ಮಂಗಳೂರು(ಮಾ.31): ಆದಿ ಸುಬ್ರಹ್ಮಣ್ಯ ದೇವಸ್ಥಾನದ ಅರ್ಚಕ ಶ್ರೀನಿವಾಸ್‌ ಭಟ್‌ ಮೇಲೆ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆಯಲ್ಲಿ ಇದೀಗ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.

ಮಾ.28ರಂದು ದೇವಸ್ಥಾನದ ಪೂಜೆಗೆ ತೆರಳುವ ಸಮಯದಲ್ಲಿ ಶ್ರೀನಿವಾಸ ಭಟ್‌ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದರು. ಪ್ರಕರಣದಲ್ಲಿ ಸುಬ್ರಹ್ಮಣ್ಯ ಘಟಕದ ಗೃಹರಕ್ಷಕ ವಿಕೇಶ್‌ ಎಂಬವರು ಪರೋಕ್ಷವಾಗಿ ಭಾಗಿಯಾಗಿರುವುದರಿಂದ ಘಟಕಾಧಿಕಾರಿಯ ಶಿಫಾರಸಿನ ಮೇರೆಗೆ ಅವರನ್ನು ಅಮಾನತಿನಲ್ಲಿಡಲಾಗಿದೆ.

ಬಂಟ್ವಾಳ ಯುವಕನ ಟಿಕ್ ಟಾಕ್ ಕೊರೋನಾ ಜಾಗೃತಿ ಅದ್ಭುತ

ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪೊಲೀಸ್‌ ಸಿಬ್ಬಂದಿ ಒಬ್ಬರನ್ನು ಅಮಾನತು ಮಾಡಲಾಗಿದೆ ಎಂದು ಗೃಹರಕ್ಷಕದಳದ ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟ ಡಾ. ಮುರಳೀ ಮೋಹನ್‌ ಚೂಂತಾರು ತಿಳಿಸಿದ್ದಾರೆ.