ಮಂಗಳೂರು(ಮಾ.29): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮೂಲ್ಕಿ ಸಂಪೂರ್ಣ ಬಂದ್‌ ಘೋಷಿಸಿದ್ದು, ಎಲ್ಲ ಕಡೆಗಳಲ್ಲಿ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಈ ಸಂದರ್ಭ ವೃದ್ಧನ ಮೇಲೆ ಪಿಡಿಒ ಲಾಠಿ ಬೀಸಿರುವ ಘಟನೆ ನಡೆದಿದೆ.

ಪಕ್ಷಿಕೆರೆಯಲ್ಲಿ ವಯಸ್ಕ ವ್ಯಕ್ತಿಯೊಬ್ಬರು ಉಸಿರಾಟದ ತೊಂದರೆಗೆ ಚಿಕಿತ್ಸೆಗೆ ಕಿನ್ನಿಗೋಳಿ ಆಸ್ಪತ್ರೆಗೆ ತನ್ನ ಮಗನ ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ತಪಾಸಣೆ ನಿರತನಾಗಿದ್ದ ಪಂಚಾಯಿತಿ ಪಿಡಿಒ ಲಾಠಿ ಬೀಸಿದ ಘಟನೆ ನಡೆದಿದೆ.

ಕೊರೋನಾ ತಪಾ​ಸ​ಣೆಗೆ ಬಂದಿದ್ದ ಅಜ್ಜ ಮೊಮ್ಮ​ಗಳು ನಾಪ​ತ್ತೆ

ಅಲ್ಲೇ ಇದ್ದ ಪೋಲಿಸರು ಬಿಡಿಸಿ ಅವರನ್ನು ಆಸ್ಪತ್ರೆಗೆ ಹೋಗಲು ಅನುವು ಮಾಡಿಕೊಟ್ಟರು. ತುರ್ತು ಸಂದರ್ಭದಲ್ಲಿ ವಯಸ್ಸು ನೋಡದೆ ಲಾಠಿಯಿಂದ ಹೊಡೆದ ವಿಚಾರ ತಿಳಿದ ಸಾರ್ವಜನಿಕರು, ಪಿಡಿಒಗೆ ಘೇರಾವ್‌ ಹಾಕಿ ಮನೆಯವರೆಗೆ ಕರೆಸಿ ಕ್ಷಮಾಪಣೆ ಕೇಳಿಸಿ, ಛೀಮಾರಿ ಹಾಕಿ ಕಳುಹಿಸಿದ್ದಾರೆ.