ಕೋಲ್ಕತಾ(ಮಾ.31): ಕಚೇರಿ ರಜೆ ವೇಳೆ ಮೋಜು ಮಸ್ತಿಗಾಗಿ ಮನೆಯಿಂದ ಹೊರ ಹೋಗುವ ಗಂಡಸರು ತಮ್ಮ ಪತ್ನಿಯರಿಗೆ ಬಿಸಿನೆಸ್‌ ಪ್ರವಾಸವೆಂದು ಹೇಳೋದು ಹೊಸದೇನಲ್ಲ. ಆದರೆ ಹೀಗೆ ಹೇಳಿ ಹೋದವರಿಬ್ಬರು ಇದೀಗ ಕೊರೋನಾ ಕಾರಣದಿಂದಾಗಿ ಸಿಕ್ಕಿಬಿದ್ದ ಅಚ್ಚರಿಯ ಪ್ರಕರಣವೊಂದು ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಕೊರೋನಾ ಕುಂಟು ನೆಪ, 20 ಸಖಿಯರ ಜೊತೆ ಸ್ಟಾರ್ ಹೋಟೆಲ್ ಕೋಣೆ ಸೇರಿದ ಮಹಾರಾಜ!

ಇಲ್ಲಿನ ಅಂಬಾಲಾ ಮೂಲದ ವ್ಯಕ್ತಿಗಳಿಬ್ಬರು ಇತ್ತೀಚೆಗೆ ಕಚೇರಿ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗುವುದಾಗಿ ಮನೆಯಲ್ಲಿ ಪತ್ನಿಯರಿಗೆ ಹೇಳಿ, ಸೀದಾ ಬ್ಯಾಂಕಾಂಕ್‌ಗೆ ಮಜಾ ಮಾಡಲು ಹೋಗಿ ಬಂದಿದ್ದರು.

ಆದರೆ ಕೊರೋನಾ ಕಾರಣ, ವಿದೇಶಗಳಿಗೆ ಹೋಗಿಬಂದವರ ಮೇಲೆ ಕಣ್ಣಿಟಿರುವ ಅಧಿಕಾರಿಗಳು, ಈ ಇಬ್ಬರ ಬ್ಯಾಂಕಾಕ್‌ ಪ್ರವಾಸದ ಮಾಹಿತಿ ಪಡೆದು, ಇಬ್ಬರ ಮನೆಗೂ ತೆರಳಿ ಮನೆಯ ಹೊರಗೆ 14 ದಿನಗಳ ಕ್ವಾರಂಟೈನ್‌ ನೋಟಿಸ್‌ ಅಂಟಿಸಿ ಬಂದಿದ್ದಾರೆ. ಇದನ್ನು ನೋಡಿದ ಮೇಲೆ ಪತ್ನಿಯರಿಗೆ ಶಾಕ್‌ ಆಗಿ, ಯಜಮಾನರ ಬಳಿ ವಿಚಾರಿಸಿದಾಗ ಅವರು ಸತ್ಯ ಒಪ್ಪಿಕೊಂಡಿದ್ದಾರಂತೆ. ಇಷ್ಟಾದ ಮೇಲೆ ನೋಟಿಸ್‌ ಅಂಟಿಸಿದ ಅಧಿಕಾರಿಗಳ ಮೇಲೆ ಇಬ್ಬರು ಶೋಕಿಲಾಲರು ರೇಗಾಡಿದ್ದಾರಂತೆ.