ಬೆಂಗಳೂರು(ಮಾ.28): ಭಾರತ ಲಾಕ್‌ಡೌನ್‌ ಇರುವ ಹಿನ್ನಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ರಾಜ್ಯದ ಸಚಿವರಾದ ಆರ್ ಅಶೋಕ್, ಡಾ.ಸುಧಾಕರ್, ಡಾ.ಸುಧಾಕರ್, ಗೋಪಾಲಯ್ಯ ಜೊತೆ ವಿಡಿಯೊ ಸಂವಾದ ನಡೆಸಿದ್ದಾರೆ. 

ಕೊರೋನಾ ವೈರಸ್‌ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್‌ ಇರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಗತ್ಯ ವಸ್ತುಗಳು ಯಾವುದೇ ಕೊರತೆ ಆಗದಂತೆ ಕ್ರಮಕ್ಕೆ ಸೂಚನೆ ನೀಡಿದ್ದಾರೆ. ಲಾಕ್‌ಡೌನ್ ಸಂಪೂರ್ಣವಾಗಿ ಯಶಸ್ವಿ ಆಗುವಂತೆ ನೋಡಿಕೊಳ್ಳಿ ಎಂದು ಜೆಪಿ ನಡ್ಡಾ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಒಂದೇ ದಿನ 6 ಮಂದಿಗೆ ಕೊರೋನಾ, ಸೋಂಕಿತರ ಸಂಖ್ಯೆ 75ಕ್ಕೇರಿಕೆ!

ಸದ್ಯ NDRF ನಿಂದ ಶೇ. 25 ರಷ್ಟು ಹಣ ಬಳಕೆಗೆ ಅವಕಾಶ ನೀಡಿದ್ದೀರಿ. ಆದರೆ ಶೇ. 50 ರಷ್ಟು ಬಳಕೆಗೆ ಅವಕಾಶ ನೀಡುವಂತೆ ಸಚಿವ ಆರ್‌. ಅಶೋಕ್ ಅವರು ಮನವಿ ಮಾಡಿದ್ದಾರೆ. ಜೊತೆಗೆ ಪೊಲೀಸರಿಗೆ ಮಾಸ್ಕ್, ಇತ್ಯಾದಿ ಮೆಡಿಕಲ್ ಫೆಸಿಲಿಟಿ ಹೆಚ್ಚುವರಿ ನೀಡುವಂತೆಯೂ ಕೇಳಿದ್ದಾರೆ.