Asianet Suvarna News Asianet Suvarna News

ದಿನದ 12 ಗಂಟೆ ನಂದಿನಿ ಪಾರ್ಲರ್ ಓಪನ್

ಬಮೂಲ್‌ ವ್ಯಾಪ್ತಿಯ ಎಲ್ಲ ನಂದಿನಿ ಪಾಲರ್‌ಗಳನ್ನು ದಿನದ 12 ಗಂಟೆ ತೆರೆದಿರುವಂತೆ ಸೂಚನೆ ನೀಡಲಾಗುವುದು. ಗ್ರಾಹಕರಿಗೆ ಸಮರ್ಪಕವಾಗಿ ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.

Nandini Parlor will be open 12 hours per day
Author
Bangalore, First Published Mar 27, 2020, 7:22 AM IST

ಬೆಂಗಳೂರು(ಮಾ.27): ಬಮೂಲ್‌ ವ್ಯಾಪ್ತಿಯ ಎಲ್ಲ ನಂದಿನಿ ಪಾಲರ್‌ಗಳನ್ನು ದಿನದ 12 ಗಂಟೆ ತೆರೆದಿರುವಂತೆ ಸೂಚನೆ ನೀಡಲಾಗುವುದು. ಗ್ರಾಹಕರಿಗೆ ಸಮರ್ಪಕವಾಗಿ ಲಭ್ಯವಾಗುವಂತೆ ಕ್ರಮಕೈಗೊಳ್ಳಲಾಗಿದೆ ಎಂದು ಬಮೂಲ್‌ ಅಧ್ಯಕ್ಷ ನರಸಿಂಹಮೂರ್ತಿ ತಿಳಿಸಿದ್ದಾರೆ.

ನಗರದಲ್ಲಿ ಪ್ರತಿದಿನ 9 ಲಕ್ಷ ಲೀಟರ್‌ ಹಾಲು ಹಾಗೂ 1.50 ಲಕ್ಷ ಲೀಟರ್‌ ಮೊಸರು ಪೂರೈಕೆ ಮಾಡಲಾಗುತ್ತಿದೆ. ಮಂಗಳವಾರ ಒಂದೇ ದಿನದಲ್ಲಿ 50 ಸಾವಿರ ಲೀಟರ್‌ ಹಾಲು ಹೆಚ್ಚುವರಿಯಾಗಿ ಮಾರಾಟವಾಗಿದೆ. ಹೀಗಾಗಿ ಬೇಡಿಕೆ ಹೆಚ್ಚಿದಂತೆ ಹಾಲು ಪೂರೈಕೆ ಮಾಡಲು ಬಮೂಲ್‌ ಸಿದ್ಧವಿದೆ. ಗ್ರಾಹಕರಿಗೆ ಅನುಕೂಲ ಆಗುವಂತೆ ಬೆಳಗ್ಗೆಯಿಂದ ಸಂಜೆವರೆಗೆ ಅಂದರೆ ದಿನದ 12 ಗಂಟೆ ಎಲ್ಲ ನಂದಿನಿ ಪಾಲರ್‌ಗಳು ತೆರೆದಿರುವಂತೆ ಏಜೆಂಟರಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಭಾರತ ಲಾಕ್‌ಡೌನ್: ಆನ್‌ಲೈನ್ ಶಾಪಿಂಗ್ ಹಾಗಾ ಫುಡ್‌ ಡೆಲಿವರಿ ಮೇಲಿನ ನಿರ್ಬಂಧ ತೆರವು!

ಯಾರು ಕೂಡ ನಂದಿನಿ ಹಾಲನ್ನು ನಿಗದಿಪಡಿಸಿದ ದರಕ್ಕಿಂತ ಹೆಚ್ಚು ಕೊಟ್ಟು ಖರೀದಿಸಬಾರದು. ಒಂದು ವೇಳೆ ಏಜೆಂಟರು ಅಥವಾ ಇತರರು ನಿಗದಿತ ದರಕ್ಕಿಂತ ಅಧಿಕ ಬೆಲೆಗೆ ಹಾಲು ಮಾರಾಟ ಮಾಡುವುದು ಕಂಡು ಬಂದರೆ ಬಮೂಲ್‌ಗೆ ದೂರು ಸಲ್ಲಿಸಬೇಕು ಎಂದರು.

Follow Us:
Download App:
  • android
  • ios