ಪ್ರಯಾಣಿಕರ ಗಮನಕ್ಕೆ: ನೀವು ಈ ಎರಡು ಬಸ್ಸಲ್ಲಿ ಪ್ರಯಾಣಿಸಿದ್ರೆ ಕೂಡಲೇ ಆಸ್ಪತ್ರೆಗೆ ಹೋಗಿ...!

ಕೊರೋನಾ ವೈರಸ್ ಮಾರಿ ರಾಜ್ಯದಲ್ಲಿ ವ್ಯಾಪಿಸುತ್ತಲೇ ಇದೆ. ವಿದೇಶದಿಂದ ಬಂದವರು ಎಲ್ಲೆಲ್ಲಿ ಸುತ್ತಾಡಿ ಮನೆಗೆ ಹೋಗಿದ್ದಾರೆಯೋ ಅಲ್ಲಲ್ಲಿನ ಜನರ ಮೇಲೆ ನಿಗಾ ಇಡಬೇಕಾಗಿದೆ. ಅದರಂತೆ KSRTC ಬಸ್‌ನಲ್ಲಿ ಪ್ರಯಾಣಿಸಿದ್ದ ಇಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಇದರಿಂದ ಈ ಬಸ್‌ಗಳಲ್ಲಿ ಪ್ರಯಾಣಿಸಿದವರಿಗೆ ಕೆಎಸ್‌ಆರ್‌ಟಿಸಿ ಸೂಚನೆಯೊಂದನ್ನ ನೀಡಿದೆ.

two persons who have been tested coronavirus positive traveled in 2 Ksrtc Buses

ಬೆಂಗಳೂರು, (ಮಾ.28): ಕರ್ನಾಟಕ ರಸ್ತೆ ಸಾರಿಗೆ (KSRTC)ಬಸ್‌ನಲ್ಲಿ ಪ್ರಯಾಣಿಸಿದ್ದ ಇಬ್ಬರಿಗೆ ಕೊರೋನಾ ವೈರಸ್ ಮಾರಿ ಅಂಟಿಕೊಂಡಿರುವುದು ಖಚಿತವಾಗಿದೆ. ಇದರಿಂದ ಈ ಎರಡು ಬಸ್‌ಗಳಲ್ಲಿ ಪ್ರಯಾಣಿಸಿದರಿಗೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಸಾರಿಗೆ ಸಂಸ್ಥೆ ಮನವಿ ಮಾಡಿಕೊಂಡಿದೆ.

ಬಸ್‌ 01: ಮಾರ್ಚ್ 18ರಂದು ಬೆಳಗ್ಗೆ ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದಿಂದ (ಮೆಜೆಸ್ಟಿಕ್) ರಾಜಹಂಸ ಬಸ್ ಸಂಖ್ಯೆ KA-57, F-3802 ದಾವಣಗೆರೆಗೆ ತೆರಳಿದೆ. ಈ ಬಸ್ಸಿನಲ್ಲಿ ಪ್ರಯಾಣಿಸಿದ ವ್ಯಕ್ತಿಯೊಬ್ಬರಿಗೆ ಕೊರೋನಾ ಸೋಂಕು ತಗುಲಿರುವುದು ದೃಢವಾಗಿದೆ. ಆದ್ದರಿಂದ ಈ ಬಸ್ಸಿನಲ್ಲಿ ಪ್ರಯಾಣಿಸಿದ ಇತರೆ ಪ್ರಯಾಣಿಕರು ದಯವಿಟ್ಟು ಕೂಡಲೇ ಹತ್ತಿರದ ಜಿಲ್ಲಾಸ್ಪತ್ರಗೆ ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಕೆಎಸ್‌ಆರ್‌ಟಿಸಿ ಸಂಸ್ಥೆ ಮನವಿ ಮಾಡಿಕೊಂಡಿದೆ. 

ಬಸ್ 02: ದಿನಾಂಕ 21-03-2020ರಂದು ಕೆಎಸ್‌ಆರ್‌ಟಿಸಿ ಬಸ್ ಸಂಖ್ಯೆ KA-19, F-3329ನಲ್ಲಿ ಸಂಜೆ 4.30ಕ್ಕೆ ಬೆಂಗಳೂರು ಮೆಜೆಸ್ಟಿಕ್‌ (ಕೆಂಪೇಗೌಡ ಬಸ್‌ ನಿಲ್ದಾಣ)  ಮಂಗಳೂರಿಗೆ ತೆರಳಿದೆ. ಈ ಬಸ್‌ನಲ್ಲಿ ಪ್ರಯಾಣಿಸಿದ ಪ್ರಯಣಿಕರೊಬ್ಬರಿಗೆ ಕೊರೋನಾ ಸೋಂಕು ಇರುವುದು ವರದಿಯಲ್ಲಿ ದೃಢವಾಗಿದೆ. ಈ ಹಿನ್ನೆಲಯಲ್ಲಿ ಈ ಬಸ್ಸಿನಲ್ಲಿ ಪ್ರಯಾಣಿಸಿದ ಪ್ರಯಾಣಿಕರು ದಯವಿಟ್ಟು ಈ ತಕ್ಷಣ ಹತ್ತಿರದ ಜಿಲ್ಲಾಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ತಿಳಿಸಿದೆ.

ಈ ಎರಡು ಬಸ್‌ಗಳಲ್ಲಿ ಯಾರೆಲ್ಲಾ ಪ್ರಯಾಣಸಿದ್ದೀರೋ ಅವರೆಲ್ಲರೂ ಸಹ ಸಮೀಪದ ಜಿಲ್ಲಾಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಿ. ಕೊರೋನಾ ಸೋಂಕು ತಗಿಲಿದ್ಯಾ ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

"

Latest Videos
Follow Us:
Download App:
  • android
  • ios