Asianet Suvarna News Asianet Suvarna News

ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ: ಜಮೀರ್ ವಿರುದ್ಧ ಶಶಿಕಲಾ ಜೊಲ್ಲೆ ಕಿಡಿ

ಆಶಾ ಕಾರ್ಯಕರ್ತೆಯರ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ವಿರುದ್ಧ ಸಚಿವೆ ಶಶಿಕಲಾ ಜೊಲ್ಲೆ ಕಿಡಿಕಾರಿದ್ದಾರೆ.
Minister Shashikala jolle Hits out zameer ahmed for his statement on asha workers
Author
Bengaluru, First Published Apr 4, 2020, 5:10 PM IST
ಬೆಳಗಾವಿ, (ಏ.04) : ವಿರೋಧ ಪಕ್ಷದವರು ಕೊರೋನಾ ವೈರಸ್ ಬಗ್ಗೆ ಎಷ್ಟೊಂದು ಎಚ್ಚರಿಕೆಯಿಂದ ಇದ್ದಾರೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್  ಅವರ ಹೇಳಿಕೆಯಿಂದ ತಿಳಿದು ಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಅಸಮಾಧಾನ ವ್ಯಕ್ತಪಡಿಸಿದರು.

ಶನಿವಾರ ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ದೇಶವಲ್ಲದೆ ವಿಶ್ವದಾದ್ಯಂತ ಕೊರೋನೊ ವೈರಸ್‌ನಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದರೆ ವಿರೋಧ ಪಕ್ಷದವರು ಇಷ್ಟೊಂದು ಕೀಳಾಗಿ ವಿಚಾರ ಮಾಡುತ್ತಿದ್ದಾರೆ. ಮಾಜಿ ಸಚಿವ ಜಮೀರ್ ಅಹ್ಮದ ಮಾತನಾಡಿದ ರೀತಿ ಕೊರೋನಾ ವೈರಸ್ ಬಗ್ಗೆ ಇನ್ನೂ ಎಚ್ಚರಿಕೆ ವಹಿಸಿಲ್ಲ ಎಂದು ಅನ್ನಿಸುತ್ತದೆ ಎಂದು ಟಾಂಗ್ ಕೊಟ್ಟರು.

ಎಲುಬಿಲ್ಲದ ನಾಲಿಗೆಯ ಜಮೀರ್‌: ರೇಣುಕಾಚಾರ್ಯ ಆಕ್ರೋಶ

ನಿಜಾಮುದ್ದೀನ್ ಪ್ರಕರಣ ಆಗುವ ಮುಂಚೆಯಿಂದಲೂ ಆಶಾ ಕಾರ್ಯಕರ್ತೆಯರು ಮಾಹಿತಿಯನ್ನು ಕಲೆ ಹಾಕುತ್ತಿದ್ದರು. ಕೊರೋನಾ ವೈರಸ್ ಮತ್ತೆ ಹಬ್ಬಬಾರದು ಎಂದು ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.ಆದರೆ ಅವರ ಜತೆಗೆ ಕೆಲವರು ಪುಂಡಾಟಿಕೆ ನಡೆಸಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೆಹಲಿಯ ನಿಜಾಮುದ್ದೀನ್ ಪ್ರಕರಣ ಗಂಭೀರವಾದ ಬಳಿಕ ರಾಜ್ಯದ ಎಲ್ಲ ನಗರಳಿಗೆ ತೆರಳಿ  ವೈರಸ್ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಮಾಡುತ್ತಿದ್ದರು. ಆದರೆ ಬೆಂಗಳೂರಿನ ಸಾಧಿಕ್ ನಗರದಲ್ಲಿ ನಮ್ಮ ಆಶಾ ಕಾರ್ಯಕರ್ತೆಯರ ಮೇಲೆ ಮಾಡಿರುವ ಪುಂಡಾಟ ಖಂಡನಿಯ  

ದೇಶದಲ್ಲಿ ಹೋಗಲಾಡಿಸಲು ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದಿಂದ ತೊಲಗಿಸಲು ಸಿಎಂ ಯಡಿಯೂರಪ್ಪನವರು ಸಾಕಷ್ಟು ಶ್ರಮಿಸುತ್ತಿದ್ದಾರೆ. ಆದರೆ ಆಶಾ ಕಾರ್ಯಕರ್ತೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಂಗನವಾಡಿ ಕಾರ್ಯಕರ್ತೆಯರು ದೈರ್ಯದಿಂದ ಜಾಗೃತಿ ಮೂಡಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕರ್ನಾಟಕದಲ್ಲಿ ವೈರಸ್ ಹೊಗಲಾಡಿಲು ಆಶಾ ಕಾರ್ಯಕತ್ರೆಯರು ಹಾಗೂ ಅಂಗನವಾಡಿ ಕಾರ್ಯಕರ್ತರು ಟಾಸ್ಕ್ ಪೋರ್ಸ್ ಸಮಿತಿ ರಚನೆ ಮಾಡಿ ಮನೆ ಮನೆಗೆ ಹೋಗಿ ಜಾಗೃತಿ ಮೂಡಿಸುತ್ತಿದ್ದಾರೆ. ಆದರೆ ಇವರ ಮೇಲೆ ಪುಂಡಾಟಿಕೆ ನಡೆಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದರು.

ಭಾರತದಲ್ಲಿ ಲಾಕ್‌ಡೌನ್ ಆದ ಮೇಲೆ ಗಂ ಹಾಗೂ ಬಾಣಂತಿಯರ ಮನೆ ಮನೆಗೆ ಹೋಗಿ ರೇಷನ್ ಸರಬರಾಜು ಮಾಡುತ್ತಿದ್ದಾರೆ. ಇದರಲ್ಲಿ ಸಮಸ್ಯೆ ಇದ್ದರೆ ತಿಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
Follow Us:
Download App:
  • android
  • ios