ಕೊರೋನಾ ಆತಂಕ: ವಾಹನಕ್ಕೆ ಮುಗಿಬಿದ್ದು ಆಹಾರಧಾನ್ಯ ಹೊತ್ತೊಯ್ದ ಜನ!

ಆಹಾರ ಧಾನ್ಯಗಳನ್ನು ವಿತರಿಸುವ ವೇಳೆ ವಾಹನಕ್ಕೆ ಮುಗಿಬಿದ್ದ ಜನ| ಬಳ್ಳಾರಿ ನಗರದ 16ನೇ ವಾರ್ಡ್‌ನ ಅಂಜಿನಪ್ಪ ಜಿನ್‌ ಬಳಿ ನಡೆದ ಘಟನೆ| ಕಾಂಗ್ರೆಸ್‌ನಿಂದ ಆಹಾರ ಧಾನ್ಯ ವಿತರಣೆ ಕಾರ್ಯಕ್ರಮದಲ್ಲಿ ನಡೆದ ಘಟನೆ|

People did not Maintain in Social distance in Ballari

ಬಳ್ಳಾರಿ(ಏ.08): ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವವರಿಗೆ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಆಹಾರ ಧಾನ್ಯಗಳನ್ನು ವಿತರಿಸುವ ವೇಳೆ ವಾಹನಕ್ಕೆ ಮುಗಿಬಿದ್ದ ಜನರು ಆಹಾರಧಾನ್ಯಗಳ ಚೀಲಗಳನ್ನು ಹೊತ್ತೊಯ್ದ ಘಟನೆ ನಗರದ ಇಲ್ಲಿನ 16ನೇ ವಾರ್ಡ್‌ನ ಅಂಜಿನಪ್ಪ ಜಿನ್‌ ಬಳಿ ನಡೆದಿದೆ.

ಕಾಂಗ್ರೆಸ್‌ನಿಂದ ಆಹಾರ ಧಾನ್ಯ ಹಂಚಿಕೆ ಮಾಡುತ್ತಿದ್ದಾರೆ ಎಂದು ತಿಳಿಯುತ್ತಿದ್ದಂತೆಯೇ ಬಡವರು ಜತೆ ಮಧ್ಯಮ ವರ್ಗದವರು ಸಹ ವಾಹನಕ್ಕೆ ಮುಗಿ ಬಿದ್ದರು. ವಾಹನದ ಮೇಲೇರಿ ಒಬ್ಬೊಬ್ಬರು ಎರೆಡೆರೆಡು ಚೀಲಗಳನ್ನು ಹೊತ್ತೊಯ್ದರು. ಮತ್ತೆ ಕೆಲವರು ನಾಲ್ಕೈದು ಪ್ಯಾಕೆಟ್‌ಗಳನ್ನು ಕಿತ್ತುಕೊಂಡು ದ್ವಿಚಕ್ರ ವಾಹನದ ಮೇಲಿಟ್ಟುಕೊಂಡು ತೆರಳಿದರು. ಇದರಿಂದ ಬಡವರಿಗೆ ಆಹಾರ ಧಾನ್ಯಗಳನ್ನು ನೀಡುವ ಉದ್ದೇಶ ವಿಫಲವಾಯಿತು. ಪೊಲೀಸ್‌ ಬಂದೋಬಸ್ತ್‌ನೊಂದಿಗೆ ಆಹಾರ ಧಾನ್ಯಗಳನ್ನು ವಿತರಣೆ ಮಾಡಿದ್ದರೆ ಕಾಂಗ್ರೆಸ್‌ನವರ ಶ್ರಮ ಸಾರ್ಥಕವಾಗುತ್ತಿತ್ತು ಎಂದು ಸ್ಥಳೀಯರು ಹೇಳಿದರು.

ತಬ್ಲಿಘಿ ಜಮಾತ್‌ನಲ್ಲಿ ಭಾಗಿಯಾದವರಿಗೆ ಬಳ್ಳಾರಿ SP ಖಡಕ್ ವಾರ್ನಿಂಗ್..!

ಕೊರೋನಾ ವೈರಸ್‌ ನಿಯಂತ್ರಿಸಲು ಜಿಲ್ಲೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಮನವಿ ಮಾಡಿಕೊಂಡರೂ ಜವಾಬ್ದಾರಿ ಹೊತ್ತ ಪಕ್ಷಗಳೇ ಸಾಮಾಜಿಕ ಅಂತರದ ಕಡೆ ಗಮನ ಹರಿಸುತ್ತಿಲ್ಲ ಎಂಬುದು ಕಂಡು ಬಂತು. ಆಹಾರಧಾನ್ಯಗಳನ್ನು ಪಡೆಯಲು ಜಮಾಯಿಸಿದ್ದ ಜನರು ಒಬ್ಬರ ಮೇಲೊಬ್ಬರು ಬಿದ್ದಂತೆ ಕಂಡು ಬಂದರು.
 

Latest Videos
Follow Us:
Download App:
  • android
  • ios