Asianet Suvarna News Asianet Suvarna News

ಮಧ್ಯಾ​ಹ್ನ​ದ ವೇಳೆಗೆ ತರ​ಕಾರಿ, ಹಣ್ಣು, ಮಾಂಸ ಖಾಲಿ

ಮಂಗಳವಾರ ದಿನಸಿ ಖರೀದಿಗೆ ಜಿಲ್ಲಾಡಳಿತ ಅವಕಾಶ ನಿಡಿದ್ದು, ಜನರು ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದರು. ಸುಳ್ಯ ನಗರದಲ್ಲಿ ಎಲ್ಲ ಅಂಗಡಿಗಳ ಮುಂದೆ ಜನರ ಸಾಲು ಸಾಮಾನ್ಯವಾಗಿತ್ತು. ಅಂತರವನ್ನು ಪಾಲಿಸಬೇಕು ಎಂಬ ನಿಯಮವಿದ್ದರೂ ಅದನ್ನು ಲೆಕ್ಕಿಸದೇ ಖರೀದಿಗೆ ಮುಗಿಬಿದ್ದರು. ತರಕಾರಿ, ಹಣ್ಣುಹಂಪಲು, ಮಾಂಸ ಮಧ್ಯಾಹ್ನದ ವೇಳೆಯೇ ಮುಗಿದಿತ್ತು.

 

Vegetables fruits and meat goes empty at noon in Mangalore as people allowed to buy things
Author
Bangalore, First Published Apr 1, 2020, 7:35 AM IST

ಮಂಗಳೂರು(ಎ.01): ಮಂಗಳವಾರ ದಿನಸಿ ಖರೀದಿಗೆ ಜಿಲ್ಲಾಡಳಿತ ಅವಕಾಶ ನಿಡಿದ್ದು, ಜನರು ಅಗತ್ಯ ವಸ್ತು ಖರೀದಿಗೆ ಮುಗಿಬಿದ್ದರು. ಸುಳ್ಯ ನಗರದಲ್ಲಿ ಎಲ್ಲ ಅಂಗಡಿಗಳ ಮುಂದೆ ಜನರ ಸಾಲು ಸಾಮಾನ್ಯವಾಗಿತ್ತು. ಅಂತರವನ್ನು ಪಾಲಿಸಬೇಕು ಎಂಬ ನಿಯಮವಿದ್ದರೂ ಅದನ್ನು ಲೆಕ್ಕಿಸದೇ ಖರೀದಿಗೆ ಮುಗಿಬಿದ್ದರು. ತರಕಾರಿ, ಹಣ್ಣುಹಂಪಲು, ಮಾಂಸ ಮಧ್ಯಾಹ್ನದ ವೇಳೆಯೇ ಮುಗಿದಿತ್ತು.

ಗ್ರಾಮೀಣ ಪ್ರದೇಶವಾದ ಸಂಪಾಜೆ, ಪಂಜ, ಸುಬ್ರಹ್ಮಣ್ಯ, ಬೆಳ್ಳಾರೆ, ಗುತ್ತಿಗಾರು, ಅರಂತೋಡು, ಆಲೆಟ್ಟಿ, ಉಬರಡ್ಕ, ಕುಕ್ಕುಜಡ್ಕ, ಐವರ್ನಾಡು, ಜಾಲ್ಸೂರು, ಕನಕಮಜಲು ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಜನ ಸಾಲು ಗಟ್ಟಿವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಪೆಂಟ್ರೋಲ್‌ ಖರೀದಿಗೂ ವಾಹನಗಳು ಸಾಲು ಗಟ್ಟಿನಿಂತು ವಾಹನಕ್ಕೆ ತುಂಬಿಸುತ್ತಿದ್ದರು. ನಗರದಲ್ಲಿ ಮಧ್ಯಾಹ್ನದ ವರೆಗೆ ಟ್ರಾಪಿಕ್‌ ಜಾಂ ಉಂಟಾಗಿದ್ದು, ಚೆನ್ನಕೇಶವ ದೇವಳ ಮುಂಭಾಗದಲ್ಲಿ ನಿಗುಗಡೆಗೆ ಅವಕಾಶ ಮಾಡಲಾಗಿತ್ತು.

ಹೇರ್‌ ಡೈ ಹಾಕಲು ಬಂದ ವ್ಯಕ್ತಿ:

ಲಾಕ್‌ಡೌನ್‌ ಆಗಿ ಆಹಾರ ವಸ್ತುಗಳಿಗೂ ಮುಗಿಬೀಳುವ ಪರಿಸ್ಥಿತಿ ಉಂಟಾಗಿದ್ದರೂ ಹೇರ್‌ ಡೈ ಹಾಕಲು ಗ್ರಾಮೀಣ ಪ್ರದೇಶದಿಂದ ಸುಳ್ಯಕ್ಕೆ ವ್ಯಕ್ತಿಯೊಬ್ಬರು ಆಗಮಿಸಿದ್ದರು. ಆದರೆ ಹೇರ್‌ ಕಟ್ಟಿಂಗ್‌ ಅಂಗಡಿ ಬಂದ್‌ ಆಗಿದ್ದರಿಂದ ಆ ವ್ಯಕ್ತಿ ಪರ್ವತವೇ ತಲೆ ಮೇಲೆ ಬಿದ್ದಂತೆ ವರ್ತಿಸುತ್ತಿದ್ದರು.

ಕೇಂದ್ರಾಡಳಿತ ಪ್ರದೇಶವಾಗಲಿದೆಯಾ ಕಾಸರಗೋಡು..?

ದಿನ ಪತ್ರಿಕೆಗೆ ಬೇಡಿಕೆ: ದಿನಪತ್ರಿಕೆ ಗ್ರಾಮೀಣ ಪ್ರದೇಶಕ್ಕೆ ತಲುಪದ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಜನ ಒಂದು ಪತ್ರಿಕೆ ನೀಡಿ ಎಂದು ಅಂಗಲಾಚುತ್ತಿದ್ದರು. ಇಂದಿನದ್ದು ಇಲ್ಲದಿದ್ದರೂ ಸರಿ ಹಿಂದಿನ ದಿನ ಪತ್ರಿಕೆ ನೀಡಿದರೂ ಸಾಕು ಎಂದು ಕೇಳುತ್ತಿದ್ದರು. ದಿನ ಪತ್ರಿಕೆ ಓದಲು ಆಸೆ ಹಿಡಿದಿದೆ ಎಂದು ಜನ ತನ್ನೊಳಗೆ ಮಾತನಾಡುವ ದೃಶ್ಯವೂ ಕಂಡು ಬಂತು.

Follow Us:
Download App:
  • android
  • ios