ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಜನರು ಕೆಎಂಎಫ್‌ ನಿಗದಿಪಡಿಸಿರುವ ದರವನ್ನಷ್ಟೇ ನೀಡಬೇಕು| ಹೆಚ್ಚಿನ ದರಕ್ಕೆ ಯಾವುದೇ ನಂದಿನಿ ಪಾರ್ಲರ್‌ ಏಜೆಂಟ್‌ ಮಾರಾಟ ಮಾಡಿದರೆ ದೂರು ನೀಡಿ| ನಂದಿನಿ ಪಾರ್ಲರ್‌ಗಳಲ್ಲಿ ಮಾತ್ರ ನಿಗದಿತ ಬೆಲೆಗೆ ಹಾಲು ಖರೀದಿಸಬೇಕು|

ಬೆಂಗಳೂರು(ಮಾ.27): ‘ಭಾರತ ಲಾಕ್‌ಡೌನ್‌’ ಜಾರಿ ಹಿನ್ನೆಲೆಯಲ್ಲಿ ಯಾವುದೇ ನಂದಿನಿ ಪಾರ್ಲರ್‌ ಏಜೆಂಟ್‌ ಹೆಚ್ಚಿನ ಬೆಲೆಗೆ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದರೆ ದೂರು ನೀಡುವಂತೆ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್‌) ತಿಳಿಸಿದೆ. 

Add Asianetnews Kannada as a Preferred SourcegooglePreferred

ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಜನರು ಕೆಎಂಎಫ್‌ ನಿಗದಿಪಡಿಸಿರುವ ದರವನ್ನಷ್ಟೇ ನೀಡಬೇಕು. ಹೆಚ್ಚಿನ ದರಕ್ಕೆ ಯಾವುದೇ ನಂದಿನಿ ಪಾರ್ಲರ್‌ ಏಜೆಂಟ್‌ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದರೆ ಕೆಎಂಎಫ್‌ ಟೋಲ್‌ಫ್ರೀ ನಂ: 18004258030 ಸಂಖ್ಯೆಗೆ ಕರೆ ಮಾಡಿ ದೂರು ನೀಡಬಹುದು. ನಂದಿನಿ ಪಾರ್ಲರ್‌ಗಳಲ್ಲಿ ಮಾತ್ರ ನಿಗದಿತ ಬೆಲೆಗೆ ಹಾಲು ಖರೀದಿಸಬೇಕು ಎಂದು ಕೆಎಂಎಫ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ಎಫೆಕ್ಟ್‌: ಬಡವರಿಗೆ ಮನೆ ಬಾಗಿಲಿಗೇ ಪಡಿತರ ವಿತರಣೆ

ಸಲಹೆ ಸೂಚನೆಗೆ ಜಿಲ್ಲಾ ವ್ಯವಸ್ಥಾಪಕರಿಗೆ ಕರೆ ಮಾಡಿ:

ಬೆಂಗಳೂರು ದಕ್ಷಿಣ ಮತ್ತು ಕೇಂದ್ರ- 7760966825- 77609 60015, ಬೆಂಗಳೂರು ಪೂರ್ವ, ಕೋಲಾರ, ಚಿಕ್ಕಬಳ್ಳಾಪುರ- 77609 64551- 98440 74489, ಬೆಂಗಳೂರು ಉತ್ತರ- 95919 94404- 96060 12536, ಬೆಂಗಳೂರು ದಕ್ಷಿಣ, ಮಂಡ್ಯ, ರಾಮನಗರ- 95138 88244- 95138 88265, ಬೆಂಗಳೂರು ವಾಯವ್ಯ, ತುಮಕೂರು- 77609 65202- 77609 65202, ದಕ್ಷಿಣ ಕನ್ನಡ, ಉಡುಪಿ- 94481 70748, ಮೈಸೂರು- 96202 02341, ಹಾಸನ, ಚಿಕ್ಕಮಗಳೂರು, ಕೊಡಗು- 98865 26885, ವಿಜಯಪುರ, ಬಾಗಲಕೋಟೆ- 95919 99483, ರಾಯಚೂರು, ಬಳ್ಳಾರಿ, ಕೊಪ್ಪಳ- 95919 99529, ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ- 94821-63724, ಬೆಳಗಾಂ ಮಿಲ್‌್ಕ ಯೂನಿಯನ್‌- 77609 69278- 76765 77085, ಕಲಬುರಗಿ, ಬೀದರ್‌, ಯಾದಗಿರಿ- 94489 70785, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ- 77609 80540, ಚಾಮರಾಜನಗರ- 96065 77888.