ಮೈಸೂರು(ಏ.02): ಕೋವಿಡ್‌-19 ವೈರಸ್‌ ಸೋಂಕು ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಶ್ರೀ ಸುತ್ತೂರು ಮಠದ ಜೆಎಸ್‌ಎಸ್‌ ಮಹವಿದ್ಯಾಪೀಠ ಹಾಗೂ ಸಂಸ್ಥೆಯ ನೌಕರರಿಂದ 50 ಲಕ್ಷ ಕೊಡುಗೆ ನೀಡಲಾಯಿತು.

ಈ ವೈರಾಣು ಹರಡುವುದನ್ನು ತಡೆಗಟ್ಟಲು ಸರ್ಕಾರದೊಂದಿಗೆ ಕೈಜೋಡಿಸಲು ಹಾಗೂ ಈ ತುರ್ತು ಪರಿಸ್ಥಿತಿಯ ನಿವಾರಣೆಗಾಗಿ ಸುತ್ತೂರು ಮಠ, ಜೆಎಸ್‌ಎಸ್‌ ಮಹಾವಿದ್ಯಾಪೀಠ ಹಾಗೂ ಜೆಎಸ್‌ಎಸ್‌ ಸಂಸ್ಥೆಯ ನೌಕರರು ಸ್ವ- ಇಚ್ಛೆಯಿಂದ ನೀಡಿರುವ ಮೊಬಲಗನ್ನು ಒಟ್ಟುಗೂಡಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ . 50 ಲಕ್ಷ ಚೆಕ್‌ ಅನ್ನು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸುತ್ತೂರು ಶಾಖಾ ಮಠದಲ್ಲಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರಿಗೆ ಹಸ್ತಾಂತರಿಸಿದರು.

ಕೊರೋನಾ ವೈರಸ್ ಪೀಡಿತರ ಸೇವೆಗೆ ಮದ್ವೆಯನ್ನೇ ಮುಂದೂಡಿದ ವೈದ್ಯೆ!

ಸಂಸದ ಪ್ರತಾಪ್‌ ಸಿಂಹ, ಜಿಲ್ಲಾಧಿಕಾರಿ ಅಭಿರಾಮ್‌ ಜಿ. ಶಂಕರ್‌, ಜೆಎಸ್‌ ಎಸ್‌ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ, ಕಾರ್ಯದರ್ಶಿ ಎಸ್‌. ಶಿವಕುಮಾರಸ್ವಾಮಿ, ಜೆಎಸ್‌ಎಸ್‌ ಎಎಚ್‌ಇಆರ್‌ ಸಮಕುಲಾಧಿಪತಿ ಡಾ.ಬಿ. ಸುರೇಶ…, ಎಂವಿಪಿ ಹಣಕಾಸು ವಿಭಾಗದ ನಿರ್ದೇಶಕ ಎಸ್‌. ಪುಟ್ಟಸುಬ್ಬಪ್ಪ, ಕಾಲೇಜು ಶಿಕ್ಷಣ ವಿಭಾಗದ ಬಿ. ನಿರಂಜನಮೂರ್ತಿ ಮೊದಲಾದವರು ಇದ್ದರು.