ಭಾರತ್ ಲಾಕ್‌ಡೌನ್ ಬಳ್ಳಾರಿ ಜನರಿಂದ ಉತ್ತಮ ಸ್ಪಂದನೆ: ಧನ್ಯವಾದ ತಿಳಿಸಿದ ಎಸ್‌ಪಿ
ಪ್ರಧಾನಿ ಮೋದಿ ಕರೆಗೆ ಉತ್ತಮ ಬೆಂಬಲ| ಬಳ್ಳಾರಿ ಸಂಪೂರ್ಣ ಸ್ತಬ್ಧ| ಜನತೆಗೆ ಧನ್ಯವಾದ ತಿಳಿಸಿದ ಬಳ್ಳಾರಿ ಎಸ್ಪಿ ಸಿಕೆ ಬಾಬಾ| ಫೋರ್ಸ್ ಮಾಡಿ ಕಾರ್ಮಿಕರನ್ನ ಕರೆಸುತ್ತಿಲ್ಲ|
ಬಳ್ಳಾರಿ(ಮಾ.26): ಭಾರತ್ ಲಾಕ್‌ಡೌನ್ ನಿಮತ್ತ ರಾಜ್ಯದ ಅನೇಕ ಕಡೆ ಪೊಲೀಸರು ಲಾಠಿ ಚಾರ್ಜ್ ಮಾಡಿ ಜನರನ್ನ ಮನೆಗೆ ಕಳುಹಿಸುತ್ತಿದ್ದಾರೆ. ಆದರೆ, ಬಳ್ಳಾರಿಯಲ್ಲಿ ಮಾತ್ರ ಪರಿಸ್ಥಿತಿ ಭಿನ್ನವಾಗಿದೆ. ಹೌದು ಇಲ್ಲಿನ ಜನರು ಸರ್ಕಾರದ ಮನವಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಪ್ರಧಾನಿ ಮೋದಿ ಅವರ ಕರೆಗೆ ಬೆಂಬಲ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬಳ್ಳಾರಿ ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಪೊಲೀಸರು ಇತರ ಜಿಲ್ಲೆಯಂತೆ ಹರ ಸಾಹಸ ಒಡುವ ಪ್ರಮೇಯ ಬಂದಿಲ್ಲ. ಹೀಗಾಗಿ ಬಳ್ಳಾರಿ ಎಸ್ಪಿ ಸಿಕೆ ಬಾಬಾ ಬಳ್ಳಾರಿ ಜನರ ಸ್ಪಂದನೆಗೆ ಧನ್ಯವಾದ ತಿಳಿಸಿದ್ದಾರೆ .
ಹೆಣಗಳ ರಾಶಿಯೇ ಬಿದ್ದ ಇಟಲಿಯಲ್ಲಿ ಲಾಕ್‌ಡೌನ್ ನಂತ್ರ ಕೊರೋನಾ ಪ್ರಕರಣ ಇಳಿಕೆ
ಜಿಂದಾಲ್ ಸೇರಿದಂತೆ ಖಾಸಗಿ ಕಂಪನಿ ಕೆಲಸ ನಿರ್ವಹಿಸುವ ವಿಚಾರದ ಬಗ್ಗೆ ಮಾತನಾಡಿದ ಎಸ್ಪಿ ಸಿಕೆ ಬಾಬಾ ಅವರು, ಸ್ಟೀಲ್ ಪ್ರೊಡಕ್ಷನ್ ಅವಶ್ಯಕ ಅನ್ಕೊಂಡು ಜಿಂದಾಲ್ ಗೆ ಎಕ್ಸಂಪ್ಷನ್ ಕೊಡಲಾಗಿದೆ. ಫೋರ್ಸ್ ಮಾಡಿ ಕಾರ್ಮಿಕರನ್ನ ಕರೆಸುತ್ತಿಲ್ಲ. ಶೀಘ್ರದಲ್ಲೇ ಜಿಂದಾಲ್‌ನವರು ಅಫಿಶೀಯಲ್ ಸ್ಟೇಟ್ ಮೆಂಟ್ ಕೊಡುತ್ತಾರೆ. ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳುವಂತೆ ನಾವು ಹೇಳಿದ್ದೇವೆ. ಇವತ್ತು ಕಂಪನಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ನಾನಾ ತಾಂಡಾಗಳಲ್ಲಿ ಜನರೇ ಸ್ವಯಂ ಪ್ರೇರಿತವಾಗಿ ತಾಂಡಾಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ತಾಂಡಾಗಳ ಸುತ್ತಲೂ ಬೇಲಿ ಹಾಕಿ, ಹೊರಗಿನಿಂದ ಬರುವವರಿಗೆ ನಿರ್ಬಂಧ ಹೇರಿದ್ದಾರೆ. ಕೂಡ್ಲಿಗಿ ತಾಲೂಕಿನ ಶ್ರೀ ಕಂಠಾಪುರ ತಾಂಡಾ, ಪೂಜಾರಹಳ್ಳಿ ತಾಂಡಾ, ಕೊಟ್ಟುರು ತಾಲೂಕಿನ ದೂಪದಹಳ್ಳಿ ತಾಂಡ, ಹಗರಿಬೊಮ್ಮನ ಹಳ್ಳಿಯ ಆನೆಕಲ್ ತಾಂಡಾ, ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡಾಗಳಲ್ಲಿ ಯುವಕರು ಬೇಕಿ ಹಾಕಿದ್ದಾರೆ. ಹೊರಗಿನಿಂದ ಬಂದರೆ ಮೊದಲು ಮೆಡಿಕಲ್ ಟೆಸ್ಟ್, ಸ್ಯಾನಿಟೈಜೇಷನ್ ಸೇರಿದಂತೆ ಮಹಾಮಾರಿಯಿಂದ ಕಾಪಾಡಿಕೊಳ್ಳಲು ಮನೆಯಲ್ಲಿಯೇ ಲಾಕ್ ಆಗಿರಿ ಎಂದು ಯುವಕರು ಜಾಗೃತಿ ಮೂಡಿಸುತ್ತಿದ್ದಾರೆ.