ಲಾಕ್‌ಡೌನ್ ಉಲ್ಲಂಘಿಸಿದವರಿಗೆ ಸುಡು ಬಿಸಿಲಲ್ಲಿ ಯೋಗ ಮಾಡುವ ಶಿಕ್ಷೆ!
ಸರ್ಕಾರದ ಆದೇಶ ಉಲ್ಲಂಘಣೆ ಮಾಡುತ್ತಿರುವ ಯುವಕರು| ಅನಗತ್ಯವಾಗಿ ಮನೆಯಿಂದ ಹೊರಗಡೆ ಬಂದವರಿಗೆ ಬಿಸಿಲಿನಲ್ಲಿ ಯೋಗಾಸನ ಮಾಡಿಸುವ ಮೂಲಕ ಶಿಕ್ಷೆ ವಿಧಿಸಿದ ಪೊಲೀಸರು|ಲಾಕ್‍ಡೌನ್ ಉಲ್ಲಂಘಿಸಿದವರಿಗೆ ಈಗಾಗಲೇ ಬಸ್ಕಿ, ಕಸ ಗುಡಿಸುವ ಶಿಕ್ಷೆ|
ಕಲಬುರಗಿ(ಏ.05): ಲಾಕ್‍ಡೌನ್ ಉಲ್ಲಂಘನೆ ಮಾಡಿ ನಗರದಲ್ಲಿ ಸುತ್ತಾಡುತ್ತಿದ್ದ ಯುವಕರನ್ನು ತಡೆದು ಪೊಲೀಸರು ಸುಡು ಬಿಸಿಲಿನಲ್ಲಿ ಯೋಗಾಸನ ಮಾಡಿಸುವ ಮೂಲಕ ಶಿಕ್ಷೆ ನೀಡಿದ್ದಾರೆ.
ಕೊರೋನಾ ತಡೆಗಟ್ಟಲು ಭಾರತ್ ಲಾಕ್‍ಡೌನ್ ಮಾಡಿದ್ದರೂ ಸಹ ನಗರದಲ್ಲಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ಯುವಕರ ಸಂಖ್ಯೆ ಕಡಿಮೆಯಾಗಿಲ್ಲ. ಲಾಕ್‍ಡೌನ್ ಉಲ್ಲಂಘಿಸಿದವರಿಗೆ ಈಗಾಗಲೇ ಬಸ್ಕಿ, ಕಸ ಗುಡಿಸುವ ಶಿಕ್ಷೆ ನೀಡಲಾಗಿತ್ತು. ಆದರೆ ಯುವಕರ ಸುತ್ತಾಟ ಕಡಿಮೆಯಾಗಿರಲಿಲ್ಲ. ಹೀಗಾಗಿ ವಿಶೇಷ ರೀತಿಯಲ್ಲಿ ಶನಿವಾರ ಮಧ್ಯಾಹ್ನ ಕಪಾಲಭಾತಿ ಸೇರಿದಂತೆ ಯೋಗಾಸದ ವಿವಿಧ ಭಂಗಿಗಳ ಆಸನ ಮಾಡಿಸಿ ಕೈಯಲ್ಲಿ ಕ್ಯಾಂಡಲ್ ಕೊಟ್ಟು ಭಾನುವಾರ ರಾತ್ರಿ ದೀಪ ಬೆಳಗಿಸಲು ಪ್ರತಿಜ್ಞಾ ವಿಧಿ ಬೋಧಿಸಿದ್ದಾರೆ.
ಕೊರೋನಾ ಆಂತಕದ ಮಧ್ಯೆ ಕಲಬುರಗಿಯಲ್ಲಿ ಹೊಸ ಎಮರ್ಜನ್ಸಿ ಸೃಷ್ಟಿ: ಕಂಗಾಲಾದ ಜನತೆ!
ಕೊರೋನಾ ವೈರಸ್ ತಡೆಗಟ್ಟಲು ಮನೆಯಲ್ಲಿಯೇ ಉಳಿದು ಹೋರಾಟ ಮಾಡುತ್ತೇವೆ. ಪ್ರಧಾನಿ ಮೋದಿ ಕರೆಯಂತೆ ಏ.5ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ನಮ್ಮ ಮನೆಯಲ್ಲಿಯೇ ದೀಪ ಬೆಳಗಿಸುತ್ತೇವೆಂದು ಸವಾರರಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ನಂತರ ದಂಡ ಹಾಕಿ ಬೈಕ್ ಕೊಟ್ಟು ಕಳಿಸಿದ್ದಾರೆ.