Asianet Suvarna News Asianet Suvarna News

ಗಂಟೆಗೊಂದು ಸೆಲ್ಫಿ ತೆಗೆದು ಸರ್ಕಾರಕ್ಕೆ ಕಳಿಸಬೇಕು!

ಗಂಟೆಗೊಂದು ಸೆಲ್ಫಿ ತೆಗೆದು ಸರ್ಕಾರಕ್ಕೆ ಕಳಿಸಬೇಕು!| ಹೋಂ ಕ್ವಾರಂಟೈನ್‌ನಲ್ಲಿರುವವರಿಗೆ ಸೂಚನೆ| ಕಳಿಸದಿದ್ರೆ ಮಾಸ್‌ ಕ್ವಾರಂಟೈನ್‌ಗೆ ಸ್ಥಳಾಂತರ

Karnataka govt says All those home quarantined in state need to send selfies to govt every hour
Author
Bangalore, First Published Mar 31, 2020, 9:19 AM IST

ಬೆಂಗಳೂರು(ಮಾ.31): ಹೋಮ್‌ ಕ್ವಾರಂಟೈನ್‌ನಲ್ಲಿರುವ ಕೊರೋನಾ ವೈರಸ್‌ ಶಂಕಿತರು ಪ್ರತಿ ಗಂಟೆಗೊಮ್ಮೆ ಸೆಲ್ಫಿ ಫೋಟೋ ತೆಗೆದು ಸರ್ಕಾರಕ್ಕೆ ಮೊಬೈಲ್‌ ಆ್ಯಪ್‌ ಮೂಲಕ ಕಳುಹಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಸೂಚಿಸಿದ್ದಾರೆ.

ಒಂದು ವೇಳೆ ಹಾಗೆ ಕಳುಹಿಸದಿದ್ದರೆ ಅಂಥವರನ್ನು ಮನೆಯಿಂದ ಮಾಸ್‌ ಕ್ವಾರಂಟೈನ್‌ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ಕೊರೋನಾ ಸೋಂಕಿತರನ್ನು ಭಾರತದ ಗಡಿಗೆ ತಳ್ಳಿದ ಪಾಕ್ ಸೇನೆ; ಶತ್ರು ರಾಷ್ಟ್ರದ ಅಸಲಿಯತ್ತು ಬಹಿರಂಗ!

ರಾತ್ರಿ 10ರಿಂದ ಬೆಳಗ್ಗೆ 7 ಗಂಟೆವರೆಗಿನ ಮಲಗುವ ಸಮಯ ಹೊರತುಪಡಿಸಿ ಇನ್ನುಳಿದ ಅವಧಿಯಲ್ಲಿ ಪ್ರತಿ ಗಂಟೆಗೊಮ್ಮೆ ಸೆಲ್ಫಿ ತೆಗೆದು ಕಳುಹಿಸಬೇಕು. ಮೊಬೈಲ್‌ ಫೋಟೋದಲ್ಲಿ ಜಿಪಿಎಸ್‌ ಮಾಹಿತಿಯಿರುತ್ತದೆ. ಫೋಟೋ ಕ್ಲಿಕ್ಕಿಸಿದ ಸ್ಥಳದ ಮಾಹಿತಿ ಸರ್ಕಾರಕ್ಕೆ ಸಿಗುತ್ತದೆ. ಶಂಕಿತರು ಕಳುಹಿಸುವ ಫೋಟೋವನ್ನು ಸರ್ಕಾರದ ಫೋಟೋ ಪರಿಶೀಲನಾ ತಂಡ ನೋಡಲಿದೆ.

ಒಂದು ವೇಳೆ ತಪ್ಪಾಗಿ ಫೋಟೋ ಕಳುಹಿಸಿದ್ದು ಪತ್ತೆಯಾದರೆ ಆಗಲೂ ಮಾಸ್‌ ಕ್ವಾರಂಟೈನ್‌ಗೆ ಸ್ಥಳಾಂತರಿಸಲಾಗುವುದು. ಅಲ್ಲದೆ, ಹೋಮ್‌ ಕ್ವಾರಂಟೈನ್‌ನಲ್ಲಿರುವ ಶಂಕಿತರ ತಪಾಸಣೆಗೆ ಬರುವ ವೈದ್ಯಕೀಯ ಸಿಬ್ಬಂದಿ ಕೂಡ ಫೋಟೋ ತೆಗೆದು ಕಳುಹಿಸಲಿದ್ದಾರೆ. ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಆ್ಯಪ್‌ ಲಭ್ಯವಿದೆ. ಡೌನ್‌ಲೋಡ್‌ ಲಿಂಕ್‌: https://google.com/store/appss/details?id=com.bmc.qrtnwath

Follow Us:
Download App:
  • android
  • ios