ಕಾರವಾರ(ಏ.06): ಇಲ್ಲಿನ ನೌಕಾನೆಲೆಯ ಐಎನ್‌ಎಸ್‌ ಪತಂಜಲಿ ಆಸ್ಪತ್ರೆಯಲ್ಲಿ ಕೋವಿಡ್‌ -19 ಸೋಂಕಿತರಾಗಿ ಚಿಕಿತ್ಸೆ ಪಡೆಯುತ್ತಿದ್ದ ಭಟ್ಕಳದ ಇಬ್ಬರು ಬಹುತೇಕ ಗುಣಮುಖರಾಗಿದ್ದು, ಇಬ್ಬರ ಗಂಟಲ ದ್ರವ ಪರೀಕ್ಷಾ ವರದಿಯನ್ನು ಕಳುಹಿಸಲಾಗಿದ್ದು, ಅಂತಿಮ ಪರೀಕ್ಷಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ.

ಒಬ್ಬ ರೋಗಿಯ ಪರೀಕ್ಷಾ ವರದಿ ನೆಗೆಟಿವ್‌ ಬಂದಿದೆ. ಆದರೆ ಇನ್ನೊಂದು ವರದಿ ಬರಬೇಕಿದೆ. ಒಬ್ಬ ಸೋಂಕಿತ ಬಿಡುಗಡೆಯಾಗಬೇಕಾದರೆ ಎರಡು ವರದಿಗಳು ಬರಬೇಕು. ಇನ್ನೊಬ್ಬ ವ್ಯಕ್ತಿಯೂ ಆರೋಗ್ಯದಿಂದ ಇದ್ದು ಆತನ ಗಂಟಲ ದ್ರವ ಪರೀಕ್ಷಾ ವರದಿಯನ್ನೂ ನಿರೀಕ್ಷಿಸಲಾಗುತ್ತಿದೆ.

ಹೋಂ ಕ್ವಾರಂಟೈನಲ್ಲಿದ್ದ ವ್ಯಕ್ತಿಯ ವಿವಿಧ ಬೇಡಿಕೆಗೆ ಸುಸ್ತಾದ ಅಧಿಕಾರಿಗಳು!

ಪತಂಜಲಿ ಆಸ್ಪತ್ರೆಯಲ್ಲಿ ಭಟ್ಕಳ ಮೂಲದ 8 ಜನರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಉಳಿದವರೂ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ.

ವೆನ್ಲಾಕ್‌ ಆಸ್ಪತ್ರೆಯಿಂದ ಇಂದು ಡಿಸ್‌ಚಾರ್ಜ್‌

ಭಟ್ಕಳ ಮೂಲದ ವ್ಯಕ್ತಿ ದುಬೈಯಿಂದ ಮಂಗಳೂರಿಗೆ ಬರುತ್ತಿದ್ದಂತೆ ಕೋವಿಡ್‌ 19 ಸೋಂಕು ಪತ್ತೆಯಾಗಿತ್ತು. ಹೀಗಾಗಿ ಅಲ್ಲಿಯೇ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಅವರು ಸಂಪೂರ್ಣ ಗುಣಮುಖರಾಗಿದ್ದು ಇಂದು ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಮಾಡಲಾಗುತ್ತದೆ.