ಲಾಕ್‌ಡೌನ್: ಸಿದ್ಧಗಂಗಾ ಮಠದಿಂದ ಊಟದ ವ್ಯವಸ್ಥೆ
ಕೊರೋನಾದಿಂದ ಸಮಸ್ಯೆಗೆ ಈಡಾಗಿರುವ ನಿರ್ಗತಿಕರಿಗೆ, ಹಸಿದವರಿಗೆ ಸಿದ್ಧಗಂಗಾ ಮಠದಿಂದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ದಿನ 200ಕ್ಕೂ ಹೆಚ್ಚು ಮಂದಿಗೆ ಮಠದ ವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ತುಮಕೂರು(ಮಾ.31): ಕೊರೋನಾದಿಂದ ಸಮಸ್ಯೆಗೆ ಈಡಾಗಿರುವ ನಿರ್ಗತಿಕರಿಗೆ, ಹಸಿದವರಿಗೆ ಸಿದ್ಧಗಂಗಾ ಮಠದಿಂದ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಪ್ರತಿ ದಿನ 200ಕ್ಕೂ ಹೆಚ್ಚು ಮಂದಿಗೆ ಮಠದ ವತಿಯಿಂದ ದಾಸೋಹ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.
ಹಸಿದವರಿಗೆ ಊಟ ತಲುಪಿಸಲು ಸ್ವಯಂ ಸೇವಕರಿಗೆ ಶ್ರೀಮಠದ ವತಿಯಿಂದ ಆಹಾರದ ಪೊಟ್ಟಣಗಳನ್ನು ನೀಡಲಾಗಿದೆ. ಕೊರೋನಾ ಭೀತಿ ಹಿನ್ನೆಲೆಯಲ್ಲಿ ಈಗಾಗಲೇ ಭಕ್ತರಿಗೆ ಮಠಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ.
7 ರಾಜ್ಯಗಳಲ್ಲಿ 28 ಸಾವಿರ ಕೈದಿಗಳಿಗೆ ಬಿಡುಗಡೆ ಭಾಗ್ಯ
ಅಲ್ಲದೇ ಶಿವೈಕ್ಯ ಡಾ. ಶಿವಕುಮಾರ ಸ್ವಾಮೀಜಿ ಅವರ ಗುರುವಂದನೆಯನ್ನು ಸಹ ರದ್ದುಪಡಿಸಲಾಗಿದೆ. ದಿನೇ ದಿನೇ ಹಸಿದವರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮಠದ ವತಿಯಿಂದ ನಿರ್ಗತಿಕರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.