ಧಾರವಾಡ(ಮಾ.26): ಕೊರೋನಾ ಪಾಸಿಟಿವ್‌ ವ್ಯಕ್ತಿಯ ಹೆಸರಿಗೆ ಪತ್ರಕರ್ತರೊಬ್ಬರ ಫೋಟೋ ಹಾಕಿ ವೈರಲ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಪೊಲೀಸರು ಇಬ್ಬರನ್ನ ಬಂಧಿಸಿದ್ದಾರೆ. 

ಬಂಧಿತರನ್ನ ನಗರದ ಶೆಟ್ಟರ್ ಕಾಲನಿಯ ನಿವಾಸಿಯಾದ ಪ್ರಮೋದ ಯಾಲಕ್ಕಿ ಹಾಗೂ ಕಾಮನಕಟ್ಟಿ ನಿವಾಸಿ ಅಭಿಷೇಕ ಎಂದು ಗುರುತಿಸಲಾಗಿದೆ. 

ಕೊರೋನಾ ಆತಂಕ: ಫೇಸ್‌ಬುಕ್‌ನಲ್ಲಿ ಫೇಕ್‌ ಸುದ್ದಿ ಹರಿಬಿಟ್ಟವನ ವಿರುದ್ಧ ಕೇಸ್‌!

ಹೊಸಯಲ್ಲಾಪುರದ ಕೊರೋನಾ ಪಾಸಿಟಿವ್ ವ್ಯಕ್ತಿಯ ಹೆಸರಲ್ಲಿ ಪರ್ತಕರ್ತರೊಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಪೇಕ್‌ ಸುದ್ದಿಯನ್ನ ಹಬ್ಬಿಸಿದ್ದರು. ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆ ಖುದ್ದು ಜಿಲ್ಲಾಧಿಕಾರಿ ಅವರೇ ಕೇಸ್‌ ದಾಖಲಿಸಲು ಸೂಚಿಸಿದ್ದರು. ಡಿಸಿ ಆದೇಶದ ಹಿನ್ನೆಲೆ ಕಾರ್ಯಾಚರಣೆಗೆ ಇಳಿದಿದ್ದ ಧಾರವಾಡ ಪೊಲೀಸರು ಇಬ್ಬರನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.