ಹಾವೇರಿ(ಏ.09): ಮೊಟ್ಟೆ ಸೇವಿಸುವುದರಿಂದ ಯಾವುದೇ ಆತಂಕವಿಲ್ಲ. ಇದರಿಂದ ಪೌಷ್ಟಿಕಾಂಶ ಹೆಚ್ಚಳವಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಯಾವುದೇ ಆತಂಕವಿಲ್ಲದೇ ಎಲ್ಲರೂ ಮೊಟ್ಟೆ ಸೇವಿಸಬಹುದು ಎಂದು ಶಾಸಕ ನೆಹರು ಓಲೇಕಾರ ಹೇಳಿದ್ದಾರೆ.

ನಗರದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿಗೆ ಹಾಗೂ ನಗರಸಭೆ ಆವರಣದಲ್ಲಿ ಪೌರಕಾರ್ಮಿಕರಿಗೆ ತಲಾ 1 ಡಜನ್‌ ತತ್ತಿಗಳನ್ನು ವಿತರಿಸಿ ಅವರು ಮಾತನಾಡಿದರು.

ಅಕಾಲಿಕ ಮಳೆ: ಕೋಟ್ಯಂತರ ರುಪಾಯಿ ಬೆಳೆ ಹಾನಿ, ಸಂಕಷ್ಟದಲ್ಲಿ ರೈತ!

ಲಾಕ್‌ಡೌನ್‌ ಸಮಯದಲ್ಲಿ ಸೇವಾ ನಿರತರಿಗೆ ಉಚಿತವಾಗಿ ತತ್ತಿಗಳನ್ನು ವಿತರಿಸುವ ಕಾರ್ಯಕ್ಕೆ ಪತ್ರಿ ಪೌಲ್ಟ್ರಿ ಫಾರ್ಮ್‌ ಮುಂದಾಗಿರುವುದು ಶ್ಲಾಘನೀಯವಾಗಿದೆ. ಮೊಟ್ಟೆ ಸೇವನೆಯಿಂದ ಯಾವುದೇ ಸಮಸ್ಯೆಯಿಲ್ಲ ಎಂಬುದನ್ನು ತಿಳಿಸಲು ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಗೆ ವಿತರಿಸಲಾಗಿದೆ ಎಂದರು.

ಪತ್ರಿ ಪೌಲ್ಟ್ರಿ ಫಾರ್ಮ್‌ನ ಈಶ್ವರ ಪತ್ರಿ, ಜಿಲ್ಲಾಸ್ಪತ್ರೆಯ ಸರ್ಜನ್‌ ಡಾ. ನಾಗರಾಜ ನಾಯ್ಕ ಮಾತನಾಡಿದರು. ತಹಸೀಲ್ದಾರ್‌ ಶಂಕರ ಜಿ.ಎಸ್‌., ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ. ಪಿ.ಎನ್‌. ಹುಬ್ಬಳ್ಳಿ, ಡಾ. ಎಚ್‌.ಬಿ. ಸಣ್ಣಕ್ಕಿ, ಕೆಎಂಎಫ್‌ನ ಶಿವಕುಮಾರ ಅಡ್ಮನಿ, ಪ್ರಭು ಪತ್ರಿ, ಮಲ್ಲಿಕಾರ್ಜುನ ಅಗಡಿ, ವೀರಣ್ಣ ಪತ್ರಿ ಇತರರು ಇದ್ದರು.