ಸವಣೂರು(ಏ.02): ಮಹಾಮಾರಿ ಕೊರೋನಾ ವೈರಸ್‌ ತಡೆಗಟ್ಟಲು ಸಾಕಷ್ಟು ಕಟ್ಟಳತೆಯಿಂದ ರಾಜ್ಯವನ್ನು ಲಾಕ್‌ ಡೌನ್‌ ಘೋಷಣೆಯ ಹಿನ್ನಲೆಯಲ್ಲಿ ಆಹಾರಕ್ಕಾಗಿ ಜನರೊಂದಿಗೆ ಹಸುಗಳು ಸಹ ಪರದಾಡುವಂತಾಗಿರುವ ಕಾರಣ ಹಾನಗಲ್ಲ ತಾಲೂಕಿನ ಇನಾಂಲಕ್ಮಾಪುರ ಗ್ರಾಮದ ವಿಶ್ವಹಿಂದು ಪರಿಷತ್‌ ಗೋಶಾಲೆಗೆ ಬುಧವಾರ ಸವಣೂರಿನಿಂದ ಒಂದು ಲೋಡ್‌ (ಟ್ರಾಕ್ಟರ್‌) ಒಣ ಮೇವು ಕಳುಹಿಸಲಾಯಿತು.

ಪಟ್ಟಣದ ಸವಣೂರ ಶಿವಲಾಲ ಖಾರಾ ಮಾಲೀಕ ಜಯಂತ ಕೋಟಕ್‌ ಅವರು ರೈತರಿಂದ ಖರೀದಿಸಿ ನೀಡಿದ ಒಂದು ಟ್ರಾಕ್ಟರ್‌ ಒಣ ಮೇವನ್ನು ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳು ತಾಲೂಕು ಆಡಳಿತ ಪರವಾನಗಿಯನ್ನು ಪಡೆದು ಉಚಿತವಾಗಿ ಕಳುಹಿಸಿದ್ದಾರೆ. 

ಭಾರತ್‌ ಲಾಕ್‌ಡೌನ್‌: 'ವಲಸೆ ಕಾರ್ಮಿಕರಿಗೆ ತಾತ್ಕಾಲಿಕ ವಸತಿ, ಊಟದ ವ್ಯವಸ್ಥೆ'

ಹಾನಗಲ್ಲ ತಾಲೂಕಿನ ಇನಾಂಲಕ್ಮಾಪುರ ಗ್ರಾಮದ ವಿಶ್ವಹಿಂದು ಪರಿಷತ್‌(ಭಾರತೀಯ ಗೋವಂಶ ರಕ್ಷಣ ಸಂವರ್ದನ ಪರಿಷದ್‌) ಗೋಶಾಲೆಯಲ್ಲಿರುವ ಹಸುಗಳಿಗೆ ಮೇವಿನ ಅವಶ್ಯಕತೆ ಇದೆ. ಆದ್ದರಿಂದ, ರೈತರು ಹಾಗೂ ಸ್ಥಿತಿವಂತರು ಗೋವುಗಳಿಗೆ ಅವಶ್ಯವಾಗಿರುವ ಮೇವು ನೀಡಲು ಮುಂದಾಗಬೇಕು ಎಂದು ಮನವಿಯನ್ನು ಮಾಡಿಕೊಂಡರು.

ಜೆಸಿಐ ನಮ್ಮ ಸವಣೂರು ಘಟಕದ ಪದಾಧಿಕಾರಿಗಳಾದ ಜೆಸಿ ಗಣೇಶಗೌಡ ಪಾಟೀಲ, ಆನಂದ ಮತ್ತಿಗಟ್ಟಿ, ಹಯಾತಖಾನ್‌ ಸೌದಾಗರ, ಶಕೀಲ್‌ ಖಾನಜಾದೆ ಸೇರಿದಂತೆ ರೈತರು ಇದ್ದರು.