ಬೆಂಗಳೂರು(ಎ.01): ದೇಶಾದ್ಯಂತ ಲಾಕ್‌ಡೌನ್ ಮಾಡಿದ್ದು, ಮಂಗಳ ಮುಖಿಯರೂ ಅಗತ್ಯ ವಸ್ತುಗಳಿಗಾಗಿ ಪರದಾಡಿದ್ದಾರೆ. ಬೆಂಗಳೂರಿನಲ್ಲಿ ನಿತ್ಯ ಭಿಕ್ಷೆ ಬೇಡಿ ಬದುಕುತ್ತಿದ್ದ ಮಂಗಳಮುಖಿಯರು ಒಪ್ಪೊತ್ತಿನ ಊಟಕ್ಕೂ ಕಷ್ಟಪಡುವಂತಾಗಿದೆ.

ಬೆಂಗಳೂರಿನಲ್ಲಿ ಯುವಕರ ತಂಡವೊಂದು ಕಳೆದ ಒಂದು ವಾರದಿಂಸ ಭಿಕ್ಷಾಟನೆ ಇಲ್ಲದೆ ಕಂಗೆಟ್ಟಿದ ಮಂಗಳಮುಖಿಯರು ಮಂಗಳಮುಖಿಯರ ಹಸಿವು ನೀಗಿಸಿದ್ದಾರೆ. ಮಂಗಳಮುಖಿಯರು ಯಾರಾದರೂ ತಮ್ಮ ನೆರವಿಗೆ ಬರುವಂತೆ ಸೋಷಿಯಲ್ ಮೀಡಿಯಾ ಮೂಲಕ ಕೇಳಿಕೊಂಡಿದ್ದರು.

ರಸ್ತೆಗೆ ಮಣ್ಣು ಹಾಕಿ ಬಾರ್ಡರ್ ಬಂದ್: ಮೋದಿಗೆ ಕೇರಳ ಸಿಎಂ ಪತ್ರ

ಇದನ್ನು ಗಮನಿಸಿದ ಯುವಕರ ತಂಡ ವಿಷಯ ತಿಳಿದ ಕೂಡಲೇ ನೆಲಮಂಗಲಕ್ಕೆ ತೆರಳಿ ಊಟದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಂದರಹಳ್ಳಿ ಗೋಪಲ್ ಅಂಡ್ ಟೀಂನಿಂದ ಅನ್ನದ ಸಹಾಯ ಮಾಡಲಾಗಿದೆ. ಲಾಕ್‌ ಡೌನ್ ಮುಗಿಯುವವರೆಗೂ ಮೂರು ಹೊತ್ತು ಊಟ ಕೊಡುವುದಾಗಿ ಗೋಪಾಲ್ ಭರವಸೆ ನೀಡಿದ್ದಾರೆ.