ಉಡು​ಪಿ(ಮಾ.25): ಕೊರೋನಾ ಭೀತಿ ಆರಂಭವಾದ ಮೇಲೆ ಜಿಲ್ಲೆಯಲ್ಲಿ ವಿದೇಶದಿಂದ ಮರಳಿರುವ ಸುಮಾರು 900 ಜನರನ್ನು ಗುರುತಿಸಲಾಗಿದ್ದು, ಅವರೆಲ್ಲರನ್ನೂ ಕಡ್ಡಾಯ ಹೋಂ ಕ್ವಾರಂಟೈನ್‌ ಗೊಳಪಡಿಸಲಾಗಿದೆ.

ಅವರ ಮನೆಯವರೂ ಕೊರೋನಾ ಶಂಕಿತರಾಗಿರುವುದರಿಂದ ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದ್ದು, ಅವರಿಗೆ ರೇಷನ್‌ ಇತ್ಯಾದಿ ಎಲ್ಲಾ ಅಗತ್ಯ ವಸ್ತುಗಳನ್ನು ಜಿಲ್ಲಾಡಳಿತವೇ ಪೂರೈಕೆ ಮಾಡುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್‌ ಹೇಳಿದ್ದಾರೆ.

ಉಡುಪಿ: ಒಂದೇ ದಿನ 25 ಮಂದಿ ಕೊರೋನಾ ಶಂಕಿತರು ಆಸ್ಪತ್ರೆಗೆ

ಈ ಹೋಂ ಕ್ವಾರಂಟೈಮ್‌ ಮನೆಗಳಿಗೆ ಆ ಬಗ್ಗೆ ನೋಟಿಸ್‌ ಹಚ್ಚಲಾಗಿದೆ. ಅಲ್ಲಿಗೆ ಪ್ರತಿನಿತ್ಯ 2 ಬಾರಿ ಗಸ್ತು ಪೊಲೀಸರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ತೆರಳಿ ಪರಿಶೀಲಿಸಲಿದ್ದಾರೆ.

ಈ ಮನೆಗಳವರ ಮೇಲೆ ನಿಗಾ ಇರಿಸಲು ಅಕ್ಕಪಕ್ಕದ ಮನೆಯವರಿಗೆ ತಿಳಿಸಲಾಗಿದೆ. ಕ್ವಾರಂಟೈನ್ಡ್‌ ಮನೆಯವರು ಯಾರಾದರೂ ಹೊರಗೆ ಬಂದಲ್ಲಿ ಕೂಡಲೇ ಜಿಲ್ಲಾಡಳಿತದ ಉಚಿತ ಟೋಲ್‌ ಫ್ರೀ ನಂ.1077 ಅಥವಾ ಪೊಲೀಸ್‌ ಕಂಟ್ರೋಲ್‌ ರೂ.100ಕ್ಕೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ. ಹೋಮ್‌ ಕ್ವಾರಂಟೈನ್‌ ಪಾಲಿಸದವರ ಮೇಲೆ ಕ್ರಿಮಿನಲ್‌ ಕೇಸು ದಾಖಲಿಸಲಾಗುತ್ತದೆ ಎಂದು ಡಿ.ಸಿ. ಎಚ್ಚರಿಕೆ ನೀಡಿದರು.