ದೀಪ ಬೆಳಗಿಸಿದರೆ ಕೊರೋನಾ ವಾಸಿಯಾಗುತ್ತಾ: ಸಿದ್ದು ವ್ಯಂಗ್ಯ

ದೀಪ ಬೆಳಗುವುದರಿಂದ ಕಾಯಿಲೆ ವಾಸಿಯಾಗುತ್ತಾ ಎಂದು ವಿರೋಧ ಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಏ.5 ರಂದು ದೀಪ ಬೆಳಗಿಸಲು ಕರೆ ನೀಡಿರುವುದಕ್ಕೆ ವ್ಯಂಗ್ಯವಾಡಿದರು.

 

Will diya cure coronavirus siddaramaiah taunts modis decision of lighting lamp

ಮೈಸೂರು(ಏ.04): ದೀಪ ಬೆಳಗುವುದರಿಂದ ಕಾಯಿಲೆ ವಾಸಿಯಾಗುತ್ತಾ ಎಂದು ವಿರೋಧ ಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಏ.5 ರಂದು ದೀಪ ಬೆಳಗಿಸಲು ಕರೆ ನೀಡಿರುವುದಕ್ಕೆ ವ್ಯಂಗ್ಯವಾಡಿದರು.

ಮೈಸೂರು ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಭೇಟಿ ನೀಡಿದ ಅವರು, ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡಿರುವ ಸಂಬಂಧ ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೀಪ ಬೆಳಗಿಸುವುದರಿಂದ ಕಾಯಿಲೆ ವಾಸಿಯಾಗುತ್ತಾ? ಒಂದೇ ವೇಳೆ ಕಾಯಿಲೆ ವಾಸಿಯಾದರೆ ಮಾಡಲಿ. ನಮ್ಮದೇನು ಅಭಿಯಂತರ ಇಲ್ಲ ಎಂದು ತಿಳಿಸಿದರು.

ಚೀನಾ ಕಂಟೈನರ್‌ ಕಾರಣ ಇರಬಹುದು:

ನಂಜನಗೂಡು ಜುಬಿಲೆಂಟ್‌ ಕಾರ್ಖಾನೆಯ ಕಾರ್ಮಿಕರಿಗೆ ಕೊರೋನಾ ಸೋಂಕು ತಗುಲೋಕೆ ಚೀನಾ ಕಂಟೈನರ್‌ ಕಾರಣವಿರಬಹುದು. ಜಿಲ್ಲಾಧಿಕಾರಿ ನನಗೆ ಮಾಹಿತಿ ನೀಡಿದ್ದು ಇದನ್ನೆ. ಚೀನಾದಿಂದ ಬಂದ ಒಂದು ಕಂಟೈನರ್‌ನಿಂದ ಸೋಂಕು ತಗುಲಿರಬಹುದು. ಈ ಬಗ್ಗೆ ಕಂಟೈನರ್‌ ಸ್ಯಾಂಪಲ್‌ ತೆಗೆದು ಲ್ಯಾಬ್‌ಗೆ ಕಳುಹಿಸಿದ್ದಾರೆ.

Will diya cure coronavirus siddaramaiah taunts modis decision of lighting lamp

ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಅವರು ಹೇಳಿದರು. ಪಿ52 ವ್ಯಕ್ತಿಗೆ ಬಂದ ಸೋಂಕಿನ ಮೂಲ ಚೀನಾ ಎಂದು ಶಂಕಿಸಿದ ಸಿದ್ದರಾಮಯ್ಯ ಅವರು, ಸೋಂಕು ಹೇಗೆ ಬಂತು ಅನ್ನೋದು ತನಿಖೆ ಆಗಲಿ ಎಂದು ಸಲಹೆ ನೀಡಿದರು.

Latest Videos
Follow Us:
Download App:
  • android
  • ios