ಉಡುಪಿ(ಏ.04): ಲಾಕ್‌ಡೌನ್‌ನಿಂದಾಗಿ ಕೆಎಂಎ​ಫ್‌​ನಲ್ಲಿ ಮಾರಾಟವಾಗದೇ ಉಳಿಯುತ್ತಿರುವ ಹಾಲನ್ನು ಏ.3ರಿಂದ 14ರವರೆಗೆ ಉಡುಪಿ ಜಿಲ್ಲೆಯ ನಿರಾಶ್ರಿತರು, ಕೂಲಿ ಕಾರ್ಮಿಕರು, ಬಡವರಿಗೆ ವಿತರಿಸಿ, ಹಾಲು ವ್ಯರ್ಥವಾಗುವುದನ್ನು ತಡೆಯಲು ನಿರ್ಧರಿಸಲಾಗಿದೆ. ಅದರಂತೆ ಶುಕ್ರವಾರ ಸುಮಾರು 5,000 ಲೀಟರ್‌ ಹಾಲಿನ ವಿತರಣೆಗೆ ಉಡುಪಿ ನಗರಸಭೆ ಆವರಣದಲ್ಲಿ ಚಾಲನೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ದ.ಕ.ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್‌ ಹೆಗ್ಡೆ, ಲಾಕ್‌ಡೌನ್‌ನಿಂದ ಹೆಚ್ಚುವರಿಯಾಗಿ ಸಂಗ್ರಹವಾಗುತ್ತಿರುವ ಹಾಲನ್ನು ಅರ್ಥಪೂರ್ಣವಾಗಿ ಬಳಸಿಕೊಳ್ಳಲು ಮತ್ತು ರೈತರಿಂದ ನಿರಂತರವಾಗಿ ಹಾಲು ಖರೀದಿ ಮಾಡಲು ನಿರ್ಧರಿಸಲಾಗಿದೆ. ಜಿಲ್ಲಾಡಳಿತ ಸೂಚಿಸಿದ ಪ್ರದೇಶಗಳಿಗೆ ಕೆಎಂಎಫ್‌ ವಾಹನ ತೆರಳಿ, ಅಧಿಕಾರಿಗಳ ಮೂಲಕ ನಿಗದಿತ ಪ್ರಮಾಣದ ಹಾಲಿನ ಪಾಕೆಟ್‌ಗಳನ್ನು ಬಡವರಿಗೆ ವಿತರಿಸಲಾಗುತ್ತದೆ ಎಂದರು.

ದಿಲ್ಲಿ ಆಸ್ಪತ್ರೆಗಳಲ್ಲಿ ತಬ್ಲೀಘಿ ಸದಸ್ಯರ ಹುಚ್ಚಾಟ, ವೈದ್ಯರ ಜೊತೆಗೆ ದುರ್ವರ್ತನೆ!

ಉಡುಪಿಯ ಬೋರ್ಡ್‌ ಸ್ಕೂಲ್‌ನಲ್ಲಿದ್ದ ನಿರಾಶ್ರಿತರಿಗೆ ಹಾಲು ವಿತರಿಸಲಾಯಿತು. ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆ ಪೌರಾಯುಕ್ತ ಆನಂದ್‌ ಕಲ್ಲೋಳಿಕರ್‌, ಕೆ.ಎಂ.ಎಫ್‌. ಆಡಳಿತ ನಿರ್ದೇಶಕ ಡಾ.ಜಿ.ವಿ.ಹೆಗಡೆ, ಮಾರುಕಟ್ಟೆವಿಭಾಗ ವ್ಯವಸ್ಥಾಪಕ ಡಾ.ರವಿರಾಜ್‌ ಮತ್ತಿತರರಿದ್ದ​ರು.

"