ಬೀದಿ ಬೀದಿ ಸುತ್ತುತ್ತಿದ್ದ ಹೋಂ ಕ್ವಾರಂಟೈನ್ ವ್ಯಕ್ತಿ: ಆತಂಕದಲ್ಲಿ ಜನತೆ
ಹೊರಗಡೆ ತಿರುಗಾಡುತ್ತಿದ್ದ ಹೋಂ ಕ್ವಾರಂಟೈನ್ ವ್ಯಕ್ತಿ| ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುದೂರು ಗ್ರಾಮದಲ್ಲಿ ನಡೆದ ಘಟನೆ| ಕೊರೋನಾ ಆಸ್ಪತ್ರೆಗೆ ದಾಖಲಿಸಿದ ಆರೋಗ್ಯಾಧಿಕಾರಿಗಳು|
ಕುದೂರು(ಏ.04): ಹೋಂ ಕ್ವಾರಂಟೈನ್‌ನಲ್ಲಿ ಇರಬೇಕಾಗಿದ್ದ ದೆಹಲಿ ಪ್ರವಾಸ ಮುಗಿಸಿ ಮರಳಿರುವ ವ್ಯಕ್ತಿ ಬೀದಿಯಲ್ಲಿ ತಿರುಗಾಡುತ್ತಿದ್ದ ಕಾರಣ ಆತನನ್ನು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕುದೂರು ಗ್ರಾಮದಲ್ಲಿ ನಡೆದಿದೆ.
ಕುದೂರು ಗ್ರಾಮದ ವಸಂತ್ ಅವರ ಕೈಗೆ ಸೀಲ್ ಹಾಕಿ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದರು. ಇದನ್ನು ಉಲ್ಲಂಘಿಸಿ ವಸಂತ್ ಕುದೂರಿನ ಬೀದಿಗಳಲ್ಲಿ ತಿರುಗಾಡುತ್ತಿದ್ದರು. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದಾರೆ. ಹೋಂ ಕ್ವಾರಂಟೈನ್‌ನಲ್ಲಿರಬೇಕಾದ ವ್ಯಕ್ತಿ ಹೊರಗಡೆ ತಿರುಗಾಡುತ್ತಿದ್ದರಿಂದ ಸ್ಥಳೀಯರು ಆತಂಕಕ್ಕೊಳಗಾಗಿದ್ದರು.
ಕರ್ನಾಟಕ ಸೇರಿ 14 ರಾಜ್ಯದಲ್ಲಿ ಜಮಾತ್ ಸೋಂಕು, ಕೇಂದ್ರ ಬಿಚ್ಚಿಟ್ಟ ಶಾಕಿಂಗ್ ವಿಷಯ
ಪೊಲೀಸರ ಎಚ್ಚರಿಕೆಗೂ ಬಗ್ಗದ ವಸಂತ್ ಬೀದಿಗಳಲ್ಲಿ ಸುತ್ತಾಡುವುದನ್ನು ನಿಲ್ಲಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ವಸಂತ್ ನನ್ನು ಕೊರೋನಾ ಚಿಕಿತ್ಸೆಗಾಗಿ ಆಸ್ಪತ್ರೆಯನ್ನಾಗಿ ಸಿದ್ದ ಪಡಿಸಿರುವ ಮಾಗಡಿ ಬಳಿಯ ಹುಲಿಕಟ್ಟೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ದಾಖಲಿಸಿದ್ದಾರೆ.