ಬೆಂಗಳೂರು(ಏ. 10) ನಾಗರಿಕರು ಒಂದು ಕಡೆ ಕೊರೋನಾ ಆತಂಕ, ಇನ್ನೊಂದು ಲಕಡೆ ಲಾಕ್ ಡೌನ್ ತಾಪತ್ರಯ ಎದುರಿಸುತ್ತ ಇದ್ದರೆ ಇಲ್ಲೊಂದು ವಿವಿ ಈಗಲೇ ಫೀಸ್ ಕಟ್ಟಿ ಎಂದು ನೋಟಿಸ್ ಜಾರಿ ಮಾಡಿದೆ. ಸರ್ಕಾರದ ಆದೇಶ ಈ ವಿವಿಯ ಕಿವಿಗೆ ಬಿದ್ದ ಹಾಗೆ ಕಾಣುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರು ಯಾರ ಮೊರೆ ಹೋಗಬೇಕೋ ತಿಳಿಯದಾಗಿದೆ.

 ಕೊರೊನಗಿಂತ ಮಾರಕವಾಗಿದ್ಯಾ ಅಲೆಯನ್ಸ್ ವಿವಿ ಎಂಬ ಪ್ರಶ್ನೆ ಮೂಡಿದೆ.  ಕೊರೊನ ತುರ್ತು ಪರಿಸ್ಥಿತಿ ನಡುವೆಯೂ ವಿವಿ ಫೀಸ್ ಕಟ್ಟುವಂತೆ ಹೇಳಿದೆ.  ಒಂದು ದಿನ ಫೀಸ್ ಕಟ್ಟೋಕೆ ತಡವಾದ್ರೆ 200 ಫೈನ್! ಎಬ ಎಚ್ಚರಿಕೆಯನ್ನು ನೀಡಿದೆ.

ಕರ್ನಾಟಕದಲ್ಲಿ 200 ದಾಟಿದ ಕೊರೋನಾ ಸೋಂಕಿತರ ಸಂಖ್ಯೆ

15  ದಿನಗಳ ನಂತರದಲ್ಲಿ ಫೀಸ್ ಕಟ್ಟದಿದ್ರೆ 300 ದಂಡ ಕಟ್ಟಬೇಕಂತೆ. ಸದಾ ಒಂದಿಲ್ಲ ಒಂದು ಕಾರಣಕ್ಕೆ  ಚರ್ಚೆಯಲ್ಲಿರುವ ಅಲೈಯನ್ಸ್ ವಿವಿಯ ಮತ್ತೊಂದು ಕರ್ಮಕಾಂಡ ಈ ಮೂಲಕ ಬೆಳಕಿಗೆ ಬಂದಂತೆ ಆಗಿದೆ. 
NEFT. RTGS ಮೂಲಕ ಫೀಸ್ ಕಟ್ಟಬೇಕು ಎಂದು ಹೇಳಿದೆ. 

ಈ ಮೇಲ್ ಮೂಲಕ  ಅಲೆಯನ್ಸ್ ವಿವಿ ನೋಟಿಸ್ ಸರ್ವ್ ಮಾಡಿದೆ. ಲಾಕ್ ಡೌನ್ ಮುಗಿಯುವವರೆಗೆ ಬಾಡಿಗೆದಾರರು ಬಾಡಿಗೆ ನೀಡಲು ಒತ್ತಾಯ ಮಾಡುವಂತೆ ಇಲ್ಲ. ಶಿಕ್ಷಣ ಸಂಸ್ಥೆಗಳು ಫೀಸ್ ಗೆ ಒತ್ತಾಯ ಹೇರುವಂತೆ, ದಿನಾಂಕ ನಿಗದಿ ಮಾಡುವಂತೆ ಇಲ್ಲ ಎಂದು ಸರ್ಕಾರಗಳು ಹೇಳಿದ್ದರೂ ಕೆಲ ಸಂಸ್ಥೆಗಳು ಮಾತು ಕೇಳುತ್ತಿಲ್ಲ.