ಹಾಸನ(ಎ.01): ಕೊರೋನಾ ವೈರಸ್‌ ಹಾಸನದಲ್ಲಿ ಇನ್ನು ಹರಡಿಲ್ಲ ಎಂಬ ಧೈರ್ಯದಲ್ಲಿ ಜನತೆ ಕೇವಲವಾಗಿ ತೆಗೆದುಕೊಂಡು, ಮಂಗಳವಾರ ಬೆಳಗ್ಗೆ ಹಾಸನಾಂಬ ದೇವಾಲಯದ ವೃತ್ತ ಮತ್ತು ಹೊಸಲೈನ್‌ ರಸ್ತೆ ಸೇರಿದಂತೆ ಇತರೆ ಭಾಗಗಳಲಿ ಮಂಗಳವಾರ ವಾಹನ ಸಂಚಾರ ಹೆಚ್ಚಾಗಿ ಟ್ರಾಫಿಕ್‌ ಜಾಮ್‌ ಉಂಟಾಯಿತು.

ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆ, ಆರೋಗ್ಯ ಇಲಾಖೆ, ನಗರಸಭೆ ಸೇರಿದಂತೆ ಅನೇಕ ಇಲಾಖೆಗಳು ಕೊರೋನಾ ಬಗ್ಗೆ ಜಾಗೃತರಾಗಲು ರಾತ್ರಿ ಬೆಳಿಗ್ಗೆ ಎನ್ನದೇ ನಿಗಾವಹಿಸಿ ಅರಿವು ಮೂಡಿಸುತ್ತಿದ್ದಾರೆ.

ಭಾರತ್‌ ಲಾಕ್‌ಡೌನ್‌: 'ಬೇರೆ ರಾಜ್ಯದಲ್ಲಿರುವ ಕನ್ನಡಿಗರ ನೆರವಿಗೆ ಮನವಿ'

ಕಳೆದ ಒಂದು ವಾರದಿಂದ ವಾಹನ ಸಂಚಾರ ಕಡಿಮೆಯಾಗಿರುವುದು ಕಂಡು ಬಂದರೇ, ಮಂಗಳವಾರದಂದು ದಿಢೀರನೇ ವಾಹನ ಸಂಚಾರದಲ್ಲಿ ಹೆಚ್ಚಳ ಕಾಣಿಸಿತು. ಹಾಸನಾಂಬ ದೇವಾಲಯದ ಮುಂಭಾಗ ತರಕಾರಿ ವ್ಯಾಪಾರ ಕೂಡ ರಸ್ತೆಯಲ್ಲೆ ನಡೆಯುತ್ತಿದ್ದು, ಇದರ ಜೊತೆಯಲ್ಲಿ ವಾಹನಗಳು ತುಂಬಿ ತುಳುಕುತಿತ್ತು. ಇವರ ಜೊತೆ ಒಂದು ಪೊಲೀಸ್‌ ಬಸ್‌ ಸಿಕ್ಕಿ ಹಾಕಿಕೊಂಡು ಅಲ್ಲಿಂದ ಹೊರ ಹೋಗಲು ಹರಸಾಹಸ ಪಡುತ್ತಿದ್ದರು.