ಬೆಂಗಳೂರು, (ಮೇ.02):  ಕೊರೋನಾ ವೈರಸ್ ಸೋಂಕು ತಡೆಗೆ ದೇಶದಾದ್ಯಂತ ಲಾಕ್‌ಡೌನ್ ಇರುವ ಕಾರಣ ಕರ್ನಾಟಕ ಪಠ್ಯ ಕ್ರಮದ ಓದುತ್ತಿರುವ 7ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ಪಾಸ್ ಮಾಡಲು ಸರ್ಕಾರ ತೀರ್ಮಾನಿಸಿದೆ.

ಈ ಬಗ್ಗೆ  ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಸುರೇಶ್ ಕುಮಾರ್ ಅವರು ಇಂದು (ಗುರುವಾರ) ಫೇಸ್‌ಬುಕ್ ಲೈವ್‌ನಲ್ಲಿ ಮಾಹಿತಿ ನೀಡಿದರು. 7ರಿಂದ 9ನೇ ತರಗತಿ ವಿದ್ಯಾರ್ಥಿಗಳನ್ನು ಯಾವುದೇ ಷರತ್ತು ಇಲ್ಲದೇ ಮುಂದಿನ ತರಗತಿಗೆ  ನೀಡಲಾಗುವುದು ಎಂದು ಹೇಳಿದರು.

CBSE 1ರಿಂದ 8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್: ಕೊರೋನಾದಿಂದ ಸಿಕ್ತು ಗ್ರೇಸ್ 

ಇನ್ನು ರಜಾ ಅವಧಿಯಲ್ಲಿ ಆ ವಿದ್ಯಾರ್ಥಿಯ ಕಲಿಕೆ ಮಟ್ಟ ಉತ್ತಮಪಡಿಸೋಕೆ ಶಾಲೆಗಳು ಪ್ರಯತ್ನಿಸಬೇಕು. ಮುಂದಿನ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮತ್ತೆ ಪರೀಕ್ಷೆ ಕೊಟ್ಟು ಆ ವಿದ್ಯರ್ಥಿಯನ್ನು ಪಾಸ್ ಮಾಡುವ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
 

ಮುಖ್ಯವಾಗಿ SSLC ಮತ್ತು ದ್ವಿತೀಯಾ ಪಿಯುಸಿ ಪರೀಕ್ಷಗಳು ನಡೆಯಲಿವೆ. ಏಪ್ರಿಲ್ 14ರ ನಂತರ ದಿನಾಂಕ ಪ್ರಕಟಿಸಲಾಗುವುದು ಎಂದರು. ಈಗಾಗಲೇ 1 ರಿಂದ 6ನೇ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ಪಾಸ್ ಮಾಡಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

ಅಷ್ಟೇ ಅಲ್ಲದೇ CBSE 7 ರಿಂದ 9ನೇ ತರಗತಿಯ ವಿದ್ಯಾರ್ಥಿಗಳನ್ನು ಪರೀಕ್ಷೆ ನಡೆಸದೇ ಪಾಸ್ ಮಾಡಲಾಗಿದೆ.

ಏಪ್ರಿಲ್ 02ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ