ನಮಾಜ಼್ ಗೆ ನಿಷೇಧವಿದ್ರೂ ಮಸೀದಿಗೆ ಆಗಮಿಸಿದ ಜನ: ಪೊಲೀಸರಿಂದ ಲಾಠಿ ಚಾರ್ಜ್
ಮಸೀದಿಗೆ ನಮಾಜ಼್ ಮಾಡಲು ಬಂದಿದ್ದ ಜನರ ಮೇಲೆ ಪೊಲೀಸರಿಂದ ಲಾಠಿ ಚಾರ್ಜ್| ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ನಡೆದ ಘಟನೆ| ಎರಡು ಮಸೀದಿಗಳಲ್ಲಿ ನಮಾಜ಼್ ಮಾಡಲು ಆಗಮಿಸಿದ್ದ 30ಕ್ಕೂ ಹೆಚ್ಚು ಮಂದಿ|
ಬೆಳಗಾವಿ(ಮಾ.27): ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಮಾಡದಂತೆ ನಿಷೇಧವಿದ್ದರೂ ಆಗಮಿಸಿದ್ದ ಜನರನ್ನ ಮಸೀದಿಯಿಂದ ಹೊರಕರೆಯಿಸಿ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಜಿಲ್ಲೆಯ ಗೋಕಾಕ್‌ನಲ್ಲಿ ಇಂದು(ಶುಕ್ರವಾರ) ನಡೆದಿದೆ.
ಕೊರೋನಾ ವೈರಸ್ ಅನ್ನು ದೇಶದಿಂದ ತೊಗಿಸಲು ದೇಶಾದ್ಯಂತ ಲಾಕ್‌ಡೌನ್ ಇದ್ದರೂ ಜನರು ಕ್ಯಾರೆ ಎನ್ನದೇ ಮಸೀದಿಯಲ್ಲಿ ನಮಾಜ಼್ ಮಾಡಲು ಬಂದಿದ್ದರು. ನಗರದ ಎರಡು ಮಸೀದಿಗಳಲ್ಲಿ ಮೂವತ್ತಕ್ಕೂ ಅಧಿಕ ಜನರು ನಮಾಜ಼್ ಮಾಡುತ್ತಿದ್ದರು.
ಶುಕ್ರವಾರದ ನಮಾಜ಼್ ಗೂ ಬ್ರೇಕ್ ಹಾಕಿದ ಕೊರೋನಾ!
ಈ ವೇಳೆ ಸ್ಥಳಕ್ಕಾಗಮಿಸಿದ ಪೊಲೀಸರು ಮಸೀದಿಯಿಂದ ಜನರನ್ನ ಹೊರಗಡೆ ಕರೆಯಿಸಿ ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಏಟು ಬೀಳುತ್ತಿದ್ದಂತೆ ಜನರು ಓಡೊಡಿ ಮನೆ ಸೇರಿಕೊಂಡಿದ್ದಾರೆ. ಈ ವೇಳೆ ಮಸೀದಿ ಮುಖಂಡರನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.