ಬಾಗಲಕೋಟೆ(ಮಾ.26): ಮಹಾಮಾರಿ ಕೊರೋನಾ ವೈರಸ್‌ ಜಾಗೃತಿಗಾಗಿ ಜಿಲ್ಲೆಯ ಮುಧೋಳ ತಾಲೂಕಿನ ಚಿತ್ರಭಾನುಕೋಟಿ ಗ್ರಾಮದ ಯುವಕರ ತಂಡವೊಂದು ಹೊಸ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೌದು, ಈ ಯುವಕರ ತಂಡ ಭಜನಾ ಹಾಡಿನಲ್ಲಿ ಕೊರೊನಾ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. 

ಚಿತ್ರಭಾನುಕೋಟಿ ಗ್ರಾಮದ ಶ್ರೀ ಬಸವೇಶ್ವರ ಭಜನಾ ಮಂಡಳಿಯಿಂದ ಕೊರೋನಾ ಬಗ್ಗೆ ಜಾಗೃತಿ ಕಾರ್ಯ ನಡೆಯುತ್ತಿದೆ. ಮಹಾಮಾರಿ ಕೊರೊನಾ ರೋಗ ವಿಶ್ವಕ್ಕೆ ಹರಡೈತಿ, ಜಾಗೃತಿರಾಗಿ ಬಾಳಿರಿ ಎಂದು ಸರ್ಕಾರ ಹೇಳೈತಿ,ಪ್ರಧಾನ ಮಂತ್ರಿ ಮೋದಿಜಿ ಹೇಳಿದ ಆದೇಶ ಪಾಲಿಸಿರಿ, ಮಾಧ್ಯಮದವರು ನಿತ್ಯ ಮಾಹಿತಿ ನಿಡ್ತಾರೀ, ವೈದ್ಯರು ಪೊಲೀಸ್ ಸಿಬ್ಬಂದಿ ಹಗಲಿರುಳು ದುಡಿತಾರೀ, ಎಲ್ಲರೂ ಸೇರಿ ಕೊರೋನಾ ನಿರ್ನಾಮ ಮಾಡೋಣ್ರಿ ಎಂದು ಭಜನಾ ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಬಾಗಿಲು ಮುಚ್ಚಿ ಟೀ ವ್ಯಾಪಾರ, ಪೊಲೀಸರ ಲಾಠಿ ರುಚಿಗೆ ಗ್ರಾಹಕರು ತತ್ತರ!

ಕೊರೋನಾ ಜಾಗೃತಿ ಭಜನಾ ಹಾಡನ್ನ ಕರೆಪ್ಪ ಪೂಜಾರ ಬರೆದಿದ್ದು, ಗುರು ಹಿರೇಮಠ,ಚಿನ್ನು ಬಳಿಗಾರ, ಚಿನ್ನು ಬಳಿಗಾರ,ದಶರಥ ಎಂಬುವರು ಹಾಡಿದ್ದಾರೆ.