COVID-19: ಶೇ.50 ರಷ್ಟು KSRTC ನೌಕರರಿಗೆ ರಜೆ ಘೋಷಣೆ!
ಕೊರೋನಾ ವೈರಸ್ ಹರಡುತ್ತಿರುವ ಹಿನ್ನಲೇ ಅತೀ ಹೆಚ್ಚು ಭೀತಿ ಎದುರಿಸುತ್ತಿರುವ ಸಿಬ್ಬಂದಿಗಳು ಎಂದರೆ ಅದು ಕರ್ನಾಟಕ ರಾಜ್ಯ ಸಾರಿಗೆ ನೌಕರರು. ಇದೀಗ ಕೆಎಸ್‌ಎಸ್ಆರ್‌ಟಿಸಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಶೇಕಡಾ 50 ರಷ್ಟು ನೌಕರರಿಗೆ ರಜೆ ಘೋಷಣೆ ಮಾಡಲಾಗಿದೆ. ಇದರ ಜೊತೆಗೆ ವಯಸ್ಸಾಗಿರುವ ನೌಕರರಿಗೆ ರಜೆ ಕೇಳಿದ್ದರೆ ತಕ್ಷಣವೇ ನೀಡಲು ಸೂಚಿಸಲಾಗಿದೆ. ಈ ಕುರಿತು KSRTC ಎಂಡಿ ಮಾತುಗಳು ಇಲ್ಲಿವೆ.
ಬೆಂಗಳೂರು(ಮಾ.23): ಕರ್ನಾಟಕದಲ್ಲಿ ಕರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನಲೆ ಹಲವು ಸೇವೆಗಳು ಬಂದ್ ಆಗಿವೆ. ಸಾರಿಗೆ ಸೇವೆಯನ್ನು ಅರ್ಧಕ್ಕೆ ಇಳಿಸಲಾಗಿದೆ. ಇದೀಗ ಸಾರಿಗೆ ನೌಕರರಿಗೆ ರಜೆ ಘೋಷಿಸಲಾಗಿದೆ. ಕೆಲ ಷರತ್ತುಗಳೊಂದಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಮಗ ನೌಕರರಿಗೆ ರಜೆ ಘೋಷಿಸಿದೆ.
"