೇಳಿದೆ.

ಆಂತರಿಕ ವರದಿಯಲ್ಲಿ ಡಿ.20ರಂದು 3.7 ಕೋಟಿ ಹೊಸ ಕೇಸು ದೃಢಪಟ್ಟಿದೆ ಎಂದಿದ್ದರೂ, ಅಂದು ಚೀನಾ ಸರ್ಕಾರ ಅಧಿಕೃತವಾಗಿ ಬಿಡುಗಡೆ ಮಾಡಿದ ಕೋವಿಡ್‌ ವರದಿ ಅನ್ವಯ ಕೇವಲ 3049 ಜನರಿಗೆ ಮಾತ್ರ ಸೋಂಕು ತಗುಲಿತ್ತು.

Follow Us:
Download App:
  • android
  • ios