Asianet Suvarna News Asianet Suvarna News

ಏ.14ರ ವರೆಗೆ ನೌಕರರ ರಜೆ ವಿಸ್ತರಿಸಿ ಕರ್ನಾಟಕ ಸರ್ಕಾರ ಆದೇಶ

ಕೊರೋನಾ ಮಾಹಾಮಾರಿಯಿಂದ 1ನೇ ತರಗತಿಯಿಂದ ಹಿಡಿದು ದ್ವಿತೀಯಾ ಪರೀಕ್ಷೆಗಳು ಮುಂದೂಡಲಾಗಿದೆ. ಅಲ್ಲದೇ ಶಿಕ್ಷಕರ ರಜೆಯನ್ನು ಸಹ ವಿಸ್ತರಿಸಲಾಗಿದ್ದು, ಇದೀಗ ಇತರೆ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಗುಡ್‌ನ್ಯೂಸ್ ಕೊಟ್ಟಿದೆ.

Karnataka govt-employees-holiday extended till April 14th Due To Corona Lock down
Author
Bengaluru, First Published Mar 30, 2020, 9:09 PM IST

ಬೆಂಗಳೂರು, (ಮಾ.30): ಅಗತ್ಯ ಸೇವೆ ನೀಡುತ್ತಿರುವ ಇಲಾಖೆಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲಾ ಇಲಾಖೆಗಳ ನೌಕರರ ರಜೆಯನ್ನು ವಿಸ್ತರಿಸಲಾಗಿದೆ.

ವಿವಿಧ ಇಲಾಖೆಯ ಬಿ.ಸಿ. ಮತ್ತು ಡಿ ಗ್ರೂಪ್‌ ನೌಕರರ ರಜೆಯನ್ನು ಏಪ್ರಿಲ್ 14ರ ವರೆಗೆ ಮುಂದುವರಿಸಿ ಇಂದು (ಸೋಮವಾರ) ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಆದೇಶ ಹೊರಡಿಸಿದರು.

ಈ ಇಲಾಖೆಗಳು ಹೊರತುಪಡಿಸಿ ಇತರೆ ನೌಕರರಿಗೆ ರಜೆ ಘೋಷಿಸಿದ ಸರ್ಕಾರ

ಈ ಹಿಂದೆ ಮಾರ್ಚ್ 31ರ ವರೆಗೆ ಮಾತ್ರ ರಜೆ ನೀಡಲಾಗಿತ್ತು. ಇದೀಗ ಲಾಕ್‌ಡೌನ್ ಏಪ್ರಿಲ್ 14ರ ವರೆಗೆ ಇರುವುದರಿಂದ ರಜೆಯನ್ನೂ ಸಹ ಮುಂದೂಡಲಾಗಿದೆ.

ಈ ಕೆಳಗೆ ನೀಡಲಾಗಿರುವ 10 ಇಲಾಖೆಗಳು ಹೊರತುಪಡಿಸಿ ಇನ್ನುಳಿದ ಇಲಾಖೆಗೆ ರಜೆ ಅನ್ವಯವಾಗಲಿದೆ.

1.ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ
2. ವೈದ್ಯಕೀಯ ಶಿಕ್ಷಣ ಇಲಾಖೆ
3. ಒಳಾಡಳಿತ ಇಲಾಖೆ
4. ಕಂದಾಯ ಇಲಾಖೆ
5. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ
6. ನಗರಾಭಿವೃದ್ಧಿ
7. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ
8.ವಾರ್ತಾ ಮತ್ತು ಸಾರ್ವಜನಕಿಕ ಸಂಪರ್ಕ ಇಲಾಖೆ
9. ಸಾರಿಗೆ
10. ಇಂಧನ
ಈ ಮೇಲಿನ ಎಲ್ಲಾ ಇಲಾಖೆಗಳನ್ನ ಹೊರತುಪಡಿಸಿ ಇನ್ನುಳಿದು ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗ್ರೂಪ್-ಬಿ,ಸಿ ಮತ್ತು ಡಿ ಅಧಿಕಾರಿ ಮತ್ತು ನೌಕರರಿಗೆ ದಿನಾಂಕ 24-3-2020ರಿಂದ ಮಾ. 31ರ ವರೆಗೆ ಕಚೇರಿಗೆ ರಜೆ ಘೋಷಿಸಲಾಗಿದೆ. 

Follow Us:
Download App:
  • android
  • ios